- ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುಡು ಎಲ್ಲಾ ಒಳಿತುಗಳ ಮೂಲವಾಗಿದೆ ಮತ್ತು ಅದು ಒಳಿತುಗಳನ್ನು ಮಾಡಲು ಉತ್ತೇಜನ ನೀಡುತ್ತದೆಂದು ಈ ಹದೀಸ್ ತಿಳಿಸುತ್ತದೆ.
- ನಾಲಿಗೆಯ ವಿಪತ್ತುಗಳ ಬಗ್ಗೆ ಈ ಹದೀಸಿನಲ್ಲಿ ಎಚ್ಚರಿಸಲಾಗಿದೆ.
- ಇಸ್ಲಾಂ ಧರ್ಮವು ಅನ್ಯೋನ್ಯತೆ ಮತ್ತು ಉದಾರತೆಯ ಧರ್ಮವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಈ ಲಕ್ಷಣಗಳು ಸತ್ಯವಿಶ್ವಾಸದ ಶಾಖೆಗಳು ಮತ್ತು ಪ್ರಶಂಸನೀಯ ಶಿಷ್ಟಾಚಾರಗಳಲ್ಲಿ ಸೇರಿದ್ದಾಗಿವೆ.
- ಹೆಚ್ಚು ಮಾತನಾಡುವುದು ಅಸಹ್ಯಪಡಲಾದ (ಮಕ್ರೂಹ್) ಅಥವಾ ನಿಷೇಧಿಸಲಾದ (ಹರಾಮ್) ಕೃತ್ಯಗಳನ್ನು ಮಾಡಲು ಕಾರಣವಾಗಬಹುದು. ಸತ್ಕರ್ಮಗಳಲ್ಲದ ಇತರ ವಿಷಯಗಳಲ್ಲಿ ಮೌನವಾಗಿರುವುದೇ ಸುರಕ್ಷತೆಯಾಗಿದೆ.