ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಗುಮಾನಿಯ ಬಗ್ಗೆ ಎಚ್ಚರದಿಂದಿರಿ! ಏಕೆಂದ...
ಮುಸ್ಲಿಮರಲ್ಲಿ ಒಡಕು ಮತ್ತು ದ್ವೇಷಕ್ಕೆ ಕಾರಣವಾಗುವ ಕೆಲವು ವಿಚಾರಗಳನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿರೋಧಿಸುತ್ತಾರೆ ಮತ್ತು ಎಚ್ಚರಿಸು...
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನರ ನಡುವಿನ ಸಂಬಂಧಗಳಿಗೆ ಹುಳಿ ಹಿಂಡಲು ಯಾರು ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸು...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪಾಪ ಮಾಡಿದ ಒಬ್ಬ ವ್ಯಕ್ತಿಗೆ ಅಲ್ಲಾಹನ ಕ್ಷಮೆ ಮತ್ತು ಪಾಪವಿಮೋಚನೆ ದೊರೆಯುವ ನಿರೀಕ್ಷೆ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಮಕ್ಕಾ ವಿಜಯದ ದಿನದಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನ...
ಮಕ್ಕಾ ವಿಜಯದ ದಿನದಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: ಓ ಜನರೇ! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ಅಹಂ...
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಜನರ ಪೈಕಿ ಅತಿಯಾಗಿ ದ್ವೇಷಿಸುವುದು...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಜನರ ಪೈಕಿ ತೀವ್ರವಾಗಿ ಮತ್ತು ಅತಿಯಾಗಿ ತರ್ಕ ಮಾಡುವವನನ್ನು ಅತಿ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಗುಮಾನಿಯ ಬಗ್ಗೆ ಎಚ್ಚರದಿಂದಿರಿ! ಏಕೆಂದರೆ ಗುಮಾನಿಯು ಅತಿದೊಡ್ಡ ಸುಳ್ಳು ಮಾತಾಗಿದೆ. ನೀವು ಒಬ್ಬರನ್ನೊಬ್ಬರು ಬೇಹುಗಾರಿಕೆ ಮಾಡಬೇಡಿ, ಒಬ್ಬರು ಇನ್ನೊಬ್ಬರ ಖಾಸಗಿ ವಿಚಾರಗಳನ್ನು ಕೆದಕಬೇಡಿ, ಒಬ್ಬರನ್ನೊಬ್ಬರು ಅಸೂಯೆ ಪಡಬೇಡಿ, ಒಬ್ಬರಿಗೊಬ್ಬರು ಮುಖ ತಿರುಗಿಸಬೇಡಿ, ಒಬ್ಬರನ್ನೊಬ್ಬರು ದ್ವೇಷಿಸಬೇಡಿ. ಓ ಅಲ್ಲಾಹನ ದಾಸರೇ, ನೀವು ಸಹೋದರರಾಗಿರಿ."
ಹುದೈಫ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಚಾಡಿಕೋರ ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು. ಬಹಿರಂಗವಾಗಿ ಪಾಪ ಮಾಡುವ ಒಂದು ರೂಪ ಹೇಗೆಂದರೆ, ಒಬ್ಬ ವ್ಯಕ್ತಿ ರಾತ್ರಿಯಲ್ಲಿ ಒಂದು ಪಾಪವನ್ನು ಮಾಡುತ್ತಾನೆ. ನಂತರ ಅಲ್ಲಾಹು ಅದನ್ನು ಅವನಿಗಾಗಿ ಮುಚ್ಚಿಟ್ಟರೂ, ಮರುದಿನ ಬೆಳಗ್ಗೆ ಅವನು ಹೇಳುತ್ತಾನೆ: "ಓ ಇಂತಿಂತಹವರೇ! ನಾನು ನಿನ್ನೆ ರಾತ್ರಿ ಇಂತಿಂತಹ ಪಾಪ ಮಾಡಿದ್ದೇನೆ. ಅವನ ಪರಿಪಾಲಕನು (ಅಲ್ಲಾಹು) ಅವನ ಪಾಪವನ್ನು ಮುಚ್ಚಿಟ್ಟ ಸ್ಥಿತಿಯಲ್ಲಿ ಅವನು ರಾತ್ರಿಯನ್ನು ಕಳೆದಿದ್ದನು. ಆದರೆ ಬೆಳಗಾದಾಗ ಅವನು ಆ ಮುಚ್ಚಿಗೆಯನ್ನು ತೆರೆದು ಬಿಡುತ್ತಾನೆ."
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಮಕ್ಕಾ ವಿಜಯದ ದಿನದಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡುತ್ತಾ ಹೇಳಿದರು: "ಓ ಜನರೇ! ಅಲ್ಲಾಹು ನಿಮ್ಮಿಂದ ಅಜ್ಞಾನಕಾಲದ ದರ್ಪ ಮತ್ತು ಪೂರ್ವಜರ ಹೆಸರಿನಲ್ಲಿ ಜಂಭಕೊಚ್ಚುವುದನ್ನು ತೆಗೆದುಹಾಕಿದ್ದಾನೆ. ಜನರಲ್ಲಿ ಎರಡು ವಿಧಗಳಿವೆ: ಅಲ್ಲಾಹನ ಗೌರವಕ್ಕೆ ಪಾತ್ರರಾದ ಧರ್ಮನಿಷ್ಠ, ನೀತಿವಂತ ಜನರು ಮತ್ತು ಅಲ್ಲಾಹು ತುಚ್ಛವಾಗಿ ಪರಿಗಣಿಸುವ ಕೆಟ್ಟ, ನತದೃಷ್ಟ ಜನರು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಅಲ್ಲಾಹು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ಅಲ್ಲಾಹು ಹೇಳುತ್ತಾನೆ: "ಜನರೇ! ನಿಶ್ಚಯವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದ್ದೇವೆ. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿಭಿನ್ನ ಜನಾಂಗ ಮತ್ತು ಗೋತ್ರಗಳನ್ನಾಗಿ ಮಾಡಿದೆವು. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಧಿಕ ದೇವಭಯವುಳ್ಳವನು ಯಾರೋ ಅವನೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ಗೌರವಾನ್ವಿತನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸೂಕ್ಷ್ಮ ಜ್ಞಾನಿಯಾಗಿದ್ದಾನೆ." [ಹುಜುರಾತ್ 13]."
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಜನರ ಪೈಕಿ ಅತಿಯಾಗಿ ದ್ವೇಷಿಸುವುದು ಮಹಾ ಜಗಳಗಂಟನನ್ನಾಗಿದೆ."
ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಇಬ್ಬರು ಮುಸ್ಲಿಮರು ತಮ್ಮ ಖಡ್ಗಗಳ ಮೂಲಕ ಪರಸ್ಪರ ಎದುರಾದರೆ, ಕೊಲೆಗಾರನು ಮತ್ತು ಕೊಲೆಯಾದವನು ಇಬ್ಬರೂ ನರಕಕ್ಕೆ ಹೋಗುತ್ತಾರೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಕೊಲೆಗಾರನು ನರಕಕ್ಕೆ ಹೋಗುವುದು ಸರಿ. ಆದರೆ ಕೊಲೆಯಾದವನು ಏಕೆ ನರಕಕ್ಕೆ ಹೋಗಬೇಕು?" ಅವರು ಉತ್ತರಿಸಿದರು: "ಏಕೆಂದರೆ ಅವನಿಗೆ ತನ್ನ ಎದುರಾಳಿಯನ್ನು ಕೊಲ್ಲಬೇಕೆಂಬ ಅತೀವ ಉತ್ಸಾಹವಿತ್ತು."
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ."
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಅವರು ತಮ್ಮ ಕರ್ಮಗಳೊಂದಿಗೆ ತೆರಳಿದ್ದಾರೆ.”
ಅಬೂ ಅಯ್ಯೂಬ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ (ಮುಸಲ್ಮಾನ) ಸಹೋದರನೊಂದಿಗೆ ಮೂರು ರಾತ್ರಿಗಳಿಗಿಂತ ಹೆಚ್ಚು ಮಾತನಾಡದೆ ಇರಲು ಯಾರಿಗೂ ಅನುಮತಿಯಿಲ್ಲ. ಅವರಿಬ್ಬರು ಎದುರಾಗುವಾಗ ಒಬ್ಬ ಆ ಕಡೆ ಮತ್ತು ಇನ್ನೊಬ್ಬ ಈ ಕಡೆ ಮುಖ ತಿರುಗಿಸುತ್ತಾನೆ. ಅವರಲ್ಲಿ ಮೊದಲು ಸಲಾಮ್ ಹೇಳುವವನೇ ಅತ್ಯುತ್ತಮನು.”
ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ ಎರಡು ದವಡೆಗಳ ನಡುವೆ ಮತ್ತು ತನ್ನ ಎರಡು ಕಾಲುಗಳ ನಡುವೆ ಇರುವುದನ್ನು ನಿಯಂತ್ರಿಸುತ್ತೇನೆಂದು ಯಾರು ನನಗೆ ಖಾತ್ರಿ ನೀಡುತ್ತಾನೋ, ಅವನಿಗೆ ನಾನು ಸ್ವರ್ಗದ ಖಾತ್ರಿ ನೀಡುತ್ತೇನೆ."
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹನ್ನೆರಡು ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಅವರು ಹೇಳಿದರು: ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಅತಿಯಾಗಿ ಆಕರ್ಷಿಸಿದ ನಾಲ್ಕು ವಿಷಯಗಳನ್ನು ಕೇಳಿದ್ದೇನೆ. ಅವರು ಹೇಳಿದರು: "ಒಬ್ಬ ಮಹಿಳೆ ತನ್ನ ಜೊತೆಗೆ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದೆ ಎರಡು ದಿನಗಳಷ್ಟು ದೂರದ ಪ್ರಯಾಣ ಮಾಡಬಾರದು. ಎರಡು ದಿನಗಳಲ್ಲಿ—ಈದುಲ್-ಫಿತ್ರ್ ಮತ್ತು ಈದುಲ್-ಅದ್‌ಹಾ—ಉಪವಾಸ ಆಚರಿಸಬಾರದು. ಫಜ್ರ್ ನಮಾಝಿನ ನಂತರ ಸೂರ್ಯೋದಯದವರೆಗೆ ಮತ್ತು ಅಸರ್ ನಮಾಝಿನ ನಂತರ ಸೂರ್ಯಾಸ್ತದವರೆಗೆ ಬೇರೆ ನಮಾಝ್ ಮಾಡಬಾರದು. ಮೂರು ಮಸೀದಿಗಳನ್ನು ಹೊರತುಪಡಿಸಿ ಬೇರೆಲ್ಲಿಗೂ ಯಾತ್ರೆ ಹೋಗಬಾರದು — ಮಸ್ಜಿದುಲ್-ಹರಾಂ, ಮಸ್ಜಿದುಲ್-ಅಕ್ಸಾ ಮತ್ತು ನನ್ನ ಈ ಮಸೀದಿ (ಮಸ್ಜಿದು-ನ್ನಬವಿ)."
ಉಸಾಮ ಬಿನ್ ಝೈದ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಹಿಳೆಯರಿಗಿಂತಲೂ ಹೆಚ್ಚು ಹಾನಿ ಮಾಡುವ ಒಂದು ಪರೀಕ್ಷೆಯನ್ನು ನಾನು ನನ್ನ ನಂತರ ಪುರುಷರಿಗೆ ಬಿಟ್ಟು ಹೋಗುವುದಿಲ್ಲ."