- "ಅಲ್ಲಾಹು ಇಚ್ಛಿಸಿದ್ದು ಮತ್ತು ಇಂತಿಂತಹವನು ಇಚ್ಛಿಸಿದ್ದು" ಮುಂತಾದ ಅಲ್ಲಾಹನ ಜೊತೆಗೆ "ವ" (ಮತ್ತು) ಎಂಬ ಪದಬಳಕೆಯಿರುವ ಮಾತುಗಳನ್ನು ಹೇಳುವುದು ನಿಷಿದ್ಧವಾಗಿದೆ. ಏಕೆಂದರೆ, ಇದು ಪದಬಳಕೆ ಮತ್ತು ಮಾತುಗಳಲ್ಲಿ ಉಂಟಾಗುವ ಶಿರ್ಕ್ (ದೇವ ಸಹಭಾಗಿತ್ವ) ಆಗಿದೆ.
- "ಅಲ್ಲಾಹು ಇಚ್ಛಿಸಿದ್ದು ನಂತರ ಇಂತಿಂತಹವನು ಇಚ್ಛಿಸಿದ್ದು" ಮುಂತಾದ "ಸುಮ್ಮ" (ನಂತರ) ಎಂಬ ಪದಬಳಕೆಯಿರುವ ಮಾತುಗಳನ್ನು ಹೇಳಲು ಅನುಮತಿಯಿದೆ.
- ಅಲ್ಲಾಹನಿಗೆ ಇಚ್ಛೆ ಇದೆಯೆಂದು ದೃಢೀಕರಿಸಲಾಗಿದೆ. ಹಾಗೆಯೇ ಮನುಷ್ಯನಿಗೂ ಇಚ್ಛೆ ಇದೆಯೆಂದು ದೃಢೀಕರಿಸಲಾಗಿದೆ. ಮನುಷ್ಯನ ಇಚ್ಛೆಯು ಅಲ್ಲಾಹನ ಇಚ್ಛೆಯ ನಂತರ ಬರುತ್ತದೆಯೆಂದು ತಿಳಿಸಲಾಗಿದೆ.
- ಅಲ್ಲಾಹನ ಇಚ್ಛೆಯಲ್ಲಿ ಸೃಷ್ಟಿಗಳನ್ನು ಸಹಭಾಗಿಗಳಾಗಿ ಮಾಡುವುದನ್ನು ವಿರೋಧಿಸಲಾಗಿದೆ. ಅದು ಮಾತಿನ ಮೂಲಕವಾದರೂ ಸಹ.
- ವ್ಯಾಪ್ತಿಯಲ್ಲಿ ಮತ್ತು ಪ್ರಯೋಗದಲ್ಲಿ ಮನುಷ್ಯನ ಇಚ್ಛೆಯು ಅಲ್ಲಾಹನ ಇಚ್ಛೆಗೆ ಸಮಾನವಾಗಿದೆ, ಅಥವಾ ಮನುಷ್ಯನಿಗೆ ಸ್ವತಂತ್ರ ಇಚ್ಛೆಯಿದೆಯೆಂದು ನಂಬುವುದು ದೊಡ್ಡ ಶಿರ್ಕ್ (ಸಹಭಾಗಿತ್ವ) ಆಗಿದೆ. ಆದರೆ, ಅದು ಅಲ್ಲಾಹನ ಇಚ್ಛೆಯ ಕೆಳಗಿದೆಯೆಂದು ನಂಬುವುದು ಸಣ್ಣ ಶಿರ್ಕ್ (ಸಹಭಾಗಿತ್ವ) ಆಗಿದೆ.