- ವಿವಾಹ ನಿಷಿದ್ಧ ಪುರುಷರಿಲ್ಲದೆ ಮಹಿಳೆ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ.
- ಯಾತ್ರೆಯಲ್ಲಿ ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆ ವಿವಾಹ ನಿಷಿದ್ಧ ಪುರುಷನಂತೆ (ಮಹ್ರಮ್) ಆಗುವುದಿಲ್ಲ. ಏಕೆಂದರೆ, "ಅವಳ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು" ಎಂದು ಹದೀಸಿನಲ್ಲಿ ಹೇಳಲಾಗಿದೆ.
- ಮಹಿಳೆಯ ಜೊತೆಗೆ ಅವಳ ಗಂಡ ಅಥವಾ ವಿವಾಹ ನಿಷಿದ್ಧ ಪುರುಷರು ಇಲ್ಲದಿದ್ದರೆ ಯಾತ್ರೆ ಎಂದು ಕರೆಯಲಾಗುವುದನ್ನೆಲ್ಲಾ ಅವಳಿಗೆ ನಿಷೇಧಿಸಲಾಗಿದೆ. ಈ ಹದೀಸ್ ಕೇಳುಗನ ಪರಿಸ್ಥಿತಿ ಮತ್ತು ಸ್ಥಳಕ್ಕೆ ಅನುಗುಣವಾಗಿ ಹೇಳಲಾಗಿದೆ.
- ಮಹಿಳೆಯ ಗಂಡ, ಅಥವಾ ಅವಳ ತಂದೆ, ಚಿಕ್ಕಪ್ಪ-ದೊಡ್ಡಪ್ಪ, ಸೋದರ ಮಾವ ಮುಂತಾದ ರಕ್ತಸಂಬಂಧದ ಮೂಲಕ ಶಾಶ್ವತವಾಗಿ ವಿವಾಹ ನಿಷಿದ್ಧರಾಗಿರುವವರು, ಅಥವಾ ಸ್ತನಪಾನದ ಮೂಲಕ ಸಂಬಂಧಿಗಳಾದ ತಂದೆ, ಸೋದರ ಮಾವ ಮುಂತಾದ ಸ್ತನಪಾನದಿಂದ ವಿವಾಹ ನಿಷಿದ್ಧರಾಗಿರುವವರು, ಅಥವಾ ಗಂಡನ ತಂದೆ ಮುಂತಾದ ವೈವಾಹಿಕ ಸಂಬಂಧದ ಮೂಲಕ ವಿವಾಹ ನಿಷಿದ್ಧರಾಗಿರುವವರು ಮಹಿಳೆಯ ಮಹ್ರಮ್ (ವಿವಾಹ ನಿಷಿದ್ಧ ಪುರುಷರು) ಆಗಿದ್ದಾರೆ. ಇವರೆಲ್ಲರೂ ಮುಸ್ಲಿಮರು, ಪ್ರೌಢರು, ಬುದ್ಧಿಸ್ಥಿಮಿತದಲ್ಲಿರುವವರು, ವಿಶ್ವಾಸಾರ್ಹರು ಮತ್ತು ಅಭಯ ನೀಡುವವರು ಆಗಿರತಕ್ಕದ್ದು. ಏಕೆಂದರೆ, ಮಹ್ರಮ್ (ವಿವಾಹ ನಿಷಿದ್ಧ ಪುರುಷರು) ನ ನಿಜವಾದ ಉದ್ದೇಶವು, ಮಹಿಳೆಯನ್ನು ಕಾಪಾಡುವುದು, ರಕ್ಷಿಸುವುದು ಮತ್ತು ಅವಳ ಯೋಗಕ್ಷೇಮವನ್ನು ನೋಡಿಕೊಳ್ಳುವುದಾಗಿದೆ.
- ಇಸ್ಲಾಮೀ ಧರ್ಮಶಾಸ್ತ್ರವು ಮಹಿಳೆಯ ಸಂರಕ್ಷಣೆಗೆ ಅತಿಯಾದ ಕಾಳಜಿ ವಹಿಸಿದೆ.
- ಅಸರ್ ನಮಾಝ್ ಮತ್ತು ಫಜ್ರ್ ನಮಾಝಿನ ಬಳಿಕ ನಿರ್ವಹಿಸುವ ನಿರುಪಾಧಿಕ ಐಚ್ಛಿಕ ನಮಾಝ್‌ಗಳು ಸಿಂಧುವಲ್ಲ. ಆದರೆ, ತಪ್ಪಿಹೋದ ಕಡ್ಡಾಯ ನಮಾಝ್‌ಗಳು, ತಹಿಯ್ಯತ್ ನಮಾಝ್ ಮುಂತಾದ ಕಾರಣವಿರುವ ನಮಾಝ್‌ಗಳು ಇದರಿಂದ ಹೊರತಾಗಿವೆ.
- ಸೂರ್ಯೋದಯವಾದ ತಕ್ಷಣ ನಮಾಝ್ ನಿರ್ವಹಿಸುವುದು ನಿಷಿದ್ಧವಾಗಿದೆ. ಬದಲಿಗೆ, ಸೂರ್ಯ ಈಟಿಯ ಗಾತ್ರದಷ್ಟು ಏರುವ ತನಕ, ಅಂದರೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ತನಕ ಕಾಯಬೇಕಾಗಿದೆ.
- ಅಸರ್ ನಮಾಝಿನ ಸಮಯವು ಸೂರ್ಯಾಸ್ತದ ತನಕ ಇದೆ.
- ಮೂರು ಮಸೀದಿಗಳಿಗೆ ಯಾತ್ರೆ ಹೊರಡಲು ಇದರಲ್ಲಿ ಅನುಮತಿಯಿದೆ.
- ಮೂರು ಮಸೀದಿಗಳಿಗೆ ಶ್ರೇಷ್ಠತೆಯಿದೆ ಮತ್ತು ಅವು ಇತರ ಮಸೀದಿಗಳಿಂದ ವಿಶಿಷ್ಟವಾಗಿದೆ.
- ಸಮಾಧಿ ಸಂದರ್ಶನಕ್ಕಾಗಿ ಯಾತ್ರೆ ಹೊರಡಲು ಅನುಮತಿಯಿಲ್ಲ. ಅದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಯಾದರೂ ಸಹ. ಮದೀನದಲ್ಲಿರುವವರಿಗೆ ಅಥವಾ ಇತರ ಶಾಸ್ತ್ರೋಕ್ತ ಅಥವಾ ಧರ್ಮಸಮ್ಮತ ಉದ್ದೇಶಕ್ಕಾಗಿ ಅಲ್ಲಿಗೆ ಹೋದವರಿಗೆ ಮಾತ್ರ ಅದಕ್ಕೆ ಅನುಮತಿಯಿದೆ.