ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಲ್ಲಾ ಒಳ್ಳೆಯ ಕಾರ...
ಮಾತು ಅಥವಾ ಕ್ರಿಯೆಗಳ ಮೂಲಕ ಮಾಡುವ ಸಹಾಯ ಮತ್ತು ಉಪಕಾರಗಳೆಲ್ಲವೂ ದಾನವಾಗಿದೆ ಮತ್ತು ಅದಕ್ಕೆ ಪ್ರತಿಫಲವಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಉದಯವಾ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಧಾರ್ಮಿಕ ನಿಯಮಗಳನ್ನು ಪಾಲಿಸಲು ಬದ್ಧನಾಗಿರುವ ಪ್ರತಿಯೊಬ್ಬ ಮುಸ್ಲಿಮನಿಗೂ ಅವನ ದೇಹದಲ್...
ಅಬೂ ಬರ್ಝ ಅಸ್ಲಮಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರು...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಈ ಕೆಳಗಿನ ವಿಷಯಗಳ ಬಗ್ಗೆ ಪ್ರಶ್ನಿಸಲಾಗುವ ತನಕ ಜನರಲ್ಲಿ ಯಾರೂ ವ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ವಿಧವೆ ಮತ್ತು ಬಡವರಿಗಾ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಗಂಡನನ್ನು ಕಳಕೊಂಡು ನೋಡಿಕೊಳ್ಳಲು ಯಾರೂ ಇಲ್ಲದ ವಿಧವೆಯ ಮತ್ತು ನಿರ್ಗತಿಕರ ಯೋಗಕ್ಷೇಮ ನ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಅಲ್ಲಾಹನಲ್ಲಿ ಮತ್ತು ಅಂತ್ಯದಿ...
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಅಲ್ಲಾಹನಲ್ಲಿ ಮತ್ತು ತಾನು ಅಲ್ಲಾಹನ ಬಳಿಗೆ ಹಿಂದಿರುಗುವ ಮತ್ತು ತನ್ನ ಕರ್ಮಗಳಿಗೆ ಪ್ರ...
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಲ್ಲಾ ಒಳ್ಳೆಯ ಕಾರ್ಯಗಳು ದಾನವಾಗಿವೆ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ. ಇಬ್ಬರು ಮನುಷ್ಯರ ನಡುವೆ ನ್ಯಾಯ ಪಾಲಿಸುವುದು ದಾನವಾಗಿದೆ. ಒಬ್ಬ ವ್ಯಕ್ತಿಗೆ ಅವನ ಸವಾರಿಯನ್ನೇರಲು ಸಹಾಯ ಮಾಡುವುದು ಅಥವಾ ಅವನ ಸಾಮಾನುಗಳನ್ನು ಎತ್ತಿ ಅದರ ಮೇಲಿಡುವುದು ದಾನವಾಗಿದೆ. ಉತ್ತಮವಾದ ಮಾತು ದಾನವಾಗಿದೆ. ನಮಾಝ್ ನಿರ್ವಹಿಸುವುದಕ್ಕಾಗಿ ಇಡುವ ಪ್ರತಿಯೊಂದು ಹೆಜ್ಜೆಯೂ ದಾನವಾಗಿದೆ. ರಸ್ತೆಯಿಂದ ತೊಂದರೆಗಳನ್ನು ನಿವಾರಿಸುವುದು ದಾನವಾಗಿದೆ."
ಅಬೂ ಬರ್ಝ ಅಸ್ಲಮಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ದಾಸನೊಂದಿಗೆ, ಅವನ ಆಯುಷ್ಯದ ಬಗ್ಗೆ—ಅವನು ಅದನ್ನು ಹೇಗೆ ವ್ಯಯಿಸಿದನೆಂದು, ಅವನ ಜ್ಞಾನದ ಬಗ್ಗೆ—ಅವನು ಅದರ ಪ್ರಕಾರ ಏನು ಕಾರ್ಯವೆಸಗಿದನೆಂದು, ಅವನ ಸಂಪತ್ತಿನ ಬಗ್ಗೆ—ಅವನು ಅದನ್ನು ಎಲ್ಲಿಂದ ಸಂಪಾದಿಸಿದನು ಮತ್ತು ಯಾವುದಕ್ಕೆ ಖರ್ಚು ಮಾಡಿದನೆಂದು, ಮತ್ತು ಅವನ ದೇಹದ ಬಗ್ಗೆ—ಅವನು ಅದನ್ನು ಯಾವುದಕ್ಕಾಗಿ ವಿನಿಯೋಗಿಸಿದನೆಂದು ಕೇಳುವ ತನಕ ಅವನ ಎರಡು ಪಾದಗಳು ಅಲುಗಾಡುವುದಿಲ್ಲ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ವಿಧವೆ ಮತ್ತು ಬಡವರಿಗಾಗಿ ಪರಿಶ್ರಮಪಡುವವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವವರಿಗೆ, ಅಥವಾ ರಾತ್ರಿಯಿಡೀ ನಮಾಝ್ ಮಾಡುವವರು ಮತ್ತು ಹಗಲಿಡೀ ಉಪವಾಸ ಆಚರಿಸುವವರಿಗೆ ಸಮವಾಗಿದ್ದಾರೆ."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ಒಳ್ಳೆಯ ಮಾತನ್ನೇ ಆಡಲಿ ಅಥವಾ ಮೌನವಾಗಿರಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ನೆರೆಮನೆಯವನನ್ನು ಗೌರವಿಸಲಿ. ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವನು ತನ್ನ ಅತಿಥಿಗಳನ್ನು ಗೌರವಿಸಲಿ.”
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಂದಿಗೆ ಹೇಳಿದರು: "ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯಕ್ಕೆ ನಿಷ್ಠರಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸತ್ಯವು ಒಳಿತಿಗೆ ಒಯ್ಯುತ್ತದೆ ಮತ್ತು ಒಳಿತು ಸ್ವರ್ಗಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸತ್ಯವಂತನೆಂದು ದಾಖಲಿಸಲ್ಪಡುವವರೆಗೂ ಸತ್ಯವನ್ನು ಹೇಳುತ್ತಲೇ ಇರುತ್ತಾನೆ ಮತ್ತು ಸತ್ಯಕ್ಕಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ. ಸುಳ್ಳಿನ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ನಿಶ್ಚಯವಾಗಿಯೂ ಸುಳ್ಳು ಕೆಡುಕಿಗೆ ಒಯ್ಯುತ್ತದೆ ಮತ್ತು ಕೆಡುಕು ನರಕಕ್ಕೆ ಒಯ್ಯುತ್ತದೆ. ಒಬ್ಬ ಮನುಷ್ಯನು ಅಲ್ಲಾಹನ ಬಳಿ ಅತ್ಯಂತ ಸುಳ್ಳು ಹೇಳುವವನೆಂದು ದಾಖಲಿಸಲ್ಪಡುವವರೆಗೂ ಸುಳ್ಳು ಹೇಳುತ್ತಲೇ ಇರುತ್ತಾನೆ ಮತ್ತು ಸುಳ್ಳಿಗಾಗಿ ಪರಿಶ್ರಮಿಸುತ್ತಲೇ ಇರುತ್ತಾನೆ."
ಜರೀರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರು ಇತರರಿಗೆ ದಯೆ ತೋರುವುದಿಲ್ಲವೋ ಅವರಿಗೆ ಸರ್ವಶಕ್ತನಾದ ಅಲ್ಲಾಹು ದಯೆ ತೋರುವುದಿಲ್ಲ.”
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್."
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.”
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಸತ್ಯವಿಶ್ವಾಸಿಗಳಾಗುವ ತನಕ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ, ಮತ್ತು ನೀವು ಪರಸ್ಪರ ಪ್ರೀತಿಸುವ ತನಕ ನೀವು ಸತ್ಯವಿಶ್ವಾಸಿಗಳಾಗುವುದಿಲ್ಲ. ನೀವು ಪರಸ್ಪರ ಪ್ರೀತಿಸುವಂತೆ ಮಾಡುವ ಒಂದು ವಿಷಯವನ್ನು ನಾನು ನಿಮಗೆ ತಿಳಿಸಲೇ? ನಿಮ್ಮ ಮಧ್ಯೆ ಸಲಾಮ್ ಹೇಳುವುದನ್ನು ವ್ಯಾಪಕಗೊಳಿಸಿ."