- ಜನರ ಕೈಯಲ್ಲಿರುವ ಆಸ್ತಿ ವಾಸ್ತವವಾಗಿ ಅಲ್ಲಾಹನ ಆಸ್ತಿಯಾಗಿದೆ. ಧಾರ್ಮಿಕವಾಗಿ ಅಂಗೀಕರಿಸಲಾದ ಮಾರ್ಗಗಳಲ್ಲಿ ಅದನ್ನು ಖರ್ಚು ಮಾಡಬೇಕು ಮತ್ತು ಧಾರ್ಮಿಕವಲ್ಲದ ಮಾರ್ಗಗಳಲ್ಲಿ ಅದನ್ನು ಖರ್ಚು ಮಾಡಬಾರದೆಂಬ ಷರತ್ತಿನೊಂದಿಗೆ ಅಲ್ಲಾಹು ಅದನ್ನು ಅವರಿಗೆ ನೀಡಿದ್ದಾನೆ. ಇದು ಆಡಳಿತಗಾರರು ಮತ್ತು ಸಾಮಾನ್ಯ ಜನರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ.
- ಸಾರ್ವಜನಿಕ ಆಸ್ತಿಯ ಬಗ್ಗೆ ಇಸ್ಲಾಂ ಧರ್ಮವು ಕಠೋರ ನಿಲುವನ್ನು ಹೊಂದಿದೆ. ಸಾರ್ವಜನಿಕ ಆಸ್ತಿಯ ನಿರ್ವಹಣೆಯನ್ನು ವಹಿಸಿಕೊಂಡವರನ್ನು ಅವರು ಅದನ್ನು ಹೇಗೆ ಸಂಗ್ರಹಿಸಿದರು ಮತ್ತು ಖರ್ಚು ಮಾಡಿದರೆಂದು ಪುನರುತ್ಥಾನ ದಿನದಂದು ವಿಚಾರಣೆ ಮಾಡಲಾಗುತ್ತದೆ.
- ಹಣವನ್ನು ಧಾರ್ಮಿಕವಲ್ಲದ ಮಾರ್ಗಗಳಲ್ಲಿ ಖರ್ಚು ಮಾಡುವ ಎಲ್ಲರಿಗೂ ಈ ಎಚ್ಚರಿಕೆ ಅನ್ವಯಿಸುತ್ತದೆ. ಅದು ಅವರದ್ದೇ ಹಣವಾಗಿದ್ದರೂ ಅಥವಾ ಇತರರ ಹಣವಾಗಿದ್ದರೂ ಸಹ.