- ವಾರದ ಇತರ ದಿನಗಳ ಮೇಲೆ ಶುಕ್ರವಾರಕ್ಕಿರುವ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
- ಶುಕ್ರವಾರದಂದು ಸತ್ಕರ್ಮಗಳನ್ನು ಹೆಚ್ಚಿಸುವುದನ್ನು ಮತ್ತು ಅಲ್ಲಾಹನ ಕರುಣೆಯನ್ನು ಸಂಪಾದಿಸಲು ಹಾಗೂ ಅವನ ಶಿಕ್ಷೆಯಿಂದ ದೂರವಾಗಲು ಸ್ವಯಂ ಸನ್ನದ್ಧರಾಗುವುದನ್ನು ಪ್ರೋತ್ಸಾಹಿಸಲಾಗಿದೆ.
- ಶುಕ್ರವಾರದ ವಿಶೇಷತೆಗಳಾಗಿ ಹದೀಸಿನಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಶುಕ್ರವಾರದ ಶ್ರೇಷ್ಠತೆಯನ್ನು ತಿಳಿಸುವುದಕ್ಕಾಗಿ ಉಲ್ಲೇಖಿಸಿದ್ದಲ್ಲ ಎಂದು ಕೆಲವರು ಹೇಳಿದ್ದಾರೆ. ಏಕೆಂದರೆ, ಆದಮರನ್ನು ಹೊರಹಾಕಿರುವುದು ಮತ್ತು ಅಂತ್ಯಸಮಯವು ಸಂಭವಿಸುವುದು ಶ್ರೇಷ್ಠತೆಗಳೆಂದು ಪರಿಗಣಿಸಲಾಗುವುದಿಲ್ಲ. ಕೆಲವರು ಹೀಗೆ ಹೇಳಿದ್ದಾರೆ: ಅವೆಲ್ಲವೂ ಶ್ರೇಷ್ಠತೆಗಳಾಗಿವೆ. ಆದಮರನ್ನು ಹೊರಹಾಕಿರುವುದು ಸಂದೇಶವಾಹಕರು, ಪ್ರವಾದಿಗಳು ಮತ್ತು ನೀತಿವಂತರು ಸೇರಿದಂತೆ ಅವರ ಸಂತಾನವು ಅಸ್ತಿತ್ವಕ್ಕೆ ಬರಲು ಕಾರಣವಾಗಿದೆ. ಅಂತ್ಯಸಮಯವು ಸಂಭವಿಸುವುದು ನೀತಿವಂತರಿಗೆ ಬೇಗನೇ ಪ್ರತಿಫಲ ನೀಡಲು ಮತ್ತು ಅಲ್ಲಾಹು ಅವರಿಗೆ ಸಿದ್ಧಗೊಳಿಸಿಟ್ಟಿರುವ ಗೌರವಾದರಗಳನ್ನು ಅವರು ಸ್ವೀಕರಿಸಲು ಕಾರಣವಾಗಿದೆ.
- ಶುಕ್ರವಾರಕ್ಕೆ ಈ ಹದೀಸಿನಲ್ಲಿ ಉಲ್ಲೇಖಿಸಿರದ ಬೇರೆ ಕೆಲವು ವಿಶೇಷತೆಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ: ಅಂದು ಆದಮರ ಪಶ್ಚಾತ್ತಾಪವನ್ನು ಸ್ವೀಕರಿಸಲಾಯಿತು ಮತ್ತು ಅಂದು ಅವರ ಆತ್ಮವನ್ನು ವಶಪಡಿಸಲಾಯಿತು. ಅದರಲ್ಲೊಂದು ವೇಳೆಯಿದ್ದು, ಆ ವೇಳೆಯಲ್ಲಿ ಸತ್ಯ ವಿಶ್ವಾಸಿಯು ನಮಾಝ್ ಮಾಡಿ ಅಲ್ಲಾಹನಲ್ಲಿ ಏನಾದರೂ ಬೇಡಿದರೆ, ಅಲ್ಲಾಹು ಅದನ್ನು ಅವನಿಗೆ ಕೊಡದೇ ಇರಲಾರನು.
- ವರ್ಷದ ಶ್ರೇಷ್ಠ ದಿನ ಅರಫಾ ದಿನ. ಬಲಿ ದಿನ (ಬಕ್ರೀದ್ ಹಬ್ಬದ ದಿನ) ಎಂದೂ ಹೇಳಲಾಗುತ್ತದೆ. ವಾರದ ಶ್ರೇಷ್ಠ ದಿನ ಶುಕ್ರವಾರ. ರಾತ್ರಿಗಳಲ್ಲಿ ಶ್ರೇಷ್ಠವಾದುದು ಲೈಲತುಲ್ ಕದ್ರ್‌ನ ರಾತ್ರಿ.