- ತಶಹ್ಹುದ್‌ನ ರೂಪಗಳಲ್ಲಿ ಒಂದು ರೂಪವನ್ನು ವಿವರಿಸಲಾಗಿದೆ.
- ನಮಾಝಿನಲ್ಲಿ ಮಾಡುವ ಕ್ರಿಯೆಗಳು ಮತ್ತು ಹೇಳುವ ಮಾತುಗಳು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಬೀತಾಗಿರಬೇಕು. ಪ್ರವಾದಿಚರ್ಯೆಯಲ್ಲಿ ಸಾಬೀತಾಗದ ಯಾವುದೇ ಮಾತು ಅಥವಾ ಕ್ರಿಯೆಯನ್ನು ಸ್ವಯಂ ನಿರ್ಮಿಸಲು ಯಾರಿಗೂ ಅನುಮತಿಯಿಲ್ಲ.
- ಇಮಾಮರ ಹಿಂದೆ ನಮಾಝ್ ಮಾಡುವಾಗ ಅವರನ್ನು ದಾಟಿ ಮುಂದಕ್ಕೆ ಹೋಗಬಾರದು ಮತ್ತು ಬಹಳ ಹಿಂದೆಯೂ ಉಳಿಯಬಾರದು. ಇಮಾಮರ ಹಿಂದೆ ನಮಾಝ್ ಮಾಡುವವರು ಇಮಾಮರ ಎಲ್ಲಾ ಕ್ರಿಯೆಗಳನ್ನು ಹಿಂಬಾಲಿಸಬೇಕು.
- ಸಂದೇಶವನ್ನು ತಲುಪಿಸುವುದಕ್ಕೆ ಮತ್ತು ಸಮುದಾಯಕ್ಕೆ ಧಾರ್ಮಿಕ ನಿಯಮಗಳನ್ನು ಕಲಿಸುವುದಕ್ಕೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡುತ್ತಿದ್ದ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
- ಇಮಾಂ ಅವರ ಹಿಂಬಾಲಕರಿಗೆ ಮಾದರಿಯಾಗಿದ್ದಾರೆ. ಆದ್ದರಿಂದ ನಮಾಝ್‌ನ ಯಾವುದೇ ಕ್ರಿಯೆಯನ್ನು ಇಮಾಮರಿಗಿಂತ ಮೊದಲು ನಿರ್ವಹಿಸಬಾರದು ಮತ್ತು ಇಮಾಮರ ಜೊತೆ ಜೊತೆಯಾಗಿಯೂ ನಿರ್ವಹಿಸಬಾರದು. ಇಮಾಮರಿಗಿಂತ ಬಹಳ ತಡವಾಗಿಯೂ ನಿರ್ವಹಿಸಬಾರದು. ಬದಲಿಗೆ, ಇಮಾಮರು ಒಂದು ಕ್ರಿಯೆಯಲ್ಲಿ ಪ್ರವೇಶಿಸಿದ್ದಾರೆಂದು ಖಾತ್ರಿಯಾದ ನಂತರ ಆ ಕ್ರಿಯೆಯನ್ನು ಮಾಡಬೇಕು.
- ನಮಾಝ್ ಮಾಡುವಾಗ ಸಾಲುಗಳನ್ನು ಸರಿಪಡಿಸಬೇಕು.