- ಪರಸ್ಪರ ಸಹಕರಿಸುವುದು, ವಹಿಸಿಕೊಳ್ಳುವುದು ಮತ್ತು ದುರ್ಬಲರ ಅಗತ್ಯಗಳನ್ನು ನೆರವೇರಿಸುವುದನ್ನು ಪ್ರೋತ್ಸಾಹಿಸಲಾಗಿದೆ.
- ಆರಾಧನೆಯು ಎಲ್ಲಾ ಸತ್ಕರ್ಮಗಳನ್ನೂ ಒಳಗೊಳ್ಳುತ್ತದೆ. ವಿಧವೆ ಮತ್ತು ಬಡವರಿಗಾಗಿ ಪರಿಶ್ರಮಪಡುವುದು ಆರಾಧನೆಯಲ್ಲಿ ಒಳಪಡುತ್ತದೆ.
- ಇಬ್ನ್ ಹುಬೈರ ಹೇಳುತ್ತಾರೆ: "ಇದರ ಅರ್ಥವೇನೆಂದರೆ, ಅಲ್ಲಾಹು ಅವರಿಗೆ ಒಂದೇ ಸಲಕ್ಕೆ ಉಪವಾಸ ಆಚರಿಸುವವರ, ನಮಾಝ್ ಮಾಡುವವರ ಮತ್ತು ಯುದ್ಧ ಮಾಡುವವರ ಪ್ರತಿಫಲವನ್ನು ನೀಡುತ್ತಾನೆ. ಏಕೆಂದರೆ, ಅವರು ತಮ್ಮ ಶಕ್ತಿ ಮತ್ತು ಸಂಪತ್ತಿಗೆ ಅನುಸಾರವಾಗಿ ಖರ್ಚು ಮಾಡುತ್ತಾ, ವಿಧವೆಗೆ ಅವಳ ಗಂಡನ ಸ್ಥಾನದಲ್ಲಿ ನಿಂತು ಸೇವೆ ಮಾಡುತ್ತಾರೆ ಮತ್ತು ಸ್ವಯಂ ತಮ್ಮ ಅಗತ್ಯಗಳನ್ನು ನೆರವೇರಿಸಲು ಸಾಧ್ಯವಾಗದ ನಿರ್ಗತಿಕರಿಗೆ ಅವರ ಅಗತ್ಯಗಳನ್ನು ಪೂರೈಸಿಕೊಡುತ್ತಾರೆ. ಆದ್ದರಿಂದ ಅವರಿಂದ ಉಂಟಾಗುವ ಪ್ರಯೋಜನವು ಉಪವಾಸ, ನಮಾಝ್ ಮತ್ತು ಯುದ್ಧಕ್ಕೆ ಸಮವಾಗಿರುತ್ತದೆ.