- ಇಮಾಮರ ಹಿಂದೆ ನಮಾಝ್ ಮಾಡುವವರಿಗೆ ಇಮಾಮರೊಂದಿಗೆ ನಾಲ್ಕು ಸ್ಥಿತಿಗಳಿವೆ. ಮೂರು ಸ್ಥಿತಿಗಳನ್ನು ವಿರೋಧಿಸಲಾಗಿದೆ. ಅವು: ಇಮಾಮರಿಗಿಂತ ಮೊದಲು ನಿರ್ವಹಿಸುವುದು, ಇಮಾಮರ ಜೊತೆಗೆ ನಿರ್ವಹಿಸುವುದು ಮತ್ತು ಇಮಾಮರಿಗಿಂತ ತಡ ಮಾಡಿ ನಿರ್ವಹಿಸುವುದು. ಸರಿಯಾದ ವಿಧಾನ ಯಾವುದೆಂದರೆ, ಇಮಾಮರು ಒಂದು ಕ್ರಿಯೆಯನ್ನು ನಿರ್ವಹಿಸಿದ ತಕ್ಷಣ ನಿರ್ವಹಿಸುವುದು.
- ನಮಾಝಿನಲ್ಲಿ ಹಿಂದೆ ಇರುವವರು ಇಮಾಮರನ್ನು ಅನುಸರಿಸುವುದು ಕಡ್ಡಾಯವಾಗಿದೆ.
- ಇಮಾಮರಿಗಿಂತ ಮೊದಲು ತಲೆಯೆತ್ತುವವರ ರೂಪವನ್ನು ಕತ್ತೆಯಾಗಿ ಪರಿವರ್ತಿಸಲಾಗಬಹುದು ಎಂಬ ಎಚ್ಚರಿಕೆಯು ಸಂಭವಿಸಬಹುದಾಗಿದ್ದು, ಅದು ರೂಪ ಪರಿವರ್ತನೆಯಲ್ಲಿ ಒಳಪಡುತ್ತದೆ.