/ ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ...

ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಾ ಹೇಳುತ್ತಿದ್ದರು: "ಓ ಅಲ್ಲಾಹ್! ನಾನು ನಿನ್ನಲ್ಲಿ ಸಮಾಧಿಯ ಶಿಕ್ಷೆಯಿಂದ, ನರಕ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಪರೀಕ್ಷೆಯಿಂದ ರಕ್ಷೆ ಬೇಡುತ್ತೇನೆ." ಮುಸ್ಲಿಂರ ಇನ್ನೊಂದು ವರದಿಯಲ್ಲಿ: "ನಿಮ್ಮಲ್ಲೊಬ್ಬನು ಕೊನೆಯ ತಶಹ್ಹುದ್ ಪಠಿಸಿದ ನಂತರ ನಾಲ್ಕು ವಿಷಯಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡಲಿ. ನರಕ ಶಿಕ್ಷೆಯಿಂದ, ಸಮಾಧಿಯ ಶಿಕ್ಷೆಯಿಂದ, ಜೀವನ ಮತ್ತು ಮರಣದ ಪರೀಕ್ಷೆಗಳಿಂದ ಮತ್ತು ದಜ್ಜಾಲ್‌ನ ಕೆಡುಕಿನಿಂದ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನ ಕೊನೆಯ ತಶಹ್ಹುದ್‌ನ ನಂತರ ಸಲಾಂ ಹೇಳುವುದಕ್ಕೆ ಮೊದಲು ನಾಲ್ಕು ವಿಷಯಗಳಿಂದ ಅಲ್ಲಾಹನಲ್ಲಿ ರಕ್ಷೆ ಬೇಡುತ್ತಿದ್ದರು. ನಾವು ಕೂಡ ರಕ್ಷೆ ಬೇಡಬೇಕೆಂದು ಅವರು ಆದೇಶಿಸಿದರು. 1. ಸಮಾಧಿ ಶಿಕ್ಷೆಯಿಂದ. 2. ನರಕ ಶಿಕ್ಷೆಯಿಂದ. ಇದು ಪುನರುತ್ಥಾನ ದಿನ ಸಂಭವಿಸುತ್ತದೆ. 3. ಜೀವನದ ಪರೀಕ್ಷೆಯಿಂದ—ಅಂದರೆ ಇಹಲೋಕದ ನಿಷಿದ್ಧ ಬಯಕೆಗಳು ಮುಂತಾದ ದಾರಿಗೆಡಿಸುವ ವಿಷಯಗಳಿಂದ, ಮತ್ತು ಮರಣದ ಪರೀಕ್ಷೆಯಿಂದ—ಅಂದರೆ ಮರಣದ ಸಮಯ ಇಸ್ಲಾಂ ಮತ್ತು ಸುನ್ನತ್‌ನಿಂದ ತಪ್ಪಿಹೋಗುವುದು, ಅಥವಾ ಸಮಾಧಿಯಲ್ಲಿ ಇಬ್ಬರು ದೇವದೂತರು ಪ್ರಶ್ನೆ ಕೇಳುವ ಪರೀಕ್ಷೆಯಿಂದ. 4. ಮಸೀಹ್ ದಜ್ಜಾಲನ ಪರೀಕ್ಷೆಯಿಂದ. ಅವನು ಅಂತ್ಯಕಾಲದಲ್ಲಿ ಹೊರಡುತ್ತಾನೆ. ಅವನ ಮೂಲಕ ಅಲ್ಲಾಹು ತನ್ನ ದಾಸರನ್ನು ಪರೀಕ್ಷಿಸುತ್ತಾನೆ. ಇಲ್ಲಿ ಅವನ ಬಗ್ಗೆ ವಿಶೇಷವಾಗಿ ಹೇಳಿದ್ದೇಕೆಂದರೆ, ಅವನ ಪರೀಕ್ಷೆ ಮತ್ತು ದಾರಿತಪ್ಪಿಸುವಿಕೆಯು ಅತ್ಯಂತ ಭಯಾನಕವಾಗಿದೆ.

Hadeeth benefits

  1. ಈ ರಕ್ಷಾ ಪ್ರಾರ್ಥನೆಯು ಶ್ರೇಷ್ಠ ಮತ್ತು ಸಮಗ್ರ ಪ್ರಾರ್ಥನೆಗಳಲ್ಲಿ ಒಂದಾಗಿದೆ. ಏಕೆಂದರೆ, ಇಹಲೋಕ ಮತ್ತು ಪರಲೋಕದ ಎಲ್ಲಾ ಕೆಡುಕುಗಳಿಂದ ರಕ್ಷೆ ಬೇಡುವುದನ್ನು ಇದು ಒಳಗೊಂಡಿದೆ.
  2. ಸಮಾಧಿ ಶಿಕ್ಷೆಯನ್ನು ಮತ್ತು ಅದು ಸತ್ಯವೆಂಬುದನ್ನು ದೃಢೀಕರಿಸಲಾಗಿದೆ.
  3. ಪರೀಕ್ಷೆಗಳ ಅಪಾಯವನ್ನು ಮತ್ತು ಅಲ್ಲಾಹನಲ್ಲಿ ಸಹಾಯ ಯಾಚಿಸುವುದು ಹಾಗೂ ಅವನಲ್ಲಿ ರಕ್ಷೆ ಬೇಡುವುದರ ಮಹತ್ವವನ್ನು ತಿಳಿಸಲಾಗಿದೆ.
  4. ದಜ್ಜಾಲ್ ಹೊರಡುವುದನ್ನು ಮತ್ತು ಅವನ ಭಯಾನಕ ಪರೀಕ್ಷೆಯನ್ನು ದೃಢೀಕರಿಸಲಾಗಿದೆ.
  5. ಕೊನೆಯ ತಶಹ್ಹುದ್‌ನ ನಂತರ ಈ ಪ್ರಾರ್ಥನೆ ಪ್ರಾರ್ಥಿಸುವುದು ಅಪೇಕ್ಷಣೀಯವಾಗಿದೆ.
  6. ಸತ್ಕರ್ಮವೆಸಗಿದ ನಂತರ ಪ್ರಾರ್ಥಿಸುವುದು ಅಪೇಕ್ಷಣೀಯವಾಗಿದೆ.