ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:"...
ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: ಇಸ್ಲಾಂ ಧರ್ಮದ ಅತಿಶ್ರೇಷ್ಠ ಲಕ್ಷಣಗಳು ಯಾವುವು? ಆಗ ಅವರು ಎರಡು ಲಕ್ಷಣಗಳನ್ನು ತಿಳಿಸಿದರು:
ಒಂದ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ಪಾಪಗಳನ್ನು ಅ...
ಪಾಪಗಳು ಕ್ಷಮಿಸಲ್ಪಡಲು ಮತ್ತು ಅವುಗಳನ್ನು ಬರೆದಿಡುವ ದೇವದೂತರ ದಾಖಲೆಗಳಿಂದ ಅವುಗಳನ್ನು ಅಳಿಸಿಬಿಡಲು ಹಾಗೂ ಸ್ವರ್ಗದಲ್ಲಿ ಉನ್ನತ ಸೌಧಗಳು ದೊರೆಯುಂತಾಗಲು ಕಾರಣವಾಗುವ ಕರ್ಮಗಳ ಬಗ್ಗೆ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಶಾಲಿ ಸತ್ಯ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸತ್ಯವಿಶ್ವಾಸಿಗಳಿಗೆ ಎಲ್ಲಾ ವಿಷಯಗಳಲ್ಲೂ ಒಳಿತಿದೆ. ಆದರೆ ಸತ್ಯವಿಶ್ವಾಸ, ದೃಢನಿರ್ಧಾರ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜಿಬ್ರ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನೆರೆಹೊರೆಯವರ ಬಗ್ಗೆ ಕಾಳಜಿ ವಹಿಸಬೇಕೆಂದು ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವರಿಗೆ...
ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ತನ್ನ ಸಹೋದರನ ಘನತೆಯನ್ನು ಕಾಪಾ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ತನ್ನ ಮುಸಲ್ಮಾನ ಸಹೋದರನ ಬಗ್ಗೆ ಯಾರಾದರೂ ದೂಷಣೆ ಮಾಡುವುದನ್ನು ಕೇಳುವಾಗ, ಆ ದೂಷಣೆಯನ್ನ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:"ಇಸ್ಲಾಂ ಧರ್ಮದಲ್ಲಿ ಅತಿಶ್ರೇಷ್ಠವಾದುದು ಯಾವುದು?" ಅವರು ಉತ್ತರಿಸಿದರು: "ಜನರಿಗೆ ಆಹಾರ ನೀಡುವುದು ಮತ್ತು ಪರಿಚಯವಿರುವವರಿಗೂ, ಪರಿಚಯವಿಲ್ಲದವರಿಗೂ ಸಲಾಂ ಹೇಳುವುದು."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?" ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ತಿಳಿಸಿಕೊಡಿ." ಅವರು ಹೇಳಿದರು: "ಕಷ್ಟ ಕಾಲದಲ್ಲಿ ಅತ್ಯುತ್ತಮವಾಗಿ ವುದೂ ನಿರ್ವಹಿಸುವುದು, ಮಸೀದಿಗೆ ಅತ್ಯಧಿಕ ಹೆಜ್ಜೆ ಹಾಕುವುದು ಮತ್ತು ಒಂದು ನಮಾಝ್ ನಿರ್ವಹಿಸಿದ ಬಳಿಕ ಇನ್ನೊಂದು ನಮಾಝನ್ನು ಕಾಯುವುದು. ಇದೇ ರಿಬಾತ್ ಆಗಿದೆ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ ಒಳಿತಿದೆ. ನಿನಗೆ ಪ್ರಯೋಜನಕಾರಿಯಾದ ವಿಷಯದಲ್ಲಿ ಉತ್ಸುಕನಾಗು, ಅಲ್ಲಾಹನಲ್ಲಿ ಸಹಾಯ ಬೇಡು ಮತ್ತು ಅಸಹಾಯಕನಾಗಬೇಡ. ನಿನಗೇನಾದರೂ ಸಂಭವಿಸಿದರೆ, "ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗಾಗುತ್ತಿತ್ತು" ಎಂದು ಹೇಳಬೇಡ. ಬದಲಿಗೆ, "ಇದು ಅಲ್ಲಾಹು ವಿಧಿಸಿದ್ದು; ಅವನು ಇಚ್ಛಿಸುವುದನ್ನು ಅವನು ಮಾಡುತ್ತಾನೆ" ಎಂದು ಹೇಳು. ಏಕೆಂದರೆ ‘ಒಂದು ವೇಳೆ' ಎಂಬ ಮಾತು ಶೈತಾನನು ಕಾರ್ಯೋನ್ಮುಖನಾಗಲು ಬಾಗಿಲು ತೆರೆದುಕೊಡುತ್ತದೆ."
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನನಗೆ ನನ್ನ ನೆರೆಹೊರೆಯವರ ಬಗ್ಗೆ ನಿರಂತರ ಉಪದೇಶ ಮಾಡುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ಅವರು ನನ್ನ ನೆರೆಯವನನ್ನು ನನ್ನ ಆಸ್ತಿಯಲ್ಲಿ ಹಕ್ಕುದಾರನನ್ನಾಗಿ ಮಾಡುತ್ತಾರೋ ಎಂದು ನಾನು ಭಾವಿಸತೊಡಗಿದೆ."
ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ತನ್ನ ಸಹೋದರನ ಘನತೆಯನ್ನು ಕಾಪಾಡುತ್ತಾನೋ, ಅವನ ಮುಖವನ್ನು ಪುನರುತ್ಥಾನ ದಿನದಂದು ಅಲ್ಲಾಹು ನರಕದಿಂದ ಕಾಪಾಡುತ್ತಾನೆ."
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ."
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಮೃದುತ್ವವಿರುತ್ತದೋ ಅದು ಅದನ್ನು ಅಂದಗೊಳಿಸುತ್ತದೆ; ಮತ್ತು ಯಾವ ವಿಷಯದಿಂದ ಅದನ್ನು ತೆಗೆಯಲಾಗುತ್ತದೋ ಅದು ಅದನ್ನು ಅಂದಗೆಡಿಸುತ್ತದೆ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಧರ್ಮವು ಸರಳವಾಗಿದೆ. ಯಾರಾದರೂ ಧರ್ಮವನ್ನು ಕಠಿಣಗೊಳಿಸಲು ಪ್ರಯತ್ನಿಸಿದರೆ ಅದು ಅವನನ್ನು ಸೋಲಿಸದೆ ಬಿಡುವುದಿಲ್ಲ. ಆದ್ದರಿಂದ ಸರಿಯಾದುದನ್ನು ಅರಸಿರಿ, ಸಾಧ್ಯವಾದಷ್ಟು ಹತ್ತಿರವಾಗಿರಿ ಮತ್ತು (ಪ್ರತಿಫಲದ) ಶುಭವಾರ್ತೆಯನ್ನು ಪಡೆಯಿರಿ; ಬೆಳಗ್ಗೆ, ಸಂಜೆ ಮತ್ತು ರಾತ್ರಿಯ ಕೊನೆಯ ಆಯಾಮದಲ್ಲಿ ಆರಾಧನೆ ಮಾಡುತ್ತಾ ಸಹಾಯವನ್ನು ಯಾಚಿಸಿರಿ."
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಲಭಗೊಳಿಸಿರಿ, ಕಷ್ಟಗೊಳಿಸಬೇಡಿ; ಸಿಹಿಸುದ್ದಿ ತಿಳಿಸಿರಿ, ಗಾಬರಿಗೊಳಿಸಬೇಡಿ."
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನು ಆಹಾರ ಸೇವಿಸುವಾಗ ಬಲಗೈಯಿಂದ ಸೇವಿಸಲಿ ಮತ್ತು ಕುಡಿಯುವಾಗ ಬಲಗೈಯಿಂದ ಕುಡಿಯಲಿ. ಏಕೆಂದರೆ ಶೈತಾನನು ಎಡಗೈಯಿಂದ ಆಹಾರ ಸೇವಿಸುತ್ತಾನೆ ಮತ್ತು ಎಡಗೈಯಿಂದ ಕುಡಿಯುತ್ತಾನೆ."
ಉಮರ್ ಬಿನ್ ಅಬೂ ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಮಗುವಾಗಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆರೈಕೆಯಲ್ಲಿದ್ದೆ. ನನ್ನ ಕೈ, ಬಟ್ಟಲಲ್ಲಿ ಅತ್ತಿತ್ತ ಹರಿದಾಡುತ್ತಿತ್ತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಗೂ, ಅಲ್ಲಾಹನ ಹೆಸರನ್ನು ಉಚ್ಛರಿಸು, ನಿನ್ನ ಬಲಗೈಯಿಂದ ಸೇವಿಸು, ಮತ್ತು ನಿನ್ನ ಹತ್ತಿರದಲ್ಲಿರುವುದನ್ನೇ ಸೇವಿಸು." ನಂತರ ಇದೇ ನನ್ನ ಆಹಾರ ಸೇವನೆಯ ವಿಧಾನವಾಯಿತು.