/ ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ...

ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ...

ಉಸ್ಮಾನ್ ಬಿನ್ ಅಬುಲ್ ಆಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಶೈತಾನನು ನನ್ನ ಮತ್ತು ನನ್ನ ನಮಾಝ್ ಹಾಗೂ ಕುರ್‌ಆನ್ ಪಠಣದ ನಡುವೆ ಬಂದು ಗಲಿಬಿಲಿಗೊಳಿಸುತ್ತಾನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಅವನ ಅನುಭವವಾದರೆ, ಅವನ ವಿರುದ್ಧ ಅಲ್ಲಾಹನಲ್ಲಿ ರಕ್ಷೆ ಬೇಡಿರಿ, ಮತ್ತು ನಿಮ್ಮ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿಯಿರಿ." ಅವರು ಹೇಳುತ್ತಾರೆ: "ನಾನು ಹಾಗೆ ಮಾಡಿದೆ. ಆಗ ಅಲ್ಲಾಹು ಅವನನ್ನು ನನ್ನಿಂದ ದೂರವಿರಿಸಿದನು."
رواه مسلم

ವಿವರಣೆ

ಉಸ್ಮಾನ್ ಬಿನ್ ಅಬುಲ್ ಆಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಶೈತಾನನು ನನ್ನ ಹಾಗೂ ನನ್ನ ನಮಾಝಿನ ಮಧ್ಯೆ ಅಡ್ಢವಾಗಿ ನಿಂತು, ನನ್ನ ವಿನಮ್ರತೆಗೆ ತೊಂದರೆ ಕೊಡುತ್ತಿದ್ದಾನೆ ಮತ್ತು ಕುರ್‌ಆನ್ ಪಠಣದಲ್ಲಿ ಗಲಿಬಿಲಿಗೊಳಿಸಿ ಸಂಶಯವುಂಟಾಗುವಂತೆ ಮಾಡುತ್ತಿದ್ದಾನೆ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಖಿನ್‌ಝಬ್ ಎಂಬ ಹೆಸರಿನ ಶೈತಾನ್. ನಿಮಗೆ ಇಂತಹ ಸ್ಥಿತಿಯು ಅನುಭವವಾದರೆ ಅಲ್ಲಾಹನಲ್ಲಿ ರಕ್ಷೆಯನ್ನು ಬೇಡಿರಿ ಮತ್ತು ನಿಮ್ಮ ಎಡಭಾಗಕ್ಕೆ ಹಗುರವಾಗಿ ಮೂರು ಸಲ ಉಗಿಯಿರಿ." ಉಸ್ಮಾನ್ ಹೇಳುತ್ತಾರೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದಂತೆ ನಾನು ಮಾಡಿದಾಗ, ಅಲ್ಲಾಹು ಅವನನ್ನು ನನ್ನಿಂದ ದೂರ ಸರಿಸಿದನು."

Hadeeth benefits

  1. ನಮಾಝಿನಲ್ಲಿ ವಿನಮ್ರತೆ ಮತ್ತು ಹೃದಯ ಸಾನಿಧ್ಯತೆಯ ಪ್ರಾಮುಖ್ಯತೆಯನ್ನು ಮತ್ತು ಶೈತಾನನು ಗಲಿಬಿಲಿ ಮತ್ತು ಗೊಂದಲಗೊಳಿಸಲು ಅತಿಯಾಗಿ ಪ್ರಯತ್ನಿಸುತ್ತಾನೆಂದು ತಿಳಿಸಲಾಗಿದೆ.
  2. ಶೈತಾನನ ಪಿಸುಗುಡುವಿಕೆ ಅನುಭವಕ್ಕೆ ಬರುವಾಗ ಎಡಭಾಗಕ್ಕೆ ಮೂರು ಸಲ ಹಗುರವಾಗಿ ಉಗಿದು ಅಲ್ಲಾಹನಲ್ಲಿ ರಕ್ಷೆ ಬೇಡುವುದು ಅಪೇಕ್ಷಣೀಯವಾಗಿದೆ.
  3. ಸಹಾಬಿಗಳಿಗೆ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಯಾವುದಾದರೂ ಸಮಸ್ಯೆಗಳು ಎದುರಾದಾಗ, ಅವರು ಅವುಗಳ ಪರಿಹಾರಕ್ಕಾಗಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬರುತ್ತಿದ್ದ ರೆಂದು ವಿವರಿಸಲಾಗಿದೆ.
  4. ಸಹಾಬಿಗಳ ಹೃದಯ ಜೀವಂತಿಕೆಯನ್ನು ಮತ್ತು ಅವರ ಉದ್ದೇಶವು ಪರಲೋಕವಾಗಿತ್ತೆಂಬುದನ್ನು ತಿಳಿಸಲಾಗಿದೆ.