/ ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”...

ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”...

ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಂದಿಗೆ ಹೇಳಿದರು: "ಒಳಿತಿನ ಕಾರ್ಯಗಳಲ್ಲಿ ಯಾವುದನ್ನೂ ಕೀಳಾಗಿ ಕಾಣಬೇಡ. ಅದು ನಿನ್ನ ಸಹೋದರನನ್ನು ಮಂದಹಾಸದ ಮುಖದಿಂದ ಭೇಟಿಯಾಗುವುದಾಗಿದ್ದರೂ ಸಹ.”
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒಳಿತಿನ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿದ್ದಾರೆ ಮತ್ತು ಅದರಲ್ಲಿ ಯಾವುದನ್ನೂ ಕೀಳಾಗಿ ಕಾಣಬಾರದು; ಅದೊಂದು ಚಿಕ್ಕ ಸಂಗತಿಯಾಗಿದ್ದರೂ ಸಹ ಎಂದು ಹೇಳಿದ್ದಾರೆ. ಭೇಟಿಯಾಗುವಾಗ ಮುಖದಲ್ಲಿ ಮುಗುಳ್ನಗೆ ಬೀರುವುದು ಒಂದು ಚಿಕ್ಕ ಒಳಿತಿನ ಕಾರ್ಯವಾಗಿದೆ. ಮುಸಲ್ಮಾನರು ಇದರಲ್ಲಿ ಉತ್ಸಾಹ ತೋರಬೇಕು. ಏಕೆಂದರೆ ಇದರಿಂದ ಮುಸಲ್ಮಾನರ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ ಮತ್ತು ಅವರ ಮನಸ್ಸಿಗೆ ಸಂತೋಷವನ್ನು ನೀಡಿದಂತಾಗುತ್ತದೆ.

Hadeeth benefits

  1. ಸತ್ಯವಿಶ್ವಾಸಿಗಳು ಪರಸ್ಪರ ಪ್ರೀತಿಸುವುದರ ಮತ್ತು ಭೇಟಿಯಾಗುವಾಗ ಮುಗುಳ್ನಗೆ ಬೀರುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.
  2. ಇಸ್ಲಾಂ ಧರ್ಮದ ಪರಿಪೂರ್ಣತೆ ಮತ್ತು ಸಮಗ್ರತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಮುಸಲ್ಮಾನರಿಗೆ ಒಳಿತಾಗಿರುವ ಮತ್ತು ಅವರನ್ನು ಒಗ್ಗಟ್ಟಾಗಿಸುವ ಎಲ್ಲವೂ ಈ ಧರ್ಮದಲ್ಲಿದೆ.
  3. ಒಳಿತಿನ ಕಾರ್ಯಗಳನ್ನು ಮಾಡಬೇಕೆಂದು ಈ ಹದೀಸ್ ಒತ್ತಾಯಿಸುತ್ತದೆ. ಅದು ಎಷ್ಟೇ ಚಿಕ್ಕದಾದರೂ ಸಹ.
  4. ಮುಸಲ್ಮಾನರಿಗೆ ಸಂತೋಷವನ್ನುಂಟು ಮಾಡುವುದು ಅಪೇಕ್ಷಣೀಯವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಇದರಿಂದ ಮುಸಲ್ಮಾನರ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ.