- ದುಲ್‌ಹಿಜ್ಜ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾಡುವ ಸತ್ಕರ್ಮಗಳ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ. ಆದ್ದರಿಂದ ಮುಸಲ್ಮಾನರು ಈ ದಿನಗಳನ್ನು ಸದುಪಯೋಗಪಡಿಸಬೇಕು ಮತ್ತು ಈ ದಿನಗಳಲ್ಲಿ ಅಲ್ಲಾಹನನ್ನು ಸ್ಮರಿಸುವುದು, ಕುರ್‌ಆನ್ ಪಠಿಸುವುದು, ತಕ್ಬೀರ್, ತಹ್ಲೀಲ್ ಮತ್ತು ತಹ್ಮೀದ್‌ಗಳನ್ನು ಹೇಳುವುದು, ನಮಾಝ್ ಮತ್ತು ದಾನ ಧರ್ಮ ಮಾಡುವುದು, ಉಪವಾಸ ಆಚರಿಸುವುದು ಮುಂತಾದ ಎಲ್ಲಾ ರೀತಿಯ ಸತ್ಕರ್ಮಗಳನ್ನು ಹೆಚ್ಚಿಸಬೇಕು.