- ಇತರರ ಖಾಸಗಿ ಭಾಗಗಳನ್ನು ನೋಡುವುದು ನಿಷಿದ್ಧವಾಗಿದೆ. ಆದರೆ ಪತಿ-ಪತ್ನಿಯರು ಇದಕ್ಕೆ ಹೊರತಾಗಿದ್ದಾರೆ.
- ಸಮಾಜವು ಶುದ್ಧವಾಗಿರಲು ಮತ್ತು ಅಶ್ಲೀಲತೆಗೆ ಕಾರಣವಾಗುವ ಮಾರ್ಗಗಳನ್ನು ಮುಚ್ಚಿಬಿಡಲು ಇಸ್ಲಾಂ ಧರ್ಮವು ಅತೀವ ಆಸಕ್ತಿ ತೋರಿದೆ.
- ವೈದ್ಯಕೀಯ ಚಿಕಿತ್ಸೆ ಮುಂತಾದ ಅಗತ್ಯ ಸಂದರ್ಭಗಳಲ್ಲಿ ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ಅನುಮತಿಯಿದೆ. ಆದರೆ, ನೋಡುವುದು ಕಾಮಾಸಕ್ತಿಯಿಂದಾಗಿರಬಾರದು.
- ತನ್ನ ಖಾಸಗಿ ಭಾಗಗಳನ್ನು ಮುಚ್ಚಬೇಕು ಮತ್ತು ಇತರರ ಖಾಸಗಿ ಭಾಗಗಳನ್ನು ನೋಡದೆ ದೃಷ್ಟಿಯನ್ನು ತಗ್ಗಿಸಬೇಕು ಎಂದು ಮುಸಲ್ಮಾನನಿಗೆ ಆದೇಶಿಸಲಾಗಿದೆ.
- ಪುರುಷರಿಗೆ ಪುರುಷರ ವಿಷಯದಲ್ಲಿ ಮತ್ತು ಮಹಿಳೆಯರಿಗೆ ಮಹಿಳೆಯರ ವಿಷಯದಲ್ಲಿ ನಿಷೇಧ ಹೇರಲಾಗಿರುವುದು ಏಕೆಂದರೆ, ಅದು ನೋಡುವಂತಾಗಲು ಮತ್ತು ಖಾಸಗಿ ಭಾಗಗಳು ಬಹಿರಂಗವಾಗಲು ಹೆಚ್ಚು ಸಾಧ್ಯತೆಯಿರುವ ಕಾರಣದಿಂದಾಗಿದೆ.