- ಮನುಷ್ಯ ಮೂಳೆಗಳ ರಚನೆ ಮತ್ತು ಅವುಗಳ ರಕ್ಷಣೆ ಅಲ್ಲಾಹನ ಅತಿದೊಡ್ಡ ಅನುಗ್ರಹವಾಗಿದೆ. ಆದ್ದರಿಂದ ಈ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಲು ಪ್ರತಿಯೊಂದು ಮೂಳೆಯ ಪರವಾಗಿ ದಾನ ಮಾಡಬೇಕಾದುದು ಅತ್ಯಾವಶ್ಯಕವಾಗಿದೆ.
- ಅನುಗ್ರಹವು ಶಾಶ್ವತವಾಗಿ ಉಳಿಯುವುದಕ್ಕಾಗಿ ಪ್ರತಿದಿನವೂ ಹೊಸದಾಗಿ ಕೃತಜ್ಞತೆ ಸಲ್ಲಿಸುವುದನ್ನು ಪ್ರೋತ್ಸಾಹಿಸಲಾಗಿದೆ.
- ಪ್ರತಿದಿನವೂ ಐಚ್ಛಿಕ ಕರ್ಮಗಳನ್ನು ಮತ್ತು ದಾನ-ಧರ್ಮಗಳನ್ನು ಮುಂದುವರಿಸುವುದನ್ನು ಪ್ರೋತ್ಸಾಹಿಸಲಾಗಿದೆ.
- ಜನರ ನಡುವೆ ಸಂಧಾನ ಮಾಡುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
- ವ್ಯಕ್ತಿ ತನ್ನ ಸಹೋದರನಿಗೆ ಸಹಾಯ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಸಹಾಯ ಮಾಡುವುದು ದಾನವಾಗಿದೆ.
- ಸಾಮೂಹಿಕ ನಮಾಝಿಗೆ ಹಾಜರಾಗುವುದನ್ನು, ಅದಕ್ಕಾಗಿ ನಡೆಯುತ್ತಾ ಸಾಗುವುದನ್ನು ಮತ್ತು ಮಸೀದಿಗಳ ಪರಿಪಾಲನೆ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ.
- ಮುಸಲ್ಮಾನರಿಗೆ ತೊಂದರೆ ಅಥವಾ ಹಾನಿ ಮಾಡುವ ವಸ್ತುಗಳನ್ನು ದೂರವಿಡುವ ಮೂಲಕ ಅವರ ರಸ್ತೆಗಳನ್ನು ಗೌರವಿಸುವುದು ಕಡ್ಡಾಯವಾಗಿದೆ.