ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಧನಕ್ಕೆ ಐದು ದಿನ ಮೊದಲು ಹೀಗೆ ಹೇಳ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅಲ್ಲಾಹನ ಬಳಿ ತಮಗಿರುವ ಸ್ಥಾನಮಾನದ ಬಗ್ಗೆ ವಿವರಿಸುತ್ತಾರೆ. ಅವರು ಅಲ್ಲಾಹನ ಅತ್ಯಂತ ಆಪ್ತರ ಸ್ಥಾನವನ್...
ಅಬೂ ಹಯ್ಯಾಜ್ ಅಸದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "...
ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರಿಗೆ (ಸಹಾಬಿಗಳಿಗೆ) ಆದೇಶಿಸುವುದೇನೆಂದರೆ, ಯಾವುದೇ ಪ್ರತಿಮೆಯನ್ನು — ಅಂದರೆ ಆತ್ಮವಿರುವ ಜೀವಿಯ...
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶಕುನ ನಂಬುವುದ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಶಕುನದಲ್ಲಿ ನಂಬಿಕೆಯಿಡುವುದರ ಬಗ್ಗೆ ಎಚ್ಚರಿಸಿದ್ದಾರೆ. ಶಕುನ ಎಂದರೆ ಹಕ್ಕಿ, ಪ್ರಾಣಿ, ಅಂಗವಿಕಲರು, ಕೆಲವು...
ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶ...
ಕೆಲವು ಕಾರ್ಯಗಳನ್ನು ಮಾಡುವವರು "ಅವರು ನಮ್ಮಲ್ಲಿ ಸೇರಿದವರಲ್ಲ" ಎಂದು ಹೇಳುವ ಮೂಲಕ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಎಚ್ಚರಿಕೆ ನೀಡಿದ್ದಾರೆ....
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದ್ವಾ (ಅಂಟುರೋಗ) ಇಲ್ಲ ಮತ್ತು...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹನ ವಿಧಿ-ನಿರ್ಣಯವಿಲ್ಲದೆ ಒಬ್ಬರಿಂದ ಇನ್ನೊಬ್ಬರಿಗೆ ಸ್ವಯಂ ಹರಡುತ್ತದೆ ಎಂದು ಅಜ್...
ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಧನಕ್ಕೆ ಐದು ದಿನ ಮೊದಲು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮ ಪೈಕಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುವುದರಿಂದ ನಾನು ಅಲ್ಲಾಹನ ಮುಂದೆ ಸಂಪೂರ್ಣ ವಿಮುಕ್ತನಾಗಿದ್ದೇನೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಂಡಂತೆ ನನ್ನನ್ನು ಕೂಡ ಅವನ ಆಪ್ತಮಿತ್ರನನ್ನಾಗಿ ಮಾಡಿಕೊಂಡಿದ್ದಾನೆ. ನಾನು ನನ್ನ ಸಮುದಾಯದಲ್ಲಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರೆ, ಅಬೂಬಕರ್ ರನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದೆ, ಎಚ್ಚರಾ! ನಿಶ್ಚಯವಾಗಿಯೂ ನಿಮಗಿಂತ ಮೊದಲಿನವರು ಅವರ ಪ್ರವಾದಿಗಳ ಮತ್ತು ಮಹಾಪುರುಷರ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಎಚ್ಚರಾ! ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಳ್ಳಬೇಡಿ. ನಾನು ನಿಮಗೆ ಅದನ್ನು ವಿರೋಧಿಸುತ್ತೇನೆ."
ಅಬೂ ಹಯ್ಯಾಜ್ ಅಸದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲೀ ಬಿನ್ ಅಬೂ ತಾಲಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ನನ್ನೊಂದಿಗೆ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಕಳುಹಿಸಿದ ಅದೇ ಕೆಲಸಕ್ಕಾಗಿ ನಾನು ತಮ್ಮನ್ನು ಕಳುಹಿಸಲೇ? ತಾವು ಒಂದೇ ಒಂದು ಪ್ರತಿಮೆಯನ್ನು ಅಳಿಸದೆ ಬಿಡಬಾರದು ಮತ್ತು ಎತ್ತರಿಸಲ್ಪಟ್ಟ ಒಂದೇ ಒಂದು ಸಮಾಧಿಯನ್ನು ನೆಲಸಮ ಮಾಡದೆ ಬಿಡಬಾರದು."
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್, ಶಕುನ ನಂಬುವುದು ಶಿರ್ಕ್." (ಅವರು ಇದನ್ನು ಮೂರು ಬಾರಿ ಹೇಳಿದರು). "ಆದರೆ ನಮ್ಮಲ್ಲಿ (ಶಕುನ ನಂಬದವರು) ಯಾರೂ ಇಲ್ಲ. ಆದರೆ ಅಲ್ಲಾಹು ಅದನ್ನು ತವಕ್ಕುಲ್ (ಭರವಸೆ) ನಿಂದ ನಿವಾರಿಸುತ್ತಾನೆ."
ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶಕುನ ನೋಡುವವನು, ಶಕುನ ನೋಡಿಸುವವನು, ಭವಿಷ್ಯ ನೋಡುವವನು (ಜ್ಯೋತಿಷಿ), ಭವಿಷ್ಯ ನೋಡಿಸುವವನು, ಮಾಟಮಾಡುವವನು, ಮಾಟ ಮಾಡಿಸುವವನು, ಗಂಟು ಕಟ್ಟುವವನು ಮುಂತಾದವರು ನಮ್ಮಲ್ಲಿ ಸೇರಿದವರಲ್ಲ. ಯಾರು ಜ್ಯೋತಿಷಿಯ ಬಳಿಗೆ ಹೋಗಿ ಅವನು ಹೇಳಿದ ಮಾತಿನಲ್ಲಿ ನಂಬಿಕೆಯಿಡುತ್ತಾನೋ ಅವನು ಮುಹಮ್ಮದರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವತೀರ್ಣವಾದ ಸಂದೇಶವನ್ನು ನಿಷೇಧಿಸಿದ್ದಾನೆ."
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದ್ವಾ (ಅಂಟುರೋಗ) ಇಲ್ಲ ಮತ್ತು ತಿಯರ (ಅಪಶಕುನ) ಇಲ್ಲ. ಆದರೆ ಫಅಲ್ (ಶುಭಶಕುನ) ನನಗಿಷ್ಟವಾಗಿದೆ." ಅವರೊಡನೆ ಕೇಳಲಾಯಿತು: "ಶುಭಶಕುನ ಎಂದರೇನು?" ಅವರು ಉತ್ತರಿಸಿದರು: "ಒಳ್ಳೆಯ ಮಾತು."
ಝೈದ್ ಬಿನ್ ಖಾಲಿದ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹುದೈಬಿಯಾದಲ್ಲಿ ನಮ್ಮೊಡನೆ ಫಜ್ರ್ ನಮಾಝ್ ನಿರ್ವಹಿಸಿದರು. ಅದರ ಹಿಂದಿನ ರಾತ್ರಿ ಮಳೆ ಸುರಿದಿತ್ತು. ನಮಾಝ್ ನಿರ್ವಹಿಸಿದ ಬಳಿಕ ಅವರು ಜನರ ಕಡೆಗೆ ತಿರುಗಿ ಕೇಳಿದರು: "ನಿಮ್ಮ ಪರಿಪಾಲಕನು (ಅಲ್ಲಾಹು) ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳಿದರು: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಹೇಳಿದರು: "(ಅಲ್ಲಾಹು ಹೇಳಿದನು): ನನ್ನ ದಾಸರಲ್ಲಿ ಕೆಲವರು ಸತ್ಯವಿಶ್ವಾಸಿಗಳಾಗಿ ಮತ್ತು ಕೆಲವರು ಸತ್ಯನಿಷೇಧಿಗಳಾಗಿ ಬೆಳಗನ್ನು ಪ್ರವೇಶಿಸಿದ್ದಾರೆ. ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನಲ್ಲಿ ವಿಶ್ವಾಸವಿಟ್ಟನು ಮತ್ತು ನಕ್ಷತ್ರಗಳನ್ನು ನಿಷೇಧಿಸಿದನು. ಇಂತಿಂತಹ ನಕ್ಷತ್ರದ ಉದಯದಿಂದ ಮಳೆ ಸುರಿದಿದೆ ಎಂದು ಹೇಳಿದವನು ನನ್ನನ್ನು ನಿಷೇಧಿಸಿದನು ಮತ್ತು ನಕ್ಷತ್ರಗಳಲ್ಲಿ ವಿಶ್ವಾಸವಿಟ್ಟನು."
ಉಕ್ಬ ಬಿನ್ ಆಮಿರ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಒಂದು ಗುಂಪು ಜನರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರು ಒಂಬತ್ತು ಮಂದಿಯಿಂದ ನಿಷ್ಠೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಆದರೆ ಒಬ್ಬರಿಂದ ಅದನ್ನು ತಡೆಹಿಡಿದರು. ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಒಂಬತ್ತು ಮಂದಿಯಿಂದ ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸಿದಿರಿ. ಆದರೆ ಇವನನ್ನು ಬಿಟ್ಟಿರಲ್ಲವೇ?" ಅವರು ಹೇಳಿದರು: "ಅವನು ತಾಯಿತ ಧರಿಸಿದ್ದಾನೆ." ಆಗ ಆತ ಕೈಯನ್ನು ಒಳಗೆ ತೂರಿಸಿ ಅದನ್ನು ತುಂಡು ಮಾಡಿದನು. ಪ್ರವಾದಿಯವರು ಆತನಿಂದ ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸುತ್ತಾ ಹೇಳಿದರು: "ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು."
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಮಂತ್ರಗಳು, ತಾಯಿತಗಳು ಮತ್ತು ತಿವ್ಲ (ಪತಿ-ಪತ್ನಿಯರಲ್ಲಿ ಪ್ರೀತಿ ಮೂಡಿಸುವ ತಂತ್ರ) ದೇವಸಹಭಾಗಿತ್ವ (ಶಿರ್ಕ್) ಆಗಿದೆ."
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಪತ್ನಿಯರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಭವಿಷ್ಯ ನುಡಿಯುವವನ ಬಳಿಗೆ ಹೋಗಿ, ಅವನೊಡನೆ ಏನಾದರೂ ವಿಷಯದ ಬಗ್ಗೆ ಕೇಳಿದರೆ ಅವನ ನಲ್ವತ್ತು ದಿನಗಳ ನಮಾಝ್ ಸ್ವೀಕರಿಸಲ್ಪಡುವುದಿಲ್ಲ."
ಇಬ್ನ್ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಹೀಗೆ ಹೇಳುವುದನ್ನು ಅವರು ಕೇಳಿದರು: “ಕಅಬಾಲಯದ ಮೇಲಾಣೆ!” ಆಗ ಇಬ್ನ್ ಉಮರ್ ಹೇಳಿದರು: “ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವಂತಿಲ್ಲ. ಏಕೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವವನು ಸತ್ಯನಿಷೇಧಿಯಾದನು ಅಥವಾ ಬಹುದೇವವಿಶ್ವಾಸಿಯಾದನು.”
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಶ್‌ಅರಿಗಳಲ್ಲಿ ಸೇರಿದ ಕೆಲವು ಜನರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದೆ. ಅವರು ಹೇಳಿದರು: "ಅಲ್ಲಾಹನಾಣೆ! ನಿಮಗೆ ಸವಾರಿ ಮಾಡಲು ನಾನು ಏನೂ ನೀಡುವುದಿಲ್ಲ. ನನ್ನ ಬಳಿ ನೀವು ಸವಾರಿ ಮಾಡುವಂತದ್ದು ಏನೂ ಇಲ್ಲ." ನಂತರ, ಅಲ್ಲಾಹು ಇಚ್ಛಿಸಿದಷ್ಟು ಕಾಲ ನಾವು ಕಾದು ಕುಳಿತೆವು. ಆಗ ಅವರ ಬಳಿಗೆ ಕೆಲವು ಒಂಟೆಗಳನ್ನು ತರಲಾಯಿತು. ಅವರು ನಮಗೆ ಮೂರು ಒಂಟೆಗಳನ್ನು ನೀಡಲು ಆದೇಶಿಸಿದರು. ನಾವು ಅಲ್ಲಿಂದ ಹೊರಟಾಗ ನಾವು ಪರಸ್ಪರ ಹೇಳಿದೆವು: "ಅಲ್ಲಾಹು ನಮಗೆ ಸಮೃದ್ಧಿಯನ್ನು ನೀಡಲಾರ. ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದ್ದೆವು. ಆದರೆ ಅವರು ನಮಗೆ ಸವಾರಿ ಮಾಡಲು ಏನೂ ನೀಡುವುದಿಲ್ಲವೆಂದು ಆಣೆ ಮಾಡಿ, ನಂತರ ನಮಗೆ ಸವಾರಿ ಮಾಡಲು ನೀಡಿದರು." ಅಬೂ ಮೂಸಾ ಹೇಳಿದರು: ಆದ್ದರಿಂದ, ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಅವರಿಗೆ ವಿಷಯವನ್ನು ತಿಳಿಸಿದೆವು. ಆಗ ಅವರು ಹೇಳಿದರು: "ನಿಮಗೆ ಸವಾರಿ ಮಾಡಲು ನೀಡಿದ್ದು ನಾನಲ್ಲ. ಬದಲಿಗೆ, ನಿಮಗೆ ಸವಾರಿ ಮಾಡಲು ನೀಡಿದ್ದು ಅಲ್ಲಾಹು. ನಿಶ್ಚಯವಾಗಿಯೂ, ಅಲ್ಲಾಹನಾಣೆ! ಅಲ್ಲಾಹು ಇಚ್ಛಿಸಿದರೆ, ನಾನು ಒಂದು ಕಾರ್ಯವನ್ನು ಮಾಡುತ್ತೇನೆಂದು ಪ್ರತಿಜ್ಞೆ ಮಾಡಿ, ನಂತರ ನನಗೆ ಇನ್ನೊಂದು ಕಾರ್ಯವು ಅದಕ್ಕಿಂತ ಉತ್ತಮವೆಂದು ಕಂಡರೆ, ನಾನು ನನ್ನ ಪ್ರತಿಜ್ಞೆಗೆ ಪರಿಹಾರ ನೀಡಿ, ಆ ಉತ್ತಮವಾದ ಕಾರ್ಯವನ್ನು ಮಾಡುತ್ತೇನೆ."
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಇಚ್ಛಿಸಿದ್ದು ಮತ್ತು ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಬೇಡಿ. ಬದಲಿಗೆ, ಅಲ್ಲಾಹು ಇಚ್ಛಿಸಿದ್ದು ನಂತರ ಇಂತಿಂತಹವನು ಇಚ್ಛಿಸಿದ್ದು ಎಂದು ಹೇಳಿರಿ."