/ ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ಉಪವಾಸ ಆಚರಿಸುವವನ ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವವನ ಪದವಿಯನ್ನು ಪಡೆಯುತ್ತಾನೆ...

ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ಉಪವಾಸ ಆಚರಿಸುವವನ ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವವನ ಪದವಿಯನ್ನು ಪಡೆಯುತ್ತಾನೆ...

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಶ್ಚಯವಾಗಿಯೂ ಒಬ್ಬ ಸತ್ಯವಿಶ್ವಾಸಿ ತನ್ನ ಒಳ್ಳೆಯ ನಡವಳಿಕೆಯಿಂದ, ಉಪವಾಸ ಆಚರಿಸುವವನ ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವವನ ಪದವಿಯನ್ನು ಪಡೆಯುತ್ತಾನೆ."
رواه أبو داود وأحمد

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಉತ್ತಮ ನಡವಳಿಕೆಯು ಹಗಲಿನಲ್ಲಿ ನಿರಂತರವಾಗಿ ಉಪವಾಸ ಆಚರಿಸುವ ಮತ್ತು ರಾತ್ರಿಯಲ್ಲಿ ನಮಾಝ್ ನಿರ್ವಹಿಸುವ ವ್ಯಕ್ತಿಯ ಪದವಿಯನ್ನು ತಲುಪಲು ಅನುವು ಮಾಡಿಕೊಡುತ್ತದೆ. ಉತ್ತಮ ನಡವಳಿಕೆ ಎಂದರೆ ಜನರಿಗೆ ಒಳಿತು ಮಾಡುವುದು, ಒಳ್ಳೆಯ ಮಾತುಗಳನ್ನಾಡುವುದು, ಮಂದಹಾಸ ಬೀರುವುದು, ಜನರಿಗೆ ತೊಂದರೆ ಕೊಡದಿರುವುದು ಮತ್ತು ಜನರಿಂದ ಉಂಟಾಗುವ ತೊಂದರೆಗಳನ್ನು ಸಹಿಸುವುದು.

Hadeeth benefits

  1. ಇಸ್ಲಾಂ ಧರ್ಮವು ನಡವಳಿಕೆಯನ್ನು ಉತ್ತಮಗೊಳಿಸಲು ಮತ್ತು ಪರಿಪೂರ್ಣಗೊಳಿಸಲು ಹೆಚ್ಚಿನ ಕಾಳಜಿ ವಹಿಸುತ್ತದೆಯೆಂದು ಹದೀಸ್ ತಿಳಿಸುತ್ತದೆ.
  2. ಈ ಹದೀಸ್ ಉತ್ತಮ ನಡವಳಿಕೆಯ ಶ್ರೇಷ್ಠತೆಯನ್ನು ಮತ್ತು ಉತ್ತಮ ನಡವಳಿಕೆಯಿಂದಾಗಿ ನಿರಂತರ ಉಪವಾಸ ಆಚರಿಸುವ ಮತ್ತು ರಾತ್ರಿಯಲ್ಲಿ ಸುಸ್ತಾಗದೆ ನಮಾಝ್ ಮಾಡುವ ವ್ಯಕ್ತಿಯ ಪದವಿಯನ್ನು ತಲುಪಬಹುದೆಂದು ತಿಳಿಸುತ್ತದೆ.
  3. ಹಗಲಿನಲ್ಲಿ ಉಪವಾಸ ಆಚರಿಸುವುದು ಮತ್ತು ರಾತ್ರಿಯಲ್ಲಿ ನಮಾಝ್ ಮಾಡುವುದು ಎರಡು ಮಹಾ ಆರಾಧನೆಗಳಾಗಿದ್ದು, ಅವು ಬಹಳ ಕಷ್ಟಕರವಾಗಿವೆ. ಆದರೆ ಉತ್ತಮ ನಡವಳಿಕೆಯ ಮೂಲಕ ಈ ಪದವಿಯನ್ನು ತಲುಪಬಹುದು. ಏಕೆಂದರೆ ಉತ್ತಮವಾಗಿ ವರ್ತಿಸಲು ಬಹಳ ಪರಿಶ್ರಮಪಡಬೇಕಾಗುತ್ತದೆ.