ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅಲ್ಲಾಹು ಹೇಳಿದನು: "ಓ ಆದಮನ ಮ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಆದಮನ ಮಗನೇ! ಕಡ್ಡಾಯ ಮತ್ತು ಅಪೇಕ್ಷಣೀಯವಾದ ಎ...
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ತನ್ನ ಪೋಷಣೆಯಲ್ಲಿರುವ ಪತ್ನಿ, ತಂದೆ-ತಾಯಿ, ಮಕ್ಕಳು ಮುಂತಾದವರಿಗೆ ಹಣವನ್ನು ಖರ್ಚ...
ಅಬ್ದುಲ್ಲಾ ಬಿನ್ ಸಲಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಆಗಮಿಸಿದಾಗ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬಂದಾಗ ಜನರು ಅವರನ್ನು ನೋಡಲು ಅವರ ಕಡೆಗೆ ವೇಗವಾಗಿ ಧಾವಿಸಿದರು. ಅವರ ಬಳಿಗೆ ಧಾವಿಸಿದವರಲ್ಲಿ ಅಂದು ಯಹೂದಿ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಕಷ್ಟದಲ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಸಾಲಗಾರನಿಗೆ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸೌಮ್ಯವಾಗಿ ಮಾರಾಟ ಮಾಡುವ, ಖರೀದಿ...
ಮಾರಾಟ ಮಾಡುವಾಗ ಸರಳ, ಉದಾರ ಮತ್ತು ಕೊಡುಗೈಯಾಗಿರುವ ವ್ಯಕ್ತಿಗೆ ದಯೆ ತೋರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುತ್ತಾರೆ. ಆದ್ದ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅಲ್ಲಾಹು ಹೇಳಿದನು: "ಓ ಆದಮನ ಮಗನೇ! ಖರ್ಚು ಮಾಡು. ನಾನು ನಿನಗಾಗಿ ಖರ್ಚು ಮಾಡುತ್ತೇನೆ."
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ."
ಅಬ್ದುಲ್ಲಾ ಬಿನ್ ಸಲಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಆಗಮಿಸಿದಾಗ ಜನರೆಲ್ಲರೂ, "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು" ಎಂದು ಮೂರು ಸಲ ಕೂಗುತ್ತಾ ಅವರ ಸುತ್ತಲೂ ನೆರೆದರು. ನಾನು ಕೂಡ ಜನರೊಂದಿಗೆ ಅವರನ್ನು ನೋಡಲು ಬಂದೆ. ನಾನು ಅವರ ಮುಖವನ್ನು ಸ್ಪಷ್ಟವಾಗಿ ನೋಡಿದಾಗ ಅವರ ಮುಖವು ಸುಳ್ಳುಗಾರನ ಮುಖವಲ್ಲ ಎಂದು ನನಗೆ ಮನವರಿಕೆಯಾಯಿತು. ನಾನು ಅವರಿಂದ ಆಲಿಸಿದ ಪ್ರಪ್ರಥಮ ವಾಕ್ಯವು ಅವರ ಈ ಮಾತಾಗಿತ್ತು: "ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಕಷ್ಟದಲ್ಲಿರುವ ವ್ಯಕ್ತಿಗೆ ಕಾಲಾವಕಾಶ ನೀಡುತ್ತಾನೋ, ಅಥವಾ ಅವನ ಸಾಲವನ್ನು ಮನ್ನಾ ಮಾಡುತ್ತಾನೋ, ಅವನಿಗೆ ಪುನರುತ್ಥಾನ ದಿನದಂದು, ಅಂದರೆ ಅಲ್ಲಾಹನ ನೆರಳಿನ ಹೊರತು ಬೇರೆ ನೆರಳಿಲ್ಲದ ದಿನದಂದು, ಅಲ್ಲಾಹು ತನ್ನ ಸಿಂಹಾಸನದ ನೆರಳಿನಲ್ಲಿ ನೆರಳು ನೀಡುತ್ತಾನೆ."
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಒಬ್ಬ ವ್ಯಕ್ತಿ ಜನರಿಗೆ ಸಾಲ ನೀಡುತ್ತಿದ್ದನು. ಅವನು ತನ್ನ ಸೇವಕನೊಂದಿಗೆ ಹೇಳುತ್ತಿದ್ದನು: “ಸಾಲಗಾರ ದಿವಾಳಿಯಾಗಿದ್ದರೆ ಅವನನ್ನು ಕಡೆಗಣಿಸು. ಬಹುಶ ಅಲ್ಲಾಹು ನಮ್ಮ (ಪಾಪಗಳ) ನ್ನೂ ಕಡೆಗಣಿಸಬಹುದು. ಆದ್ದರಿಂದ, ಅವನು (ಮರಣಾನಂತರ) ಅಲ್ಲಾಹನನ್ನು ಭೇಟಿಯಾದಾಗ ಅಲ್ಲಾಹು ಅವನ ಪಾಪಗಳನ್ನು ಕಡೆಗಣಿಸಿದನು.”
ಖೌಲ ಅನ್ಸಾರಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ನಿಶ್ಚಯವಾಗಿಯೂ ಅಲ್ಲಾಹನ ಆಸ್ತಿಯಲ್ಲಿ ಲಂಗು-ಲಗಾಮಿಲ್ಲದೆ ವ್ಯವಹರಿಸುವ ಜನರು ಯಾರೋ ಅವರಿಗೆ ಪುನರುತ್ಥಾನ ದಿನದಂದು ನರಕಾಗ್ನಿಯಿದೆ.”
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್‌ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈ ದಿನಗಳ ಹೊರತು ಅಲ್ಲಾಹನಿಗೆ ಸತ್ಕರ್ಮಗಳು ಹೆಚ್ಚು ಇಷ್ಟವಾಗುವ ಬೇರೆ ದಿನಗಳಿಲ್ಲ." ಅಂದರೆ, ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು. ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲವೇ)?" ಅವರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಮಾಡುವ ಜಿಹಾದ್ ಕೂಡ (ಅವನಿಗೆ ಇಷ್ಟವಿಲ್ಲ). ಆದರೆ ಒಬ್ಬ ವ್ಯಕ್ತಿ ತನ್ನ ದೇಹ ಮತ್ತು ಆಸ್ತಿಯೊಂದಿಗೆ ರಣರಂಗಕ್ಕೆ ಹೊರಟು ಎರಡನ್ನೂ ಅಲ್ಲೇ ತ್ಯಜಿಸಿ ಬರುವ ಹೊರತು."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ರೂಪಗಳನ್ನು ಅಥವಾ ನಿಮ್ಮ ಆಸ್ತಿಯನ್ನು ನೋಡುವುದಿಲ್ಲ. ಬದಲಿಗೆ, ಅವನು ನಿಮ್ಮ ಹೃದಯಗಳನ್ನು ಮತ್ತು ಕರ್ಮಗಳನ್ನು ನೋಡುತ್ತಾನೆ."