/ ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”...

ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕದರ್‌ನ ರಾತ್ರಿಯ ಶ್ರೇಷ್ಠತೆಯನ್ನು ತಿಳಿಸುತ್ತಾರೆ. ಅದು ರಮದಾನ್ ತಿಂಗಳ ಕೊನೆಯ ಹತ್ತರಲ್ಲಿ ಬರುತ್ತದೆ. ಯಾರು ಆ ರಾತ್ರಿಯಲ್ಲಿ ವಿಶ್ವಾಸವಿಟ್ಟು, ಅದರ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟು, ಯಾವುದೇ ತೋರಿಕೆ ಅಥವಾ ಪ್ರಶಂಸೆಯನ್ನು ಬಯಸದೆ ಕೇವಲ ಅಲ್ಲಾಹನ ಪ್ರತಿಫಲವನ್ನು ಮಾತ್ರ ಅಪೇಕ್ಷಿಸುತ್ತಾ, ಆ ರಾತ್ರಿಯಲ್ಲಿ ನಮಾಝ್, ಪ್ರಾರ್ಥನೆ, ಕುರ್‌ಆನ್ ಪಠಣ, ಅಲ್ಲಾಹನ ಸ್ಮರಣೆ, ಮುಂತಾದ ಆರಾಧನಾ ಕರ್ಮಗಳಲ್ಲಿ ಪರಿಶ್ರಮಿಸುತ್ತಾರೋ, ಅವರ ಹಿಂದಿನ ಪಾಪಗಳೆಲ್ಲವನ್ನೂ ಕ್ಷಮಿಸಲಾಗುತ್ತದೆ.

Hadeeth benefits

  1. ಈ ಹದೀಸ್ ಕದ್ರ್‌ನ ರಾತ್ರಿಯ ಶ್ರೇಷ್ಠತೆಯನ್ನು ತಿಳಿಸುತ್ತದೆ ಮತ್ತು ಆ ರಾತ್ರಿಯಲ್ಲಿ ನಮಾಝ್ ನಿರ್ವಹಿಸುವುದನ್ನು ಪ್ರೋತ್ಸಾಹಿಸುತ್ತದೆ.
  2. ಪ್ರಾಮಾಣಿಕವಾದ ಉದ್ದೇಶ (ನಿಯ್ಯತ್) ಇದ್ದರೆ ಮಾತ್ರ ಸತ್ಕರ್ಮಗಳು ಸ್ವೀಕಾರವಾಗುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
  3. ಅಲ್ಲಾಹನ ಅನುಗ್ರಹ ಮತ್ತು ದಯೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದ್ರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುವವರ ಹಿಂದಿನ ಪಾಪಗಳನ್ನು ಕ್ಷಮಿಸಲಾಗುತ್ತದೆ.