“ನಾಲಗೆಯಲ್ಲಿ ಹಗುರವಾದ, ತಕ್ಕಡಿಯಲ್ಲಿ ಭಾರವಾದ ಮತ್ತು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಇಷ್ಟವಾದ ಎರಡು ವಚನಗಳು...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾಲಗೆಯಲ್ಲಿ ಹಗುರವಾದ, ತಕ್ಕಡಿಯಲ್ಲಿ ಭಾರವಾದ ಮತ್ತು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಇಷ್ಟವಾದ ಎರಡು ವಚನಗಳು: ಸುಬ್‌ಹಾನಲ್ಲಾಹಿಲ್ ಅಝೀಮ್ ಮತ್ತು ಸುಬ್‌ಹಾನಲ್ಲಾಹಿ ವಬಿಹಮ್ದಿಹೀ.”
متفق عليه
ವಿವರಣೆ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮನುಷ್ಯನು ಯಾವುದೇ ಕಷ್ಟವಿಲ್ಲದೆ ಮತ್ತು ಎಲ್ಲಾ ಸಮಯಗಳಲ್ಲೂ ಉಚ್ಛರಿಸಬಹುದಾದ ಎರಡು ವಚನಗಳಿದ್ದು, ಅವು ತಕ್ಕಡಿಯಲ್ಲಿ ತೂಗುವಾಗ ಮಹಾ ಪ್ರತಿಫಲವನ್ನು ಹೊಂದಿರುತ್ತವೆ ಮತ್ತು ಪರಮ ದಯಾಮಯನಾದ ಅಲ್ಲಾಹನಿಗೆ ಅವು ಬಹಳ ಇಷ್ಟವಾಗಿವೆ. ಅವು:
ಸುಬ್‌ಹಾನಲ್ಲಾಹಿಲ್ ಅಝೀಮ್ ಮತ್ತು ಸುಬ್‌ಹಾನಲ್ಲಾಹಿ ವಬಿಹಮ್ದಿಹೀ. ಏಕೆಂದರೆ, ಇವು ಅಲ್ಲಾಹನ ಮಹಾಮಹಿಮೆ ಮತ್ತು ಸಂಪೂರ್ಣತೆಯನ್ನು ವರ್ಣಿಸುವುದರ ಜೊತೆಗೆ ಸರ್ವಶಕ್ತನಾದ ಅವನನ್ನು ಎಲ್ಲಾ ರೀತಿಯ ಕುಂದು-ಕೊರತೆಗಳಿಂದ ಪರಿಶುದ್ಧಗೊಳಿಸುತ್ತವೆ.
Hadeeth benefits
ಅಲ್ಲಾಹನ ಪರಿಶುದ್ಧತೆಯನ್ನು ಹೊಗಳುವ ಮತ್ತು ಅವನನ್ನು ಪ್ರಶಂಸಿಸುವ ಸ್ಮರಣೆಗಳು ಅತಿಶ್ರೇಷ್ಠ ಸ್ಮರಣೆಗಳಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.
ಅಲ್ಲಾಹನಿಗೆ ಮನುಷ್ಯರ ಮೇಲಿರುವ ವಿಶಾಲ ಕರುಣೆಯನ್ನು ಈ ಹದೀಸ್ ವಿವರಿಸುತ್ತದೆ. ಏಕೆಂದರೆ ಚಿಕ್ಕ ಕರ್ಮಗಳಿಗೆ ಅವನು ದೊಡ್ಡ ಪ್ರತಿಫಲವನ್ನು ನೀಡುತ್ತಾನೆ.
Share
Use the QR code to easily share the message of Islam with others