- ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಷೇಧಿಸಲಾಗಿದೆ ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ.
- ಬದುಕಿರುವವರ ಒಳಿತಿನ ದೃಷ್ಟಿಯಿಂದ ಮತ್ತು ಜಗಳ ಹಾಗೂ ದ್ವೇಷದಿಂದ ಸಮಾಜದ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುನ್ನು ನಿಲ್ಲಿಸಬೇಕಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಮರಣಹೊಂದಿದವರ ಬಗ್ಗೆ ಏಕೆ ಕೆಟ್ಟದಾಗಿ ಮಾತನಾಡಬಾರದು ಎಂಬುದಕ್ಕೆ ಕಾರಣವೇನೆಂದರೆ, ಅವರು ಈಗಾಗಲೇ ತಮ್ಮ ಕರ್ಮಗಳೊಂದಿಗೆ ತೆರಳಿದ್ದು, ಅವರನ್ನು ದೂಷಿಸುವುದರಿಂದ ಯಾರಿಗೂ ಪ್ರಯೋಜನವಿಲ್ಲ; ಬದಲಿಗೆ, ಅದರಿಂದ ಜೀವಂತವಿರುವ ಅವರ ಸಂಬಂಧಿಕರಿಗೆ ತೊಂದರೆಯಾಗುತ್ತದೆ.
- ಯಾವುದೇ ಹಿತವಿಲ್ಲದ ಮಾತುಗಳನ್ನಾಡುವುದು ಮುಸಲ್ಮಾನನಿಗೆ ಭೂಷಣವಲ್ಲ ಎಂದು ಈ ಹದೀಸ್ ತಿಳಿಸುತ್ತದೆ.