/ ಆಹಾರವು ಸಿದ್ಧವಾಗಿರುವಾಗ ಮತ್ತು ಮಲಮೂತ್ರಗಳನ್ನು ಅದುಮಿಕೊಂಡು ನಮಾಝ್ ನಿರ್ವಹಿಸಬಾರದು

ಆಹಾರವು ಸಿದ್ಧವಾಗಿರುವಾಗ ಮತ್ತು ಮಲಮೂತ್ರಗಳನ್ನು ಅದುಮಿಕೊಂಡು ನಮಾಝ್ ನಿರ್ವಹಿಸಬಾರದು

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆಹಾರವು ಸಿದ್ಧವಾಗಿರುವಾಗ ಮತ್ತು ಮಲಮೂತ್ರಗಳನ್ನು ಅದುಮಿಕೊಂಡು ನಮಾಝ್ ನಿರ್ವಹಿಸಬಾರದು."
رواه مسلم

ವಿವರಣೆ

ಇಷ್ಟವಾದ ಆಹಾರವು ಸಿದ್ಧವಾಗಿರುವಾಗ ಮತ್ತು ಮನಸ್ಸು ಅದನ್ನು ಬಯಸುತ್ತಿರುವಾಗ ನಮಾಝ್ ನಿರ್ವಹಿಸುವುದನ್ನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿರೋಧಿಸಿದ್ದಾರೆ. ಹಾಗೆಯೇ, ಮಲಮೂತ್ರಗಳನ್ನು ಅದುಮಿಕೊಂಡು ನಮಾಝ್ ನಿರ್ವಹಿಸುವುದನ್ನು ಕೂಡ ಅವರು ವಿರೋಧಿಸಿದ್ದಾರೆ. ಏಕೆಂದರೆ ಇದರಿಂದ ಅವರ ಗಮನವು ಸಂಪೂರ್ಣವಾಗಿ ಮಲಮೂತ್ರಗಳನ್ನು ಅದುಮಿಕೊಳ್ಳುವುದರಲ್ಲೇ ಇರುತ್ತದೆ.

Hadeeth benefits

  1. ನಮಾಝ್ ಮಾಡುವವರು ನಮಾಝ್‌ಗೆ ಪ್ರವೇಶಿಸುವ ಮೊದಲೇ ಅವರ ಏಕಾಗ್ರತೆಗೆ ಭಂಗ ತರುವ ಎಲ್ಲವನ್ನೂ ದೂರವಿಡಬೇಕಾಗಿದೆ.