/ “ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್‌ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”...

“ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್‌ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್‌ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”
متفق عليه

ವಿವರಣೆ

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಅಶ್ಲೀಲ ಕೃತ್ಯಗಳನ್ನು ಮಾಡದೆ—ಅಶ್ಲೀಲ ಕೃತ್ಯಗಳು ಎಂದರೆ ಸಂಭೋಗ ಮತ್ತು ಸಂಭೋಗಕ್ಕೆ ಮುನ್ನುಡಿಯಾಗಿ ಮಾಡುವ ಚುಂಬನ, ಆಲಿಂಗನ, ಸರಸ ಮುಂತಾದ ಕೃತ್ಯಗಳು. ಅಶ್ಲೀಲ ಮಾತುಗಳೂ ಇದರಲ್ಲಿ ಸೇರುತ್ತವೆ—ಮತ್ತು ದುಷ್ಕರ್ಮಗಳನ್ನು ಮಾಡದೆ—ದುಷ್ಕರ್ಮಗಳು ಎಂದರೆ ಪಾಪಗಳು ಮತ್ತು ಕೆಡುಕುಗಳು. ಇಹ್ರಾಮ್‌ನಲ್ಲಿರುವಾಗ ನಿಷೇಧಿಸಲಾಗಿರುವ ಕಾರ್ಯಗಳನ್ನು ಮಾಡುವುದು ಕೂಡ ಇದರಲ್ಲಿ ಒಳಪಡುತ್ತವೆ—ಹಜ್ಜ್ ನಿರ್ವಹಿಸುವ ವ್ಯಕ್ತಿ ಪಾಪರಹಿತವಾಗಿ ಹುಟ್ಟುವ ಮಗುವಿನಂತೆ ಸಂಪೂರ್ಣ ಪಾಪಮುಕ್ತನಾಗಿ ಹಜ್ಜ್‌ನಿಂದ ಮರಳುತ್ತಾನೆ.

Hadeeth benefits

  1. ದುಷ್ಕರ್ಮಗಳನ್ನು ಎಲ್ಲಾ ಸಮಯದಲ್ಲೂ ನಿಷೇಧಿಸಲಾಗಿದೆಯಾದರೂ, ಹಜ್ಜ್ ಕರ್ಮಗಳಿಗೆ ಗೌರವ ನೀಡುವುದಕ್ಕಾಗಿ ಹಜ್ಜ್‌ನ ಸಮಯದಲ್ಲಿ ಅವುಗಳನ್ನು ಬಹಳ ಕಠಿಣವಾಗಿ ನಿಷೇಧಿಸಲಾಗಿದೆ.
  2. ಮನುಷ್ಯರೆಲ್ಲರೂ ಪಾಪರಹಿತವಾಗಿ ಹುಟ್ಟುತ್ತಾರೆ. ಒಬ್ಬರು ಮಾಡಿದ ಪಾಪವನ್ನು ಇನ್ನೊಬ್ಬರು ಹೊರುವುದಿಲ್ಲ ಎಂದು ಈ ಹದೀಸ್ ತಿಳಿಸುತ್ತದೆ.