/ ಒಬ್ಬ ವ್ಯಕ್ತಿ ಜನರಿಗೆ ಸಾಲ ನೀಡುತ್ತಿದ್ದನು. ಅವನು ತನ್ನ ಸೇವಕನೊಂದಿಗೆ ಹೇಳುತ್ತಿದ್ದನು: “ಸಾಲಗಾರ ದಿವಾಳಿಯಾಗಿದ್ದರೆ ಅವನನ್ನು ಕಡೆಗಣಿಸು. ಬಹುಶ ಅಲ್ಲಾಹು ನಮ್ಮ (ಪಾಪಗಳ) ನ್ನೂ ಕಡೆಗಣಿಸಬಹುದು...

ಒಬ್ಬ ವ್ಯಕ್ತಿ ಜನರಿಗೆ ಸಾಲ ನೀಡುತ್ತಿದ್ದನು. ಅವನು ತನ್ನ ಸೇವಕನೊಂದಿಗೆ ಹೇಳುತ್ತಿದ್ದನು: “ಸಾಲಗಾರ ದಿವಾಳಿಯಾಗಿದ್ದರೆ ಅವನನ್ನು ಕಡೆಗಣಿಸು. ಬಹುಶ ಅಲ್ಲಾಹು ನಮ್ಮ (ಪಾಪಗಳ) ನ್ನೂ ಕಡೆಗಣಿಸಬಹುದು...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಒಬ್ಬ ವ್ಯಕ್ತಿ ಜನರಿಗೆ ಸಾಲ ನೀಡುತ್ತಿದ್ದನು. ಅವನು ತನ್ನ ಸೇವಕನೊಂದಿಗೆ ಹೇಳುತ್ತಿದ್ದನು: “ಸಾಲಗಾರ ದಿವಾಳಿಯಾಗಿದ್ದರೆ ಅವನನ್ನು ಕಡೆಗಣಿಸು. ಬಹುಶ ಅಲ್ಲಾಹು ನಮ್ಮ (ಪಾಪಗಳ) ನ್ನೂ ಕಡೆಗಣಿಸಬಹುದು. ಆದ್ದರಿಂದ, ಅವನು (ಮರಣಾನಂತರ) ಅಲ್ಲಾಹನನ್ನು ಭೇಟಿಯಾದಾಗ ಅಲ್ಲಾಹು ಅವನ ಪಾಪಗಳನ್ನು ಕಡೆಗಣಿಸಿದನು.”
متفق عليه

ವಿವರಣೆ

ಜನರೊಡನೆ ಸಾಲ ವ್ಯವಹಾರ ಮಾಡುತ್ತಿದ್ದ, ಅಥವಾ ಅವರಿಗೆ ಸಮಯಾವಕಾಶ ನೀಡಿ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಾರೆ. ಜನರಿಂದ ಬರಬೇಕಾದ ಸಾಲದ ಹಣವನ್ನು ಸಂಗ್ರಹ ಮಾಡುತ್ತಿದ್ದ ತನ್ನ ಸೇವಕನೊಂದಿಗೆ ಆತ ಹೇಳುತ್ತಿದ್ದ: ಸಾಲ ಮರುಪಾವತಿ ಮಾಡಲು ಸಾಮರ್ಥ್ಯವಿಲ್ಲದ ವ್ಯಕ್ತಿಯ ಬಳಿಗೆ ಹೋದರೆ ಆತನನ್ನು ಕಡೆಗಣಿಸು. ಅಂದರೆ ಒಂದೋ ಆತನಿಗೆ ಸ್ವಲ್ಪ ಸಮಯಾವಕಾಶ ನೀಡು; ಆತನನ್ನು ಸತಾಯಿಸಬೇಡ. ಅಥವಾ ಅವನ ಬಳಿ ಏನು ಇದೆಯೋ ಅದನ್ನು ಪಡೆದುಕೋ, ಅದು ಕಡಿಮೆಯಾದರೂ ತೊಂದರೆ ಇಲ್ಲ. ಅಲ್ಲಾಹು ತನ್ನ ಪಾಪಗಳನ್ನು ಮನ್ನಿಸಬೇಕು ಮತ್ತು ಕಡೆಗಣಿಸಬೇಕು ಎಂಬ ಆಸೆ ಮತ್ತು ನಿರೀಕ್ಷೆಯಿಂದಲೇ ಆತ ಹೀಗೆ ಮಾಡುತ್ತಿದ್ದ. ಆದ್ದರಿಂದ, ಆತ ಮರಣ ಹೊಂದಿದಾಗ ಅಲ್ಲಾಹು ಆತನ ಪಾಪಗಳನ್ನು ಮನ್ನಿಸಿ ಕಡೆಗಣಿಸಿದನು.

Hadeeth benefits

  1. ಜನರೊಡನೆ ವ್ಯವಹಾರ ಮಾಡುವಾಗ ಉತ್ತಮವಾಗಿ ವರ್ತಿಸುವುದು, ಕ್ಷಮಿಸುವುದು ಮತ್ತು ಕಷ್ಟದಲ್ಲಿರುವವರನ್ನು ಸತಾಯಿಸದಿರುವುದು ಪುನರುತ್ಥಾನ ದಿನ ಮೋಕ್ಷ ಪಡೆಯಲಿಕ್ಕಿರುವ ಅತಿದೊಡ್ಡ ಕಾರಣವಾಗಿದೆ.
  2. ಜನರಿಗೆ ಸಹಾಯ ಮಾಡುವುದು, ಅಲ್ಲಾಹನಿಗೆ ನಿಷ್ಕಳಂಕನಾಗಿರುವುದು ಮತ್ತು ಅಲ್ಲಾಹನ ಕರುಣೆಗಾಗಿ ಹಂಬಲಿಸುವುದು ಪಾಪಗಳು ಕ್ಷಮಿಸಲ್ಪಡುವುದಕ್ಕಿರುವ ಮಾರ್ಗಗಳಾಗಿವೆ.