/ ಇಹಲೋಕವು ಒಂದು ಆನಂದವಾಗಿದೆ ಮತ್ತು ಇಹಲೋಕದ ಆನಂದಗಳಲ್ಲಿ ಅತ್ಯುತ್ತಮವಾದುದು ಧರ್ಮನಿಷ್ಠೆ ಮಹಿಳೆಯಾಗಿದ್ದಾಳೆ...

ಇಹಲೋಕವು ಒಂದು ಆನಂದವಾಗಿದೆ ಮತ್ತು ಇಹಲೋಕದ ಆನಂದಗಳಲ್ಲಿ ಅತ್ಯುತ್ತಮವಾದುದು ಧರ್ಮನಿಷ್ಠೆ ಮಹಿಳೆಯಾಗಿದ್ದಾಳೆ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಹಲೋಕವು ಒಂದು ಆನಂದವಾಗಿದೆ ಮತ್ತು ಇಹಲೋಕದ ಆನಂದಗಳಲ್ಲಿ ಅತ್ಯುತ್ತಮವಾದುದು ಧರ್ಮನಿಷ್ಠೆ ಮಹಿಳೆಯಾಗಿದ್ದಾಳೆ."
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಇಹಲೋಕ ಮತ್ತು ಅದರಲ್ಲಿರುವ ವಸ್ತುಗಳು ಸ್ವಲ್ಪ ಸಮಯದವರೆಗೆ ಆನಂದಿಸುವ ಮತ್ತು ನಂತರ ಕೊನೆಗೊಳ್ಳುವ ವಿಷಯಗಳಾಗಿವೆ. ಧರ್ಮನಿಷ್ಠೆಯಾದ ಪತ್ನಿ ಇವುಗಳಲ್ಲಿ ಅತಿಶ್ರೇಷ್ಠ ಆನಂದವಾಗಿದ್ದಾಳೆ. ಧರ್ಮನಿಷ್ಠೆ ಪತ್ನಿ ಯಾರೆಂದರೆ ಗಂಡ ಅವಳನ್ನು ನೋಡಿದಾಗ ಅವಳು ಅವನಿಗೆ ಸಂತೋಷಪಡಿಸುತ್ತಾಳೆ, ಅವನು ಏನಾದರೂ ಆಜ್ಞಾಪಿಸಿದರೆ ಅವಳು ಅನುಸರಿಸುತ್ತಾಳೆ ಮತ್ತು ಅವನ ಅನುಪಸ್ಥಿತಿಯಲ್ಲಿ ಅವಳು ತನ್ನ ಮಾನವನ್ನು ಮತ್ತು ಅವನ ಆಸ್ತಿಯನ್ನು ಸಂರಕ್ಷಿಸುತ್ತಾಳೆ.

Hadeeth benefits

  1. ಅಲ್ಲಾಹು ತನ್ನ ದಾಸರಿಗೆ ಅನುಮತಿಸಿದ ಇಹಲೋಕದ ಉತ್ತಮ ವಸ್ತುಗಳನ್ನು ದುರ್ವ್ಯಯ ಮತ್ತು ಅಹಂಭಾವ ತೋರದೆ ಆನಂದಿಸಬಹುದೆಂದು ಈ ಹದೀಸ್ ತಿಳಿಸುತ್ತದೆ.
  2. ಧರ್ಮನಿಷ್ಠೆ ಪತ್ನಿಯನ್ನು ಆರಿಸಲು ಈ ಹದೀಸ್ ಪ್ರೋತ್ಸಾಹಿಸುತ್ತದೆ. ಏಕೆಂದರೆ ಅಲ್ಲಾಹನಿಗೆ ವಿಧೇಯತೆ ತೋರಲು ಅವಳು ಗಂಡನಿಗೆ ಸಹಾಯ ಮಾಡುತ್ತಾಳೆ.
  3. ಅಲ್ಲಾಹನಿಗೆ ವಿಧೇಯರಾಗಿ ಬದುಕಲು ಬಳಸುವ ಮತ್ತು ಅದಕ್ಕಾಗಿ ಸಹಾಯ ಮಾಡುವ ವಸ್ತುಗಳೇ ಇಹಲೋಕದ ಆನಂದಗಳಲ್ಲಿ ಅತ್ಯುತ್ತಮವಾಗಿವೆ.