- ಅಲ್ಲಾಹನನ್ನು ಸದಾ ಭಯಪಡುತ್ತಾ ಇರಬೇಕು ಮತ್ತು ಇಹಲೋಕದ ರೂಪ ಮತ್ತು ಅಲಂಕಾರಗಳನ್ನು ಸವಿಯುವುದರಲ್ಲಿ ತಲ್ಲೀನರಾಗಬಾರದೆಂದು ಒತ್ತಿ ಹೇಳಲಾಗಿದೆ.
- ಮಹಿಳೆಯರನ್ನು ನೋಡುವುದು, ಅವರು ಪರಪುರುಷರೊಡನೆ ಮುಕ್ತವಾಗಿ ಬೆರೆಯುವುದನ್ನು ಕಂಡೂ ಅಸಡ್ಡೆ ತೋರುವುದು ಮುಂತಾದ ಮಹಿಳೆಯರಿಂದ ಉಂಟಾಗುವ ಪರೀಕ್ಷೆಗಳ ಬಗ್ಗೆ ಎಚ್ಚರಿಸಲಾಗಿದೆ.
- ಮಹಿಳೆಯರ ಮೂಲಕ ಉಂಟಾಗುವ ಪರೀಕ್ಷೆಯು ಇಹಲೋಕದ ಪರೀಕ್ಷೆಗಳಲ್ಲಿ ಅತಿದೊಡ್ಡದಾಗಿದೆ.
- ಪೂರ್ವ ಸಮುದಾಯಗಳಿಂದ ಪಾಠ ಕಲಿಯಬೇಕಾದ ಮಹತ್ವವನ್ನು ತಿಳಿಸಲಾಗಿದೆ. ಏಕೆಂದರೆ, ಬನೂ ಇಸ್ರಾಈಲರಿಗೆ ಸಂಭವಿಸಿದ್ದು ಇತರರಿಗೂ ಸಂಭವಿಸಬಹುದಾಗಿದೆ.
- ಸ್ತ್ರೀಯರ ಪರೀಕ್ಷೆಗಳೆಂದರೆ, ಅವರು ಪತ್ನಿಯಾಗಿದ್ದರೆ ಗಂಡನಿಗೆ ಅವನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಖರ್ಚು ಮಾಡಲು ಹೇಳುವ ಮೂಲಕ ಅವನು ಧಾರ್ಮಿಕ ವಿಷಯಗಳಿಗೆ ಗಮನಕೊಡದೆ ಇಹಲೋಕದ ಬಗ್ಗೆಯೇ ಆಸಕ್ತನಾಗುವಂತೆ ಮಾಡುವುದು. ಅವರು ಅನ್ಯಸ್ತ್ರೀಯಾಗಿದ್ದರೆ, ಪುರುಷರನ್ನು ಬಲೆಗೆ ಹಾಕಿ ಅವರೊಂದಿಗೆ ಹೊರಡುವ ಮತ್ತು ಬೆರೆಯುವ ಮೂಲಕ ಅವರನ್ನು ಸತ್ಯದಿಂದ ಹಿಮ್ಮೆಟ್ಟಿಸಬಹುದು. ವಿಶೇಷವಾಗಿ, ಅವರು ಹಿಜಾಬ್ ಧರಿಸದ ಮತ್ತು ಸೌಂದರ್ಯ ಪ್ರದರ್ಶನ ಮಾಡುವ ಮಹಿಳೆಯರಾಗಿದ್ದರೆ. ಇದು ಅವರನ್ನು ವ್ಯಭಿಚಾರದ ಹಲವು ಹಂತಗಳಲ್ಲಿ ಬೀಳುವಂತೆ ಮಾಡಬಹುದು. ಆದ್ದರಿಂದ ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿ ರಕ್ಷೆಯನ್ನು ಬೇಡಬೇಕು ಮತ್ತು ಸ್ತ್ರೀಯರ ಪರೀಕ್ಷೆಗಳಿಂದ ಕಾಪಾಡುವಂತೆ ಅವನಲ್ಲಿ ಪ್ರಾರ್ಥಿಸಬೇಕು.