- ಸ್ಪಷ್ಟ ಚಿಹ್ನೆಗಳು ಗೋಚರವಾದರೆ, ನಕಾರಾತ್ಮಕ ಗುಮಾನಿಯು ಹಾನಿಕಾರಕವಲ್ಲ. ಸತ್ಯವಿಶ್ವಾಸಿಗಳು ಯಾವಾಗಲೂ ಜಾಣರು ಮತ್ತು ವಿವೇಚನಾಶೀಲರಾಗಿರಬೇಕು. ದುಷ್ಟ ಜನರಿಂದ ಸುಲಭವಾಗಿ ಮೋಸಹೋಗಬಾರದು.
- ಇಲ್ಲಿ ಎಚ್ಚರಿಕೆ ನೀಡಲಾಗಿರುವುದು ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ಮತ್ತು ಆಳವಾಗಿ ಬೇರೂರುವ ಗುಮಾನಿಗಳ ಬಗ್ಗೆಯಾಗಿದೆ. ಮನಸ್ಸಿನಲ್ಲಿ ಬಂದು ಹೋಗುವ ಆಲೋಚನೆಗಳು ಪ್ರಶ್ನಾರ್ಹವಲ್ಲ.
- ಬೇಹುಗಾರಿಕೆ, ಅಸೂಯೆ ಮುಂತಾದ ಮುಸ್ಲಿಮ್ ಸಮುದಾಯದಲ್ಲಿ ದ್ವೇಷ ಮತ್ತು ಒಡಕಿಗೆ ಕಾರಣವಾಗುವ ಪ್ರವೃತ್ತಿಗಳನ್ನು ನಿಷೇಧಿಸಲಾಗಿದೆ.
- ಹಿತಚಿಂತನೆ ಮತ್ತು ಪ್ರೀತಿಯ ಮೂಲಕ ಸಹ ಮುಸ್ಲಿಮರೊಡನೆ ಸಹೋದರರಂತೆ ವರ್ತಿಸಲು ಉಪದೇಶಿಸಲಾಗಿದೆ.