ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ...
ಪ್ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಆರಾಧನೆಗಳ ಪೈಕಿ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಶ್ರೇಷ್ಠವಾದ ಬೇರೆ ವಿಷಯ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾ...
ಧರ್ಮದಲ್ಲಿ ಮತ್ತು ಆಜ್ಞಾನುಸರಣೆ ಮಾಡುವುದರಲ್ಲಿ ಸ್ಥಿರವಾಗಿ ನಿಲ್ಲಿಸಲು ಮತ್ತು ವಕ್ರ ಮಾರ್ಗ ಹಾಗೂ ದುರ್ಮಾರ್ಗಗಳಿಂದ ದೂರವಿರಿಸಲು ಅಲ್ಲಾಹನಲ್ಲಿ ಬೇಡುವುದು ಪ್ರವಾದಿಯವರು (ಅವರ ಮೇಲ...
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ: ಹೊಸ ಬಟ್ಟೆಯನ್ನು ಬಹಳ ಸಮಯದವರೆಗೆ ಬಳಸಿದರೆ ಅದು ಹಳತಾಗುವಂತೆ‌ ಮುಸಲ್ಮಾನನ ಹೃದಯದಲ್ಲಿರ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ದಾಸನು ತನ್ನ ಒಡೆಯನಿಗೆ (ಅಲ್ಲ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ದಾಸನು ಸಾಷ್ಟಾಂಗ ಮಾಡುವಾಗ ತನ್ನ ಒಡೆಯನಿಗೆ (ಅಲ್ಲಾಹನಿಗೆ) ಅತಿನಿಕಟನಾಗುತ್ತಾನೆ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಸಮಗ್ರವಾದ ಅರ್ಥವನ್ನು ಹೊಂದಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದ್ದರು. ಅವುಗಳಲ್ಲೊಂದು ಹೀಗಿದೆ: "ಓ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಓ ಹೃದಯಗಳನ್ನು ತಿರುಗಿಸುವವನೇ! ನನ್ನ ಹೃದಯವನ್ನು ನಿನ್ನ ಧರ್ಮದಲ್ಲಿ ದೃಢವಾಗಿ ನಿಲ್ಲಿಸು" ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪದೇ ಪದೇ ಪ್ರಾರ್ಥಿಸುತ್ತಿದ್ದರು. ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನಾವು ನಿಮ್ಮಲ್ಲಿ ಮತ್ತು ನೀವು ತಂದ ಧರ್ಮದಲ್ಲಿ ವಿಶ್ವಾಸವಿಟ್ಟಿದ್ದೇವೆ. ಆದರೂ ನಿಮಗೆ ನಮ್ಮ ಬಗ್ಗೆ ಭಯವೇ?" ಅವರು ಉತ್ತರಿಸಿದರು: "ಹೌದು, ನಿಶ್ಚಯವಾಗಿಯೂ ಹೃದಯಗಳು ಅಲ್ಲಾಹನ ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಇವೆ. ಅವನು ಇಚ್ಛಿಸುವಂತೆ ಅವುಗಳನ್ನು ತಿರುಗಿಸುತ್ತಾನೆ."

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ನಿಮ್ಮ ಬಟ್ಟೆ ಹಳತಾಗುವಂತೆ ನಿಮ್ಮ ಹೃದಯದಲ್ಲಿರುವ ವಿಶ್ವಾಸವು ಕೂಡ ಹಳತಾಗುತ್ತದೆ. ಆದ್ದರಿಂದ ನಿಮ್ಮ ಹೃದಯದಲ್ಲಿರುವ ವಿಶ್ವಾಸವನ್ನು ನವೀಕರಿಸಲು ನೀವು ಅಲ್ಲಾಹನಲ್ಲಿ ಬೇಡಿಕೊಳ್ಳಿರಿ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ದಾಸನು ತನ್ನ ಒಡೆಯನಿಗೆ (ಅಲ್ಲಾಹನಿಗೆ) ಅತ್ಯಂತ ನಿಕಟನಾಗುವುದು ಸಾಷ್ಟಾಂಗ ಮಾಡುವಾಗ. ಆದ್ದರಿಂದ ನೀವು ಪ್ರಾರ್ಥಿಸುವುದನ್ನು ಹೆಚ್ಚಿಸಿರಿ.”

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ ಹೀಗಿತ್ತು: "ಓ ಅಲ್ಲಾಹ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು."

ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಕರ್ಮಗಳಲ್ಲಿ ಶ್ರೇಷ್ಠವಾದ, ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ಪರಿಶುದ್ಧವಾದ, ನಿಮ್ಮ ಪದವಿಗಳಲ್ಲಿ ಅತಿ ಎತ್ತರವಾದ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಯಿಸುವುದಕ್ಕಿಂತಲೂ ಉತ್ತಮವಾದ, ನೀವು ನಿಮ್ಮ ಶತ್ರುವಿನೊಂದಿಗೆ ಹೋರಾಡಿ ನೀವು ಅವರನ್ನು ಮತ್ತು ಅವರು ನಿಮ್ಮನ್ನು ಕೊಲ್ಲುವುದಕ್ಕಿಂತಲೂ ಉತ್ತಮವಾದ ಒಂದು ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರು ಹೇಳಿದರು: "ತಿಳಿಸಿಕೊಡಿ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹನ ಸ್ಮರಣೆ."

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ರಾತ್ರಿಗಳಲ್ಲೂ ಮಲಗಲು ಹೊರಡುವಾಗ ತಮ್ಮ ಎರಡು ಅಂಗೈಗಳನ್ನು ಜೋಡಿಸುತ್ತಿದ್ದರು. ನಂತರ ಅದಕ್ಕೆ ಮೂರು ಬಾರಿ ಉಗಿದು "ಕುಲ್ ಹುವಲ್ಲಾಹು ಅಹದ್", "ಕುಲ್ ಅಊದು ಬಿರಬ್ಬಿಲ್ ಫಲಕ್" ಮತ್ತು "ಕುಲ್ ಅಊದು ಬಿರಬ್ಬಿ ನ್ನಾಸ್" ಪಠಿಸುತ್ತಿದ್ದರು. ನಂತರ ದೇಹದಲ್ಲಿ ತಲುಪಲು ಸಾಧ್ಯವಾಗುವ ಎಲ್ಲಾ ಭಾಗಗಳನ್ನು ಕೈಗಳಿಂದ ಸವರುತ್ತಿದ್ದರು. ಅವರು ಮೊದಲು ತಲೆಯಿಂದ ಆರಂಭಿಸುತ್ತಿದ್ದರು, ನಂತರ ಮುಖವನ್ನು ಸವರುತ್ತಿದ್ದರು, ನಂತರ ದೇಹದ ಮುಂಭಾಗವನ್ನು ಸವರುತ್ತಿದ್ದರು. ಅವರು ಇದನ್ನು ಮೂರು ಸಲ ಆವರ್ತಿಸುತ್ತಿದ್ದರು."

ಶದ್ದಾದ್ ಬಿನ್ ಔಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ ಯಾವುದೆಂದರೆ ನೀವು ಹೀಗೆ ಪಠಿಸುವುದು: ಓ ಅಲ್ಲಾಹ್! ನೀನೇ ನನ್ನ ಪರಿಪಾಲಕ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನಾನು ನನಗೆ ಸಾಧ್ಯವಾದಷ್ಟು ನಿನ್ನ ಕರಾರು ಮತ್ತು ವಾಗ್ದಾನಕ್ಕೆ ನಿಷ್ಠನಾಗಿರುತ್ತೇನೆ. ನಾನು ಮಾಡಿದ ಪಾಪಗಳ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನ್ನ ಮೇಲಿರುವ ನಿನ್ನ ಅನುಗ್ರಹಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಮಾಡಿದ ಪಾಪಗಳನ್ನೂ ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು. ಏಕೆಂದರೆ, ನಿಶ್ಚಯವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ." ಅವರು (ಪ್ರವಾದಿ) ಮುಂದುವರಿದು ಹೇಳಿದರು: "ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ಹಗಲಿನಲ್ಲಿ ಪಠಿಸಿ, ನಂತರ ಅದೇ ದಿನ ಸಂಜೆಯಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ. ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ರಾತ್ರಿಯಲ್ಲಿ ಪಠಿಸಿ, ನಂತರ ಬೆಳಗಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ."

ಅಬ್ದುಲ್ಲಾ ಬಿನ್ ಖುಬೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಮಳೆ ಮತ್ತು ತೀವ್ರ ಕತ್ತಲೆಯ ರಾತ್ರಿ ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗಾಗಿ ನಮಾಝ್ ಮಾಡಲು ಹುಡುಕುತ್ತಾ ಹೊರಟೆವು. ನಾನು ಅವರನ್ನು ಕಂಡಾಗ, ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ನಂತರ ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ಅವರು ಹೇಳಿದರು: “ಹೇಳು.” ನಾನು ಕೇಳಿದೆ: "ನಾನು ಏನು ಹೇಳಬೇಕು?" ಅವರು ಹೇಳಿದರು: ಸಂಜೆಯಾಗುವಾಗ ಮತ್ತು ಬೆಳಗಾಗುವಾಗ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಮತ್ತು ರಕ್ಷೆ ಬೇಡುವ ಎರಡು ಸೂರಗಳನ್ನು (ಸೂರ ಫಲಕ್ ಮತ್ತು ಸೂರ ನಾಸ್) ಮೂರು ಬಾರಿ ಪಠಿಸು. ಅದು ನಿನಗೆ ಎಲ್ಲದ್ದಕ್ಕೂ ಸಾಕಾಗುತ್ತದೆ."

ಸಮುರ ಬಿನ್ ಜುಂದುಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾಲ್ಕು ವಚನಗಳು ಅಲ್ಲಾಹನಿಗೆ ಅತ್ಯಂತ ಇಷ್ಟವಾಗಿವೆ: ಸು‌ಬ್‌ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮತ್ತು ಅಲ್ಲಾಹು ಅಕ್ಬರ್. ನೀನು ಯಾವುದರಿಂದ ಪ್ರಾರಂಭಿಸಿದರೂ ತೊಂದರೆಯಿಲ್ಲ."

ಅಬೂ ಅಯ್ಯೂಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಹತ್ತು ಬಾರಿ — ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಆಧಿಪತ್ಯವು ಅವನದ್ದು ಮತ್ತು ಸ್ತುತಿಯು ಅವನಿಗೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ) ಎಂದು ಹೇಳುತ್ತಾನೋ, ಅವನು ಇಸ್ಮಾಯೀಲರ ಸಂತಾನದಲ್ಲಿ ಸೇರಿದ ನಾಲ್ಕು ಗುಲಾಮರನ್ನು ವಿಮೋಚನೆಗೊಳಿಸಿದವನಂತೆ ಆಗುತ್ತಾನೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾಲಗೆಯಲ್ಲಿ ಹಗುರವಾದ, ತಕ್ಕಡಿಯಲ್ಲಿ ಭಾರವಾದ ಮತ್ತು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಇಷ್ಟವಾದ ಎರಡು ವಚನಗಳು: ಸುಬ್‌ಹಾನಲ್ಲಾಹಿಲ್ ಅಝೀಮ್ ಮತ್ತು ಸುಬ್‌ಹಾನಲ್ಲಾಹಿ ವಬಿಹಮ್ದಿಹೀ.”