/ ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ...

ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ...

ಅಬ್ದುಲ್ಲಾ ಬಿನ್ ಸಲಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಆಗಮಿಸಿದಾಗ ಜನರೆಲ್ಲರೂ, "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು" ಎಂದು ಮೂರು ಸಲ ಕೂಗುತ್ತಾ ಅವರ ಸುತ್ತಲೂ ನೆರೆದರು. ನಾನು ಕೂಡ ಜನರೊಂದಿಗೆ ಅವರನ್ನು ನೋಡಲು ಬಂದೆ. ನಾನು ಅವರ ಮುಖವನ್ನು ಸ್ಪಷ್ಟವಾಗಿ ನೋಡಿದಾಗ ಅವರ ಮುಖವು ಸುಳ್ಳುಗಾರನ ಮುಖವಲ್ಲ ಎಂದು ನನಗೆ ಮನವರಿಕೆಯಾಯಿತು. ನಾನು ಅವರಿಂದ ಆಲಿಸಿದ ಪ್ರಪ್ರಥಮ ವಾಕ್ಯವು ಅವರ ಈ ಮಾತಾಗಿತ್ತು: "ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ."
رواه الترمذي وابن ماجه وأحمد

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬಂದಾಗ ಜನರು ಅವರನ್ನು ನೋಡಲು ಅವರ ಕಡೆಗೆ ವೇಗವಾಗಿ ಧಾವಿಸಿದರು. ಅವರ ಬಳಿಗೆ ಧಾವಿಸಿದವರಲ್ಲಿ ಅಂದು ಯಹೂದಿಯಾಗಿದ್ದ ಅಬ್ದುಲ್ಲಾ ಬಿನ್ ಸಲಾಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೂಡ ಇದ್ದರು. ಅವರು ಪ್ರವಾದಿಯವರನ್ನು ನೋಡಿದಾಗ, ಅವರ ಮುಖವು ಸುಳ್ಳುಗಾರನ ಮುಖವಲ್ಲ ಎಂದು ಗುರುತಿಸಿದರು. ಏಕೆಂದರೆ ಅದರಲ್ಲಿ ಕಾಂತಿ, ಸೌಂದರ್ಯ ಮತ್ತು ಪ್ರಾಮಾಣಿಕವಾದ ಬೆರಗು ಎದ್ದು ಕಾಣುತ್ತಿತ್ತು. ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಲಿಸಿದ ಪ್ರಪ್ರಥಮ ಮಾತು ಸ್ವರ್ಗ ಪ್ರವೇಶಕ್ಕೆ ಕಾರಣವಾಗುವ ಕರ್ಮಗಳನ್ನು ಮಾಡುವಂತೆ ಜನರಿಗೆ ನೀಡಿದ ಪ್ರೋತ್ಸಾಹವಾಗಿತ್ತು. ಅವುಗಳಲ್ಲಿ ಕೆಲವು ಹೀಗಿದ್ದವು: ಒಂದು: ಇಸ್ಲಾಮಿನ ಅಭಿವಂದನಾ ವಚನವನ್ನು (ಸಲಾಂ) ವ್ಯಾಪಕಗೊಳಿಸುವುದು, ಬಹಿರಂಗಗೊಳಿಸುವುದು ಮತ್ತು ಪರಿಚಯವಿರುವವರಿಗೂ ಪರಿಚಯವಿಲ್ಲದವರಿಗೂ ಅದನ್ನು ಪದೇ ಪದೇ ಹೇಳುವುದು. ಎರಡು: ದಾನ ಧರ್ಮ, ಉಡುಗೊರೆ, ಅತಿಥಿ ಸತ್ಕಾರ ಮುಂತಾದ ರೂಪಗಳಲ್ಲಿ ಜನರಿಗೆ ಆಹಾರವನ್ನು ಉಣಿಸುವುದು. ಮೂರು: ಕುಟುಂಬ ಸಂಬಂಧವನ್ನು ಜೋಡಿಸುವುದು, ಸಂಬಂಧಿಕರು ಎಂದರೆ ನಿಮ್ಮ ತಂದೆ ಅಥವಾ ತಾಯಿಯ ಕಡೆಯಿಂದ ನಿಮ್ಮೊಂದಿಗೆ ರಕ್ತ ಸಂಬಂಧವನ್ನು ಹೊಂದಿರುವವರು. ನಾಲ್ಕು: ಜನರು ನಿದ್ರಿಸುತ್ತಿರುವಾಗ ಐಚ್ಚಿಕವಾದ ರಾತ್ರಿ ನಮಾಝನ್ನು ನಿರ್ವಹಿಸುವುದು.

Hadeeth benefits

  1. ಮುಸಲ್ಮಾನರ ನಡುವೆ ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು ಅಪೇಕ್ಷಣೀಯವಾಗಿದೆ. ಆದರೆ ಮುಸ್ಲಿಮೇತರರಿಗೆ ಮುಂದಾಗಿ ಸಲಾಂ ಹೇಳಬಾರದು. ಅವರು "ಅಸ್ಸಲಾಂ ಅಲೈಕುಂ" ಎಂದು ಸಲಾಂ ಹೇಳಿದರೆ "ವಅಲೈಕುಂ" ಎಂದು ಉತ್ತರಿಸಬೇಕು.