- ಹೃದಯವನ್ನು ಸರಿಪಡಿಸಲು ಮತ್ತು ಅದನ್ನು ಎಲ್ಲಾ ಕೆಟ್ಟ ಗುಣಗಳಿಂದ ಮುಕ್ತಗೊಳಿಸಲು ಕಾಳಜಿ ವಹಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
- ನಿಷ್ಕಳಂಕತೆಯು ಹೃದಯವನ್ನು ಸರಿಪಡಿಸುತ್ತದೆ, ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಣೆಯು ಕರ್ಮಗಳನ್ನು ಸರಿಪಡಿಸುತ್ತದೆ. ಸರ್ವಶಕ್ತನಾದ ಅಲ್ಲಾಹು ಇವೆರಡನ್ನೇ ನೋಡುತ್ತಾನೆ ಮತ್ತು ಪರಿಗಣಿಸುತ್ತಾನೆ.
- ತನ್ನ ಆಸ್ತಿ, ಸೌಂದರ್ಯ, ದೇಹ ಅಥವಾ ಐಹಿಕವಾದ ಯಾವುದೇ ವಸ್ತುವನ್ನು ಕಂಡು ಪುಳಕಿತನಾಗಿ ಮನುಷ್ಯನು ಮೋಸಹೋಗಬಾರದೆಂದು ಈ ಹದೀಸ್ ತಿಳಿಸುತ್ತದೆ.
- ಆಂತರ್ಯವನ್ನು ಸರಿಪಡಿಸದೆ ಕೇವಲ ಬಾಹ್ಯವನ್ನು ಮಾತ್ರ ಸರಿಪಡಿಸಲು ಪ್ರಾಮುಖ್ಯತೆ ನೀಡುವುದನ್ನು ಈ ಹದೀಸ್ ವಿರೋಧಿಸುತ್ತದೆ.