- ಎಲ್ಲಾ ಜೀವಿಗಳಿಗೂ ದಯೆಯ ಅಗತ್ಯವಿದೆ. ಆದರೆ ಇಲ್ಲಿ ವಿಶೇಷವಾಗಿ ಮನುಷ್ಯರ ಬಗ್ಗೆ ಹೇಳಿದ್ದು ಅವರಿಗೆ ಪ್ರಾಮುಖ್ಯತೆ ನೀಡುವುದಕ್ಕಾಗಿದೆ.
- ಅಲ್ಲಾಹು ದಯಾಳುವಾಗಿದ್ದಾನೆ. ದಯೆ ತೋರುವ ಅವನ ದಾಸರಿಗೆ ಅವನು ದಯೆ ತೋರುತ್ತಾನೆ. ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ.
- ಜನರಿಗೆ ದಯೆ ತೋರುವುದು ಎಂದರೆ ಅವರಿಗೆ ಒಳಿತು ಮಾಡುವುದು, ಅವರಿಗೆ ತೊಂದರೆಯಾಗದಂತೆ ನೋಡುವುದು ಮತ್ತು ಅವರೊಡನೆ ಅತ್ಯುತ್ತಮವಾಗಿ ವ್ಯವಹರಿಸುವುದು.