- ಹೃದಯದಲ್ಲಿ ಪಾಪ ಮಾಡಲು ದೃಢನಿರ್ಧಾರ ತಾಳಿ ಅದನ್ನು ಕಾರ್ಯರೂಪಕ್ಕೆ ತರಲು ಸಿದ್ಧರಾಗುವವರು ಶಿಕ್ಷೆಗೆ ಅರ್ಹರಾಗುತ್ತಾರೆಂದು ಈ ಹದೀಸ್ ತಿಳಿಸುತ್ತದೆ.
- ಮುಸ್ಲಿಮರು ಪರಸ್ಪರ ಯುದ್ಧ ಮಾಡುವುದರ ಬಗ್ಗೆ ಈ ಹದೀಸ್ ಗಂಭೀರ ಎಚ್ಚರಿಕೆ ನೀಡುತ್ತದೆ ಮತ್ತು ಅವರಿಗೆ ನರಕವಾಸದ ಬೆದರಿಕೆಯನ್ನೊಡ್ಡುತ್ತದೆ.
- ಆದರೆ ಮುಸ್ಲಿಮರ ನಡುವೆ ಕಾನೂನುಬದ್ಧವಾಗಿ ನಡೆಯುವ ಯುದ್ಧಗಳು ಈ ಎಚ್ಚರಿಕೆಯಲ್ಲಿ ಒಳಪಡುವುದಿಲ್ಲ. ಉದಾಹರಣೆಗೆ, ದಂಗೆಕೋರರು ಮತ್ತು ಭ್ರಷ್ಟಾಚಾರಿಗಳ ವಿರುದ್ಧ ನಡೆಸುವ ಯುದ್ಧ.
- ಮಹಾಪಾಪವನ್ನು ಮಾಡಿದರು ಎಂಬ ಕಾರಣಕ್ಕಾಗಿ ಯಾರೂ ಸತ್ಯನಿಷೇಧಿಯಾಗುವುದಿಲ್ಲವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಯುದ್ಧ ಮಾಡುವವರನ್ನು ಮುಸ್ಲಿಮರು ಎಂದು ಕರೆದಿದ್ದಾರೆ.
- ಕೊಲೆ ಸಂಭವಿಸುವ ಯಾವುದೇ ವಿಧಾನದ ಮೂಲಕ—ಅದು ಖಡ್ಗವೇ ಆಗಬೇಕೆಂದಿಲ್ಲ—ಮುಸ್ಲಿಮರಲ್ಲಿ ಒಬ್ಬರು ಇನ್ನೊಬ್ಬರನ್ನು ಎದುರಾದರೆ, ಕೊಲೆಗಾರನು ಮತ್ತು ಕೊಲೆಯಾದವನು ಇಬ್ಬರೂ ನರಕವಾಸಿಗಳಾಗುತ್ತಾರೆ. ಈ ಹದೀಸಿನಲ್ಲಿ ಖಡ್ಗ ಎಂದು ಹೇಳಿದ್ದು ಉದಾಹರಣೆಯಾಗಿ ಮಾತ್ರ.