- ಅನ್ಯಾಯಕ್ಕೊಳಗಾದ ವ್ಯಕ್ತಿ ಕಾನೂನು ಪ್ರಕ್ರಿಯೆಗಳ ಮೂಲಕ ತನ್ನ ಹಕ್ಕನ್ನು ಮರಳಿ ಪಡೆಯಲು ತರ್ಕಿಸುವುದು ಖಂಡನೀಯ ತರ್ಕಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ.
- ತರ್ಕಗಳು ಮತ್ತು ಜಗಳಗಳು ನಾಲಿಗೆಯ ಪಿಡುಗುಗಳಾಗಿದ್ದು, ಮುಸ್ಲಿಮರಲ್ಲಿ ವಿಭಜನೆ ಮತ್ತು ಭಿನ್ನಾಭಿಪ್ರಾಯವನ್ನು ಉಂಟುಮಾಡುತ್ತವೆ.
- ತರ್ಕವು ಸತ್ಯದ ಪರವಾಗಿದ್ದು ಉತ್ತಮ ರೀತಿಯಲ್ಲಿದ್ದರೆ ಅದು ಶ್ಲಾಘನೀಯವಾಗಿದೆ. ಆದರೆ ಅದು ಸತ್ಯವನ್ನು ತಿರಸ್ಕರಿಸಲು ಮತ್ತು ಸುಳ್ಳನ್ನು ಸ್ಥಾಪಿಸಲು ಇರುವುದಾದರೆ, ಅಥವಾ ಅದು ಪುರಾವೆ ಮತ್ತು ಸಾಕ್ಷಿ ರಹಿತವಾಗಿದ್ದರೆ ಅದು ಖಂಡನೀಯವಾಗಿದೆ.