- ಅಲ್ಲಾಹು ಪಾಪವನ್ನು ಮುಚ್ಚಿಟ್ಟ ನಂತರವೂ ಅದನ್ನು ಬಹಿರಂಗಪಡಿಸುವುದು ಹೇಯ ಪ್ರವೃತ್ತಿಯಾಗಿದೆ.
- ಪಾಪವನ್ನು ಬಹಿರಂಗವಾಗಿ ಹೇಳುವುದು ಸತ್ಯವಿಶ್ವಾಸಿಗಳ ನಡುವೆ ನೀಚಕೃತ್ಯಗಳು ಹರಡಲು ಕಾರಣವಾಗುತ್ತದೆ.
- ಅಲ್ಲಾಹು ಯಾರ ಪಾಪಗಳನ್ನು ಇಹಲೋಕದಲ್ಲಿ ಮುಚ್ಚಿಡುತ್ತಾನೋ ಅದನ್ನು ಪರಲೋಕದಲ್ಲೂ ಮುಚ್ಚಿಡುತ್ತಾನೆ. ಇದು ಅಲ್ಲಾಹನಿಗೆ ತನ್ನ ದಾಸರ ಮೇಲಿರುವ ಕರುಣೆಯ ವ್ಯಾಪ್ತಿಯನ್ನು ತೋರಿಸುತ್ತದೆ.
- ಪಾಪದ ಮೂಲಕ ಪರೀಕ್ಷಿಸಲಾದವರು ಅದನ್ನು ಸ್ವಯಂ ಮುಚ್ಚಿಡಬೇಕು ಮತ್ತು ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡಬೇಕು.
- ತಮ್ಮ ಪಾಪಗಳನ್ನು ಉದ್ದೇಶಪೂರ್ವಕ ಬಹಿರಂಗಪಡಿಸಿ ಕ್ಷಮೆ ದೊರೆಯುವ ಅವಕಾಶವನ್ನು ಕಳೆದುಕೊಳ್ಳುವ ಗಂಭೀರ ತಪ್ಪಿನ ಬಗ್ಗೆ ಎಚ್ಚರಿಸಲಾಗಿದೆ.