/ ನೀವು ನೆರವೇರಿಸಬೇಕಾದ ಅತ್ಯಂತ ಅರ್ಹ ಷರತ್ತುಗಳು ನಿಮಗೆ ಲೈಂಗಿಕ ಸಂಪರ್ಕವನ್ನು ಧರ್ಮಸಮ್ಮತಗೊಳಿಸುವ ಶರತ್ತುಗಳಾಗಿವೆ...

ನೀವು ನೆರವೇರಿಸಬೇಕಾದ ಅತ್ಯಂತ ಅರ್ಹ ಷರತ್ತುಗಳು ನಿಮಗೆ ಲೈಂಗಿಕ ಸಂಪರ್ಕವನ್ನು ಧರ್ಮಸಮ್ಮತಗೊಳಿಸುವ ಶರತ್ತುಗಳಾಗಿವೆ...

ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ನೆರವೇರಿಸಬೇಕಾದ ಅತ್ಯಂತ ಅರ್ಹ ಷರತ್ತುಗಳು ನಿಮಗೆ ಲೈಂಗಿಕ ಸಂಪರ್ಕವನ್ನು ಧರ್ಮಸಮ್ಮತಗೊಳಿಸುವ ಶರತ್ತುಗಳಾಗಿವೆ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಕಾರಣವಾಗುವ ಷರತ್ತುಗಳು ನೆರವೇರಿಸಲು ಅತ್ಯಂತ ಅರ್ಹವಾದ ಷರತ್ತುಗಳಾಗಿವೆ. ಇವು ಲೈಂಗಿಕ ಸಂಪರ್ಕವನ್ನು ಅನುಮತಿಸುವ ಶರತ್ತುಗಳಾಗಿದ್ದು ಮಹಿಳೆ ತನ್ನ ವಿವಾಹ ಕರಾರಿನಲ್ಲಿ ಇವುಗಳ ಬೇಡಿಕೆಯಿಡುತ್ತಾಳೆ.

Hadeeth benefits

  1. ದಂಪತಿಗಳಲ್ಲಿ ಒಬ್ಬರು ಇನ್ನೊಬ್ಬರಿಗೆ ಅಂಗೀಕರಿಸುವ ಷರತ್ತುಗಳನ್ನು ನೆರವೇರಿಸುವುದು ಕಡ್ಡಾಯವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಆದರೆ ಆ ಶರತ್ತು ನಿಷೇಧಿಸಲಾದುದನ್ನು ಅನುಮತಿಸಲು ಅಥವಾ ಅನುಮತಿಸಲಾದುದನ್ನು ನಿಷೇಧಿಸಲು ಆಗಿರಬಾರದು.
  2. ವಿವಾಹದ ಷರತ್ತುಗಳನ್ನು ನೆರವೇರಿಸುವುದು ಇತರ ಷರತ್ತುಗಳನ್ನು ನೆರವೇರಿಸುವುದಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆಯುಳ್ಳದ್ದಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಲೈಂಗಿಕ ಸಂಪರ್ಕವನ್ನು ಅನುಮತಿಸುವ ಶರತ್ತುಗಳಾಗಿವೆ.
  3. ಇಸ್ಲಾಮಿನಲ್ಲಿ ವಿವಾಹಕ್ಕಿರುವ ಮಹಾ ಸ್ಥಾನಮಾನವನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ. ಏಕೆಂದರೆ ಅದರ ಶರತ್ತುಗಳನ್ನು ನೆರವೇರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.