- ಸ್ವರ್ಗ ಪ್ರವೇಶವು ಸತ್ಯವಿಶ್ವಾಸದಿಂದಲ್ಲದೆ ಉಂಟಾಗುವುದಿಲ್ಲ.
- ಮುಸಲ್ಮಾನನು ತನಗಾಗಿ ಪ್ರೀತಿಸುವುದನ್ನು ತನ್ನ ಸಹೋದರನಿಗಾಗಿಯೂ ಪ್ರೀತಿಸುವುದು ಸತ್ಯವಿಶ್ವಾಸದ ಪೂರ್ಣತೆಯಾಗಿದೆ.
- ಮುಸಲ್ಮಾನರ ನಡುವೆ ಸಲಾಂ ಹೇಳುವುದನ್ನು ವ್ಯಾಪಕಗೊಳಿಸುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಅದರಿಂದ ಜನರ ನಡುವೆ ಪ್ರೀತಿ-ವಿಶ್ವಾಸವು ಹರಡುತ್ತದೆ.
- ಮುಸಲ್ಮಾನರಿಗೆ ಮಾತ್ರ ಸಲಾಂ ಹೇಳಬೇಕು. ಏಕೆಂದರೆ, ಪ್ರವಾದಿ(ಸ) ರವರು "ನಿಮ್ಮ ಮಧ್ಯೆ" ಎಂದು ಹೇಳಿದ್ದಾರೆ.
- ಸಂಬಂಧ ಕಡಿಯುವುದು, ದೂರವಾಗುವುದು, ಅಸೂಯೆಪಡುವುದು ಮುಂತಾದವುಗಳು ಸಲಾಂ ಹೇಳುವುದರಿಂದ ನಿವಾರಣೆಯಾಗುತ್ತವೆ.
- ಮುಸಲ್ಮಾನರ ನಡುವೆ ಪ್ರೀತಿಯ ಮಹತ್ವವನ್ನು ಮತ್ತು ಅದು ಸತ್ಯವಿಶ್ವಾಸದ ಸಂಪೂರ್ಣತೆಯಲ್ಲಿ ಸೇರಿದ್ದೆಂದು ತಿಳಿಸಲಾಗಿದೆ.
- ಸಲಾಂ ಹೇಳಬೇಕಾದ ಪೂರ್ಣ ರೂಪ "ಅಸ್ಸಲಾಂ ಅಲೈಕುಂ ವರಹ್ಮತುಲ್ಲಾಹಿ ವಬರಕಾತುಹು" ಎಂದು ಬೇರೆ ಹದೀಸಿನಲ್ಲಿ ಬಂದಿದೆ. "ಅಸ್ಸಲಾಂ ಅಲೈಕುಂ" ಎಂದಷ್ಟೇ ಹೇಳಿದರೂ ಸಾಕು.