- ಒಬ್ಬ ಮುಸಲ್ಮಾನ ತನ್ನ ಮುಸಲ್ಮಾನ ಸಹೋದರರ ವಿರುದ್ಧ ಹೋರಾಡುವುದನ್ನು ಉಗ್ರವಾಗಿ ಎಚ್ಚರಿಸಲಾಗಿದೆ.
- ಮುಸಲ್ಮಾನರ ವಿರುದ್ಧ ಶಸ್ತ್ರಗಳನ್ನು ಝಳಪಿಸುವುದು ಮತ್ತು ಕೊಲೆಗೈಯುವ ಮೂಲಕ ಭೂಮಿಯಲ್ಲಿ ಅರಾಜಕತೆಯನ್ನು ಹರಡುವುದು ಅತಿದೊಡ್ಡ ದುಷ್ಕೃತ್ಯ ಮತ್ತು ಕಿಡಿಗೇಡಿತನವಾಗಿದೆ.
- ದಂಗೆಕೋರರು, ಕಿಡಿಗೇಡಿಗಳು ಮುಂತಾದವರ ವಿರುದ್ಧ ನ್ಯಾಯವಾದ ರೀತಿಯಲ್ಲಿ ಹೋರಾಡುವುದು ಈ ಎಚ್ಚರಿಕೆಯಲ್ಲಿ ಒಳಪಡುವುದಿಲ್ಲ.
- ಶಸ್ತ್ರ ಮುಂತಾದವುಗಳ ಮೂಲಕ ಮುಸಲ್ಮಾನರನ್ನು ಬೆದರಿಸುವುದು ನಿಷಿದ್ಧವಾಗಿದೆ. ಅದು ತಮಾಷೆಗಾದರೂ ಸರಿಯೇ.