- ಶುಕ್ರವಾರ ಸ್ನಾನ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ. ಅದು ನಮಾಝಿಗೆ ಹೊರಡುವ ಮೊದಲು ಆಗಿರಬೇಕು.
- ದಿನದ ಪ್ರಾರಂಭದಲ್ಲೇ ಜುಮಾ ನಮಾಝ್‌ಗಾಗಿ ತ್ವರೆ ಮಾಡುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
- ಒಳಿತಿನ ಕರ್ಮಗಳನ್ನು ಮಾಡಲು ತ್ವರೆ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ.
- ದೇವದೂತರುಗಳು ಜುಮಾ ನಮಾಝ್‌ನಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಪ್ರವಚನಕ್ಕೆ ಕಿವಿಗೊಡುತ್ತಾರೆಂದು ತಿಳಿಸಲಾಗಿದೆ.
- ದೇವದೂತರುಗಳು ಮಸೀದಿಗಳ ಬಾಗಿಲುಗಳಲ್ಲಿ ನಿಂತು, ಜುಮಾ ನಮಾಝಿಗೆ ಮೊದಲು ಆಗಮಿಸುವವರನ್ನು ಮೊದಲು ಎಂಬ ರೀತಿಯಲ್ಲಿ ದಾಖಲಿಸುತ್ತಾರೆ.
- ಇಬ್ನ್ ರಜಬ್ ಹೇಳಿದರು: "ಶುಕ್ರವಾರದ ಅಪೇಕ್ಷಣೀಯ ಸ್ನಾನದ ಸಮಯವು ಮುಂಜಾನೆಯ ಉದಯದೊಂದಿಗೆ ಆರಂಭವಾಗಿ ಜುಮಾ ನಮಾಝಿಗೆ ಹೊರಡುವಾಗ ಕೊನೆಗೊಳ್ಳುತ್ತದೆ ಎಂಬುದಕ್ಕೆ "ಶುಕ್ರವಾರ ಸ್ನಾನ ಮಾಡಿ, ನಂತರ ಹೊರಡುವವನು" ಎಂಬ ಮಾತು ಪುರಾವೆಯಾಗಿದೆ."