- ನಮಾಝ್ ಮಾಡುವವನಿಗೆ ತನ್ನ ನಮಾಝ್‌ನಲ್ಲಿ ಸಂಶಯವುಂಟಾಗಿ ಎಷ್ಟು ರಕಅತ್ ಎಂದು ಅವನಿಗೆ ಖಚಿತವಾಗದಿದ್ದರೆ, ಸಂಶಯವನ್ನು ತೊರೆದು ಖಾತ್ರಿಯನ್ನು, ಅಂದರೆ ಕನಿಷ್ಠ ಸಂಖ್ಯೆಯನ್ನು ಅವಲಂಬಿಸಬೇಕಾಗಿದೆ. ನಂತರ, ನಮಾಝನ್ನು ಪೂರ್ಣಗೊಳಿಸಿ ಸಲಾಂ ಹೇಳುವುದಕ್ಕೆ ಮೊದಲು ಎರಡು ಸುಜೂದ್‌ಗಳನ್ನು ನಿರ್ವಹಿಸಿ, ನಂತರ ಸಲಾಂ ಹೇಳಬೇಕಾಗಿದೆ.
- ಈ ಎರಡು ಸುಜೂದ್‌ಗಳು ನಮಾಝ್‌ಗೆ ತೇಪೆ ಹಚ್ಚುತ್ತವೆ ಮತ್ತು ಶೈತಾನನನ್ನು ಅವಮಾನಿತನಾಗಿ, ತಿರಸ್ಕೃತನಾಗಿ ಮತ್ತು ಬಹಿಷ್ಕೃತನಾಗಿ ಹಿಮ್ಮೆಟ್ಟಿಸುತ್ತದೆ.
- ಹದೀಸಿನಲ್ಲಿ ಉಲ್ಲೇಖಿಸಲಾಗಿರುವುದು ಯಾವುದೇ ಖಚಿತತೆಯಿಲ್ಲದ ಸಂಶಯದ ಬಗ್ಗೆಯಾಗಿದೆ. ಆದರೆ ಖಚಿತತೆಯಿದ್ದರೆ ಅದರ ಪ್ರಕಾರ ಕಾರ್ಯ ನಿರ್ವಹಿಸಬೇಕಾಗಿದೆ.
- ಭ್ರಾಂತಿಗಳ ವಿರುದ್ಧ ಹೋರಾಡಲು ಮತ್ತು ಧರ್ಮಶಾಸ್ತ್ರದ ಆಜ್ಞೆಯನ್ನು ಪಾಲಿಸುವ ಮೂಲಕ ಅವುಗಳನ್ನು ದೂರೀಕರಿಸಲು ಪ್ರೋತ್ಸಾಹಿಸಲಾಗಿದೆ.