ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ಅಲ್ಲಾಹುಮ್ಮಗ್...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನಲ್ಲಿ ಎರಡು ಸುಜೂದ್‌ಗಳ ಮಧ್ಯೆ ಮುಸಲ್ಮಾನನಿಗೆ ಅತ್ಯಂತ ಅಗತ್ಯವಿರುವ ಮತ್ತು ಇಹಲೋಕ ಹಾಗೂ ಪರಲೋಕದ ಎಲ್ಲಾ ಒಳಿ...
ಹಿತ್ತಾನ್ ಬಿನ್ ಅಬ್ದುಲ್ಲಾ ರಕಾಶಿ ಹೇಳುತ್ತಾರೆ: ನಾನು ಅಬೂ ಮೂಸಾ ಅಶ್‌ಅರಿ ಯವರೊಂದಿಗೆ ನಮಾಝ್ ನಿರ್ವಹಿಸಿದೆ. ನಾವು ಕೊನೆಯ ಕೂರುವಿಕೆಗೆ ತಲುಪಿದಾಗ, ಹಿಂದಿನ ಸಾಲಿನಲ್ಲಿದ್ದ ಒಬ್ಬ...
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮಾಝ್ ಮಾಡಿದರು. ಅವರು ತಶಹ್ಹುದ್‌ಗಾಗಿ ಕೂರುವ ಹಂತಕ್ಕೆ ತಲುಪಿದಾಗ, ಹಿಂದಿನಿಂದ ಒಬ್ಬ ವ್ಯಕ್ತಿ, "ಕುರ್‌ಆನಿನಲ್ಲಿ ನಮಾ...
ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರ ಗಮನವನ್ನು ಸೆಳೆಯಲು ಅವರ ಕೈಯನ್ನು ಹಿಡಿದುಕೊಂಡು ನಮಾಝ್‌ನ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಾ ಹೇಳುತ್...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನ ಕೊನೆಯ ತಶಹ್ಹುದ್‌ನ ನಂತರ ಸಲಾಂ ಹೇಳುವುದಕ್ಕೆ ಮೊದಲು ನಾಲ್ಕು ವಿಷಯಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡುತ್ತಿದ...
ಮಅದಾನ್ ಬಿನ್ ಅಬೂ ತಲ್ಹ ಯಅಮರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ)...
ಸ್ವರ್ಗ ಪ್ರವೇಶಕ್ಕೆ ಕಾರಣವಾಗುವ ಅಥವಾ ಅಲ್ಲಾಹನಿಗೆ ಅತ್ಯಂತ ಇಷ್ಟವಾದ ಒಂದು ಕರ್ಮದ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು. ಆಗ ಪ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ಸುಜೂದ್‌ಗಳ ಮಧ್ಯೆ "ಅಲ್ಲಾಹುಮ್ಮಗ್ಫಿರ್ ಲೀ, ವರ್‌ಹಮ್‌ನೀ, ವಆಫಿನೀ, ವಹ್ದಿನೀ, ವರ್‌ಝುಕ್‌ನೀ" (ಓ ಅಲ್ಲಾಹ್! ನನ್ನನ್ನು ಕ್ಷಮಿಸು, ನನಗೆ ದಯೆತೋರು, ನನಗೆ ಸೌಖ್ಯವನ್ನು ನೀಡು, ನನಗೆ ಸನ್ಮಾರ್ಗವನ್ನು ತೋರಿಸು ಮತ್ತು ನನಗೆ ಜೀವನೋಪಾಯವನ್ನು ದಯಪಾಲಿಸು) ಎಂದು ಹೇಳುತ್ತಿದ್ದರು.

ಹಿತ್ತಾನ್ ಬಿನ್ ಅಬ್ದುಲ್ಲಾ ರಕಾಶಿ ಹೇಳುತ್ತಾರೆ: ನಾನು ಅಬೂ ಮೂಸಾ ಅಶ್‌ಅರಿ ಯವರೊಂದಿಗೆ ನಮಾಝ್ ನಿರ್ವಹಿಸಿದೆ. ನಾವು ಕೊನೆಯ ಕೂರುವಿಕೆಗೆ ತಲುಪಿದಾಗ, ಹಿಂದಿನ ಸಾಲಿನಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದರು: "ನಮಾಝನ್ನು ಒಳಿತು ಮತ್ತು ಝಕಾತ್‌ಗಳ ಜೊತೆಗೆ ಕಡ್ಡಾಯಗೊಳಿಸಲಾಗಿದೆ." ಅಬೂ ಮೂಸಾರವರು ನಮಾಝ್ ಮುಗಿಸಿದ ನಂತರ ಹಿಂದೆ ತಿರುಗಿ ಕೇಳಿದರು: "ಇಂತಿಂತಹ ಮಾತನ್ನು ಹೇಳಿದ್ದು ಯಾರು?" ಜನರು ಮೌನವಾಗಿದ್ದರು. ಅವರು ಪುನಃ ಕೇಳಿದರು: "ಇಂತಿಂತಹ ಮಾತನ್ನು ಹೇಳಿದ್ದು ಯಾರು?" ಜನರು ಮೌನವಾಗಿದ್ದರು. ಅವರು ಕೇಳಿದರು: "ಹಿತ್ತಾನ್! ಬಹುಶಃ ನೀನೇ ಇದನ್ನು ಹೇಳಿರಬಹುದು." ಹಿತ್ತಾನ್ ಹೇಳಿದರು: "ನಾನು ಹೇಳಿಲ್ಲ. ನೀವು ಅದಕ್ಕಾಗಿ ನನ್ನನ್ನು ಗದರಿಸುವಿರೆಂದು ನನಗೆ ಭಯವಿತ್ತು." ಆಗ ಜನರ ನಡುವಿನಿಂದ ಒಬ್ಬ ವ್ಯಕ್ತಿ ಹೇಳಿದರು: "ನಾನೇ ಅದನ್ನು ಹೇಳಿದ್ದು. ಆದರೆ ನನ್ನ ಉದ್ದೇಶ ಒಳ್ಳೆಯದಾಗಿತ್ತು." ಆಗ ಅಬೂ ಮೂಸಾ ಹೇಳಿದರು: "ನೀವು ನಮಾಝಿನಲ್ಲಿ ಹೇಗೆ ಮಾತನಾಡಬೇಕೆಂದು ನಿಮಗೆ ತಿಳಿದಿದೆಯೇ? ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಮ್ಮೆ ಪ್ರವಚನ ಮಾಡುತ್ತಾ, ನಮಗೆ ಚರ್ಯೆಗಳನ್ನು ವಿವರಿಸಿದರು ಮತ್ತು ನಮಾಝನ್ನು ಕಲಿಸಿದರು. ನಂತರ ಅವರು ಹೇಳಿದರು: "ನೀವು ನಮಾಝ್ ಮಾಡುವಾಗ ನಿಮ್ಮ ಸಾಲುಗಳನ್ನು ನೇರಗೊಳಿಸಿರಿ. ನಂತರ ನಿಮ್ಮಲ್ಲೊಬ್ಬರು ನಮಾಝ್‌ಗೆ ಇಮಾಮತ್ (ಮುಂದಾಳುತ್ವ) ವಹಿಸಲಿ. ಅವರು ತಕ್ಬೀರ್ ಹೇಳಿದರೆ ನೀವು ಕೂಡ ತಕ್ಬೀರ್ ಹೇಳಿರಿ. ಅವರು, "ಗೈರಿಲ್ ಮಗ್‌ದೂಬಿ ಅಲೈಹಿಂ ವಲದ್ದಾಲ್ಲೀನ್" ಎಂದು ಹೇಳಿದರೆ, ನೀವು "ಆಮೀನ್" ಎಂದು ಹೇಳಿರಿ. ಆಗ ಅಲ್ಲಾಹು ನಿಮಗೆ ಉತ್ತರಿಸುವನು. ಇಮಾಂ ತಕ್ಬೀರ್ ಹೇಳಿದರೆ ನೀವು ಕೂಡ ತಕ್ಬೀರ್ ಹೇಳಿರಿ. ಅವರು ರುಕೂ ಮಾಡಿದರೆ ನೀವೂ ರುಕೂ ಮಾಡಿರಿ. ಇಮಾಂ ನಿಮಗಿಂತ ಮೊದಲು ರುಕೂ ಮಾಡುತ್ತಾರೆ ಮತ್ತು ನಿಮಗಿಂತ ಮೊದಲು ತಲೆ ಎತ್ತುತ್ತಾರೆ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದು ಅದಕ್ಕೆ ಸಮವಾಗಿದೆ. ನಂತರ ಇಮಾಂ "ಸಮಿಅಲ್ಲಾಹು ಲಿಮನ್ ಹಮಿದ" ಎಂದು ಹೇಳಿದರೆ, ನೀವು "ಅಲ್ಲಾಹುಮ್ಮ ರಬ್ಬನಾ ವಲಕಲ್ ಹಮ್ದ್" ಎಂದು ಹೇಳಿರಿ. ಅಲ್ಲಾಹು ನಿಮ್ಮ ಪ್ರಾರ್ಥನೆಗೆ ಉತ್ತರಿಸುವನು. ಅಲ್ಲಾಹು ಅವನ ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲಗೆಯ ಮೂಲಕ ಹೇಳಿದನು: "ಅಲ್ಲಾಹು ಅವನನ್ನು ಪ್ರಶಂಸಿಸುವವರ ಮಾತನ್ನು ಕೇಳುತ್ತಾನೆ." ಇಮಾಂ ಅಲ್ಲಾಹು ಅಕ್ಬರ್ ಎಂದು ಹೇಳಿ, ಸುಜೂದ್ ಮಾಡಿದರೆ, ನೀವು ಕೂಡ ಅಲ್ಲಾಹು ಅಕ್ಬರ್ ಎಂದು ಹೇಳಿ ಸುಜೂದ್ ಮಾಡಿರಿ. ಇಮಾಂ ನಿಮಗಿಂತ ಮೊದಲು ಸುಜೂದ್ ಮಾಡುತ್ತಾರೆ ಮತ್ತು ನಿಮಗಿಂತ ಮೊದಲು ತಲೆ ಎತ್ತುತ್ತಾರೆ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದು ಅದಕ್ಕೆ ಸಮವಾಗಿದೆ. ನೀವು ಕೂರುವ ಸ್ಥಿತಿಗೆ ತಲುಪಿದಾಗ ನಿಮ್ಮ ಪ್ರಪ್ರಥಮ ಮಾತು ಇದಾಗಿರಲಿ: "ಅತ್ತಹಿಯ್ಯಾತು ಅತ್ತಯ್ಯಿಬಾತು ಅಸ್ಸಲವಾತು ಲಿಲ್ಲಾಹಿ, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು."

ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಅಂಗೈಯನ್ನು ಅವರ ಎರಡು ಅಂಗೈಗಳ ಮಧ್ಯದಲ್ಲಿಟ್ಟು, ಕುರ್‌ಆನಿನ ಒಂದು ಅಧ್ಯಾಯವನ್ನು ಕಲಿಸಿಕೊಡುವಂತೆ ನನಗೆ ತಶಹ್ಹುದ್ ಕಲಿಸಿಕೊಟ್ಟರು: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು." (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ. ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ಇನ್ನೊಂದು ವರದಿಯಲ್ಲಿ: "ನಿಶ್ಚಯವಾಗಿಯೂ ಅಲ್ಲಾಹು ಶಾಂತಿಯಾಗಿದ್ದಾನೆ. ಆದ್ದರಿಂದ ನಿಮ್ಮಲ್ಲೊಬ್ಬರು ನಮಾಝಿನಲ್ಲಿ ಕುಳಿತುಕೊಳ್ಳುವಾಗ ಹೀಗೆ ಹೇಳಲಿ: ಅತ್ತಹಿಯ್ಯಾತು ಲಿಲ್ಲಾಹಿ, ವಸ್ಸಲವಾತು, ವತ್ತಯ್ಯಿಬಾತು, ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು, ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಾಹಿ ಸ್ಸಾಲಿಹೀನ್. (ಅಭಿವಂದನೆಗಳು, ನಮಾಝ್‌ಗಳು ಮತ್ತು ಅತ್ಯುತ್ತಮವಾದುದೆಲ್ಲವೂ ಅಲ್ಲಾಹನಿಗೆ ಮೀಸಲು. ಓ ಪ್ರವಾದಿಯವರೇ! ನಿಮ್ಮ ಮೇಲೆ ಅಲ್ಲಾಹನ ಶಾಂತಿ, ಕರುಣೆ ಮತ್ತು ಸಮೃದ್ಧಿಯಿರಲಿ. ನಮ್ಮ ಮೇಲೆ ಮತ್ತು ಅಲ್ಲಾಹನ ನೀತಿವಂತ ದಾಸರೆಲ್ಲರ ಮೇಲೆ ಶಾಂತಿಯಿರಲಿ). ಹೀಗೆ ಹೇಳಿದರೆ ಭೂಮ್ಯಾಕಾಶಗಳಲ್ಲಿರುವ ಅಲ್ಲಾಹನ ಎಲ್ಲಾ ನೀತಿವಂತ ದಾಸರಿಗೂ ಅದು ಅನ್ವಯಿಸುತ್ತದೆ. ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹು ವ ಅಶ್‌ಹದು ಅನ್ನ ಮುಹಮ್ಮದನ್ ಅಬ್ದುಹೂ ವರಸೂಲುಹು. (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ದೇವರಿಲ್ಲ ಎಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ). ನಂತರ ಅವರಿಗೆ ಇಷ್ಟವಾದ ಪ್ರಾರ್ಥನೆಯನ್ನು ಪ್ರಾರ್ಥಿಸಬಹುದು."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಾ ಹೇಳುತ್ತಿದ್ದರು: "ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ." ಮುಸ್ಲಿಂರ ಇನ್ನೊಂದು ವರದಿಯಲ್ಲಿ: "ನಿಮ್ಮಲ್ಲೊಬ್ಬನು ಕೊನೆಯ ತಶಹ್ಹುದ್ ಪಠಿಸಿದ ನಂತರ ನಾಲ್ಕು ವಿಷಯಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡಲಿ. ನರಕ ಶಿಕ್ಷೆಯಿಂದ, ಸಮಾಧಿಯ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಕೆಡುಕಿನಿಂದ."

ಮಅದಾನ್ ಬಿನ್ ಅಬೂ ತಲ್ಹ ಯಅಮರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವತಂತ್ರಗೊಳಿಸಿದ ಗುಲಾಮನಾದ ಸೌಬಾನ್‌ರನ್ನು ಭೇಟಿಯಾಗಿ ಹೇಳಿದೆ: ನನಗೆ ಒಂದು ಕರ್ಮವನ್ನು ತಿಳಿಸಿಕೊಡಿ. ನಾನು ಅದನ್ನು ಮಾಡಿದರೆ ಅದರ ಮೂಲಕ ಅಲ್ಲಾಹು ನನ್ನನ್ನು ಸ್ವರ್ಗಕ್ಕೆ ಪ್ರವೇಶಗೊಳಿಸಬೇಕು. ಅಥವಾ ನಾನು ಹೀಗೆ ಹೇಳಿದೆ: ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮವನ್ನು ತಿಳಿಸಿಕೊಡಿ. ಅವರು ಮೌನವಾದರು. ನಾನು ಪುನಃ ಕೇಳಿದೆ. ಆದರೆ ಅವರು ಮೌನವಾದರು. ನಾನು ಮೂರನೇ ಬಾರಿ ಕೇಳಿದಾಗ ಅವರು ಹೇಳಿದರು: ನಾನು ಇದೇ ವಿಷಯವನ್ನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದ್ದೆ. ಆಗ ಅವರು ಹೀಗೆ ಉತ್ತರಿಸಿದರು: "ಅಲ್ಲಾಹನಿಗೆ ಅತ್ಯಧಿಕವಾಗಿ ಸುಜೂದ್ ಮಾಡಿರಿ. ಏಕೆಂದರೆ ನೀವು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿಮಗೆ ಒಂದುಸ್ಥಾನಯನ್ನು ಏರಿಸುವನು ಮತ್ತು ನಿಮ್ಮಿಂದ ಒಂದು ಪಾಪವನ್ನು ಅಳಿಸುವನು." ಮಅದಾನ್ ಹೇಳಿದರು: ನಂತರ ನಾನು ಅಬೂ ದರ್ದಾಅ್‌ರನ್ನು ಭೇಟಿಯಾಗಿ ಇದೇ ಪ್ರಶ್ನೆಯನ್ನು ಕೇಳಿದೆ. ಅವರು ಕೂಡ ಸೌಬಾನ್ ಹೇಳಿದಂತೆಯೇ ಹೇಳಿದರು.

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆಹಾರವು ಸಿದ್ಧವಾಗಿರುವಾಗ ಮತ್ತು ಮಲಮೂತ್ರಗಳನ್ನು ಅದುಮಿಕೊಂಡು ನಮಾಝ್ ನಿರ್ವಹಿಸಬಾರದು."

ಉಸ್ಮಾನ್ ಬಿನ್ ಅಬುಲ್ ಆಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಶೈತಾನನು ನನ್ನ ಮತ್ತು ನನ್ನ ನಮಾಝ್ ಹಾಗೂ ಕುರ್‌ಆನ್ ಪಠಣದ ನಡುವೆ ಬಂದು ಗಲಿಬಿಲಿಗೊಳಿಸುತ್ತಾನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ." ಅವರು ಹೇಳುತ್ತಾರೆ: "ನಾನು ಹಾಗೆ ಮಾಡಿದೆ. ಆಗ ಅಲ್ಲಾಹು ಅವನನ್ನು ನನ್ನಿಂದ ದೂರವಿರಿಸಿದನು."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಳ್ಳತನ ಮಾಡುವವರಲ್ಲಿ ಅತಿಕೆಟ್ಟವರು ನಮಾಝ್‌ನಲ್ಲಿ ಕಳ್ಳತನ ಮಾಡುವವರು." ಸಹಾಬಿಗಳು ಕೇಳಿದರು: "ನಮಾಝ್‌ನಲ್ಲಿ ಕಳ್ಳತನ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅದರ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸದಿರುವುದು."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಮಾಮರು ತಲೆ ಎತ್ತುವುದಕ್ಕಿಂತ ಮೊದಲು ತಲೆ ಎತ್ತುವವರು, ಅಲ್ಲಾಹು ಅವರ ತಲೆಯನ್ನು ಕತ್ತೆಯ ತಲೆಯಾಗಿ, ಅಥವಾ ಅವರ ರೂಪವನ್ನು ಕತ್ತೆಯ ರೂಪವಾಗಿ ಮಾರ್ಪಡಿಸುವನು ಎಂದು ಭಯಪಡುವುದಿಲ್ಲವೇ?"

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರಿಗೆ ನಮಾಝ್‌ನಲ್ಲಿ ಸಂಶಯವುಂಟಾಗಿ ತಾನು ಮೂರು ರಕಅತ್ ನಿರ್ವಹಿಸಿದ್ದೇನೋ ಅಥವಾ ನಾಲ್ಕು ರಕಅತ್ ನಿರ್ವಹಿಸಿದ್ದೇನೋ ಎಂದು ತಿಳಿಯಲಾಗದಿದ್ದರೆ, ಅವನು ಆ ಸಂಶಯವನ್ನು ಉಪೇಕ್ಷಿಸಿ ತನಗೆ ಖಾತ್ರಿಯಿರುವುದರ ಆಧಾರದಲ್ಲಿ ಮುಂದುವರಿಯಲಿ. ನಂತರ, ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್‌ಗಳನ್ನು ನಿರ್ವಹಿಸಲಿ. ಅವನು ಐದು ರಕಅತ್ ನಿರ್ವಹಿಸಿದ್ದರೆ, ಅವು ಅವನ ನಮಾಝನ್ನು ಸಮ ಸಂಖ್ಯೆಯಲ್ಲಿಡುತ್ತವೆ. ಇನ್ನು ಅವನು ಪೂರ್ಣವಾಗಿ ನಾಲ್ಕು ರಕಅತ್ ನಿರ್ವಹಿಸಿದ್ದರೆ, ಅವು ಶೈತಾನನಿಗೆ ಅವಮಾನವಾಗುತ್ತವೆ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಉದಯವಾಗುವ ದಿನಗಳಲ್ಲಿ ಅತಿಶ್ರೇಷ್ಠವಾದ ದಿನ ಜುಮಾ (ಶುಕ್ರವಾರ،) ದಿನ. ಅಂದು ಆದಮರನ್ನು ಸೃಷ್ಟಿಸಲಾಯಿತು, ಅಂದು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಾಯಿತು ಮತ್ತು ಅಂದು ಅವರನ್ನು ಸ್ವರ್ಗದಿಂದ ಹೊರಹಾಕಲಾಯಿತು. ಅಂತ್ಯಸಮಯವು ಶುಕ್ರವಾರವಲ್ಲದೆ ಸಂಭವಿಸುವುದಿಲ್ಲ."

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಂತರ, ಇಮಾಮರು ಹೊರ ಬಂದರೆ ದೇವದೂತರುಗಳು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ."