- ಒಬ್ಬ ಸತ್ಯವಿಶ್ವಾಸಿ ಕೆಟ್ಟ ಮಾತು ಮತ್ತು ನೀಚಕೃತ್ಯಗಳು ಸೇರಿದಂತೆ ಎಲ್ಲಾ ಅಶ್ಲೀಲತೆಗಳಿಂದ ದೂರವಿರಬೇಕೆಂದು ಈ ಹದೀಸ್ ಒತ್ತಾಯಿಸುತ್ತದೆ.
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪರಿಪೂರ್ಣ ನಡವಳಿಕೆಯನ್ನು ಹೊಂದಿದ್ದರು. ಅವರಲ್ಲಿ ಉತ್ತಮ ಕರ್ಮಗಳು ಮತ್ತು ಶುದ್ಧವಾದ ಮಾತುಗಳ ಹೊರತು ಬೇರೇನೂ ಕಂಡುಬರುತ್ತಿರಲಿಲ್ಲ.
- ಉತ್ತಮ ನಡವಳಿಕೆಯು ಸತ್ಯವಿಶ್ವಾಸಿಗಳು ಪರಸ್ಪರ ಸ್ಪರ್ಧಿಸಬೇಕಾದ ಕ್ಷೇತ್ರವಾಗಿದೆ. ಯಾರು ಈ ಸ್ಪರ್ಧೆಯಲ್ಲಿ ಇತರರಿಗಿಂತ ಮುಂದಿರುತ್ತಾರೋ ಅವರು ಸತ್ಯವಿಶ್ವಾಸಿಗಳಲ್ಲಿ ಅತ್ಯುತ್ತಮರು ಮತ್ತು ಪರಿಪೂರ್ಣ ವಿಶ್ವಾಸವನ್ನು ಹೊಂದಿದವರಾಗಿದ್ದಾರೆ.