/ ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ...

ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ."
رواه أبو داود والترمذي وأحمد

ವಿವರಣೆ

ಇತರ ಜನರಿಗೆ ದಯೆ ತೋರುವವರಿಗೆ ಪರಮ ದಯಾಮಯನಾದ ಅಲ್ಲಾಹು ಎಲ್ಲಾ ವಸ್ತುಗಳನ್ನು ಒಳಗೊಳ್ಳುವಷ್ಟು ವಿಶಾಲವಾದ ತನ್ನ ದಯೆಯಿಂದ ದಯೆ ತೋರುತ್ತಾನೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಿದ್ದಾರೆ. ನಂತರ, ಭೂಮಿಯಲ್ಲಿರುವ ಮನುಷ್ಯರು, ಪ್ರಾಣಿಗಳು, ಹಕ್ಕಿಗಳು ಮುಂತಾದ ಎಲ್ಲಾ ಜೀವಿಗಳ ಮೇಲೆ ದಯೆ ತೋರಬೇಕೆಂದು ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸುತ್ತಾರೆ. ಅದಕ್ಕಿರುವ ಪ್ರತಿಫಲವಾಗಿ ಆಕಾಶದಲ್ಲಿರುವ ಅಲ್ಲಾಹು ಅವರಿಗೂ ದಯೆ ತೋರುತ್ತಾನೆ.

Hadeeth benefits

  1. ಇಸ್ಲಾಂ ಧರ್ಮವು ದಯೆಯ ಧರ್ಮವಾಗಿದೆ. ಅದು ಸಂಪೂರ್ಣವಾಗಿ ಅಲ್ಲಾಹನಿಗೆ ವಿಧೇಯತೆ ತೋರುವುದು ಮತ್ತು ಇತರ ಸೃಷ್ಟಿಗಳಿಗೆ ಒಳಿತು ಮಾಡುವುದರ ಮೇಲೆ ಸ್ಥಾಪಿತವಾಗಿದೆ.
  2. ಸರ್ವಶಕ್ತನಾದ ಅಲ್ಲಾಹನನ್ನು ರಹ್ಮತ್ (ದಯೆ) ಎಂಬ ಗುಣದಿಂದ ಬಣ್ಣಿಸಲಾಗಿದೆ. ಅವನು ಪರಮ ದಯಾಳು ಮತ್ತು ಕರುಣಾನಿಧಿಯಾಗಿದ್ದಾನೆ. ಅವನು ತನ್ನ ದಾಸರಿಗೆ ದಯೆ ತೋರುತ್ತಾನೆ.
  3. ಪ್ರತಿಫಲವು ಕರ್ಮಕ್ಕೆ ತಕ್ಕುದಾಗಿರುತ್ತದೆ. ದಯೆ ತೋರುವವರಿಗೆ ಅಲ್ಲಾಹು ದಯೆ ತೋರುತ್ತಾನೆ.