- ಮನುಷ್ಯ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಮೂರು ದಿನ ಅಥವಾ ಅದಕ್ಕಿಂತ ಕಡಿಮೆ ದಿನ ಸಿಟ್ಟು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಮತ್ತು ಸಿಟ್ಟು ನಿವಾರಣೆಯಾಗುವುದಕ್ಕಾಗಿ ಮೂರು ದಿನಗಳವರೆಗೆ ಅದನ್ನು ಕ್ಷಮಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಸಲಾಂ ಹೇಳುವುದರ ಶ್ರೇಷ್ಠತೆಯನ್ನು, ಅದು ಮನಸ್ಸಿನಲ್ಲಿರುವ ಕೋಪವನ್ನು ನಿವಾರಿಸುತ್ತದೆ ಮತ್ತು ಅದು ಪ್ರೀತಿಯ ಸಂಕೇತವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಮುಸಲ್ಮಾನರ ನಡುವೆ ಸಹೋದರತೆ ಮತ್ತು ಅನ್ಯೋನ್ಯತೆ ಬೆಳೆಸಲು ಇಸ್ಲಾಂ ಧರ್ಮವು ತೋರುವ ಉತ್ಸಾಹವನ್ನು ಈ ಹದೀಸ್ ತಿಳಿಸುತ್ತದೆ.