ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದ...
ಸಂಭೋಗ ಮಾಡುವ ಸಾಮರ್ಥ್ಯವಿರುವವರು ಮತ್ತು ವಿವಾಹದ ಖರ್ಚುವೆಚ್ಚಗಳನ್ನು ಭರಿಸುವ ಸಾಮರ್ಥ್ಯವಿರುವವರು ವಿವಾಹವಾಗಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ...
ಅಬೂ ಸಈದ್ ಖುದ್ರಿ (ರ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಇಹಲೋಕವು ಮಧುರವಾಗಿದೆ ಮತ್ತು ಹಸಿರಾಗಿದೆ. ನಿಶ್ಚಯವ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಇಹಲೋಕವು ;ರುಚಿಯಲ್ಲಿ ಮಧುರವಾಗಿದೆ ಮತ್ತು ರೂಪದಲ್ಲಿ ಹಸಿರಾಗಿದೆ. ಮನುಷ್ಯನು ಅದರಿಂದ...
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪೋಷಕನಿಲ್ಲದಿದ್ದರೆ ವಿವಾಹವಿಲ್ಲ."
ವಿವಾಹ ಕರಾರನ್ನು ನಡೆಸಿಕೊಡುವ ಪೋಷಕರ ಅನುಪಸ್ಥಿತಿಯಲ್ಲಿ ಒಬ್ಬ ಮಹಿಳೆ ವಿವಾಹವಾದರೆ ಆ ವಿವಾಹ ಸಿಂಧುವಲ್ಲವೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲ...
ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಾರಣವಾಗುವ ಷರತ್ತುಗಳು ನೆರವೇರಿಸಲು ಅತ್ಯಂತ ಅ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಹಲೋಕವು ಒ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕ ಮತ್ತು ಅದರಲ್ಲಿರುವ ವಸ್ತುಗಳು ಸ್ವಲ್ಪ ಸಮಯದವರೆಗೆ ಆನಂದಿಸುವ ಮತ್ತು ನಂತರ ಕೊನೆ...

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆವು. ಆಗ ಅವರು ಹೇಳಿದರು: "ವಿವಾಹವಾಗುವ ಸಾಮರ್ಥ್ಯವಿರುವವರು ವಿವಾಹವಾಗಬೇಕು. ಏಕೆಂದರೆ, ದೃಷ್ಟಿಯನ್ನು ತಗ್ಗಿಸಲು ಮತ್ತು ಪರಿಶುದ್ಧತೆಯನ್ನು ಕಾಪಾಡಲು ಅದು ಹೆಚ್ಚು ಪರಿಣಾಮಕಾರಿಯಾಗಿದೆ. ವಿವಾಹವಾಗುವ ಸಾಮರ್ಥ್ಯವಿಲ್ಲದವರು ಉಪವಾಸ ಆಚರಿಸಬೇಕು. ಏಕೆಂದರೆ, ಅದು ಅವನಿಗೆ ಗುರಾಣಿಯಾಗಿದೆ."

ಅಬೂ ಸಈದ್ ಖುದ್ರಿ (ರ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಇಹಲೋಕವು ಮಧುರವಾಗಿದೆ ಮತ್ತು ಹಸಿರಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ಅದರಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿ, ನೀವು ಹೇಗೆ ವರ್ತಿಸುತ್ತೀರಿ ಎಂದು ನೋಡುತ್ತಾನೆ. ಆದ್ದರಿಂದ ನೀವು ಇಹಲೋಕವನ್ನು ಭಯಪಡಿರಿ ಮತ್ತು ಸ್ತ್ರೀಯರನ್ನು ಭಯಪಡಿರಿ. ಏಕೆಂದರೆ, ಬನೂ ಇಸ್ರಾಈಲರ ಮೊತ್ತಮೊದಲ ಪರೀಕ್ಷೆಯು ಸ್ತ್ರೀಯರ ಮೂಲಕವಾಗಿತ್ತು."

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪೋಷಕನಿಲ್ಲದಿದ್ದರೆ ವಿವಾಹವಿಲ್ಲ."

ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ನೆರವೇರಿಸಬೇಕಾದ ಅತ್ಯಂತ ಅರ್ಹ ಷರತ್ತುಗಳು ನಿಮಗೆ ಲೈಂಗಿಕ ಸಂಪರ್ಕವನ್ನು ಧರ್ಮಸಮ್ಮತಗೊಳಿಸುವ ಶರತ್ತುಗಳಾಗಿವೆ."

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಹಲೋಕವು ಒಂದು ಆನಂದವಾಗಿದೆ ಮತ್ತು ಇಹಲೋಕದ ಆನಂದಗಳಲ್ಲಿ ಅತ್ಯುತ್ತಮವಾದುದು ಧರ್ಮನಿಷ್ಠೆ ಮಹಿಳೆಯಾಗಿದ್ದಾಳೆ."

ಅಬ್ದುರ್‍ರಹ್ಮಾನ್ ಬಿನ್ ಅಬೂ ಲೈಲಾ ರಿಂದ ವರದಿ. ಒಮ್ಮೆ ಅವರು ಹುದೈಫರ ಜೊತೆಯಲ್ಲಿದ್ದರು. ಆಗ ಅವರು ನೀರು ಕೇಳಿದರು ಮತ್ತು ಒಬ್ಬ ಮಜೂಸಿ ಅವರಿಗೆ ನೀರು ತಂದು ಕೊಟ್ಟನು. ಆತ ಲೋಟವನ್ನು ಅವರ ಕೈಯಲ್ಲಿಟ್ಟಾಗ, ಅವರು ಅದನ್ನು ಆತನ ಕಡೆಗೆ ಎಸೆದು ಹೇಳಿದರು: ನಾನು ಇದನ್ನು ಬಳಸದಂತೆ ಒಂದು ಅಥವಾ ಎರಡು ಬಾರಿ ಅವನಿಗೆ ನಿಷೇಧಿಸದಿರುತ್ತಿದ್ದರೆ—ನಾನು ಹೀಗೆ ಮಾಡುತ್ತಿರಲಿಲ್ಲ ಎಂದು ಹೇಳುವುದು ಅವರ ಇಂಗಿತವಾಗಿರಬಹುದು—ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ರೇಷ್ಮೆ ಅಥವಾ ಬ್ರೊಕೇಡು (ಜರತಾರಿ ರೇಷ್ಮೆ) ಗಳನ್ನು ಧರಿಸಬೇಡಿ. ಬಂಗಾರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯಬೇಡಿ ಮತ್ತು ಅವುಗಳ ಬಟ್ಟಲುಗಳಲ್ಲಿ ಆಹಾರ ಸೇವಿಸಬೇಡಿ. ಏಕೆಂದರೆ, ಇವು ಇಹಲೋಕದಲ್ಲಿ ಅವರಿಗೆ ಮತ್ತು ಪರಲೋಕದಲ್ಲಿ ನಮಗೆ ಇರುವುದಾಗಿವೆ."

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ತಲೆಯ ಒಂದು ಭಾಗವನ್ನು ಬೋಳಿಸಿ ಇನ್ನೊಂದು ಭಾಗವನ್ನು ಬೋಳಿಸದಿರುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ."

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ."

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡಬಾರದು. ಒಬ್ಬ ಪುರುಷನು ಇನ್ನೊಬ್ಬ ಪುರುಷನ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು."

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಶ್ಲೀಲವಾಗಿರಲಿಲ್ಲ ಮತ್ತು ಅಶ್ಲೀಲ ಭಾಷೆಯನ್ನು ಬಳಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು: "ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು."

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ಉಪವಾಸ ಆಚರಿಸುವವನ ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವವನ ಪದವಿಯನ್ನು ಪಡೆಯುತ್ತಾನೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅತ್ಯುತ್ತಮ ನಡವಳಿಕೆಯನ್ನು ಹೊಂದಿರುವ ಸತ್ಯವಿಶ್ವಾಸಿಗಳೇ ಪರಿಪೂರ್ಣ ವಿಶ್ವಾಸವನ್ನು ಹೊಂದಿದವರು. ನಿಮ್ಮಲ್ಲಿ ಯಾರು ತಮ್ಮ ಮಹಿಳೆಯರೊಡನೆ ಉತ್ತಮವಾಗಿ ವರ್ತಿಸುತ್ತಾರೋ ಅವರೇ ನಿಮ್ಮಲ್ಲಿ ಅತ್ಯುತ್ತಮ ಜನರು."