- ನೆರೆಹೊರೆಯವರ ಹಕ್ಕುಗಳ ಮಹತ್ವ ಮತ್ತು ಅವುಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆಯನ್ನು ಈ ಹದೀಸ್ ತಿಳಿಸುತ್ತದೆ.
- ನೆರೆಹೊರೆಯವರ ಹಕ್ಕುಗಳ ಬಗ್ಗೆ ಪದೇ ಪದೇ ಉಪದೇಶ ಮಾಡಲಾಗಿರುವುದು ನೆರೆಹೊರೆಯವರನ್ನು ಗೌರವಿಸುವುದು, ಅವರೊಡನೆ ದಯೆ ಮತ್ತು ಕರುಣೆಯಿಂದ ವರ್ತಿಸುವುದು, ಅವರಿಗೆ ಸಹಾಯ ಮಾಡುವುದು, ಅವರಿಗೆ ಹಾನಿಯಾಗುವುದನ್ನು ತಪ್ಪಿಸುವುದು, ಅವರು ಅನಾರೋಗ್ಯಕ್ಕೆ ಒಳಗಾದರೆ ಭೇಟಿ ಮಾಡುವುದು, ಅವರಿಗೆ ಸಂತೋಷವಾದಾಗ ಅಭಿನಂದಿಸುವುದು ಮತ್ತು ಅವರಿಗೆ ದುಃಖವಾಗುವಾಗ ಸಾಂತ್ವನ ಹೇಳುವುದು ಅತ್ಯಗತ್ಯವೆಂದು ಒತ್ತಿಹೇಳುವುದಕ್ಕಾಗಿದೆ.
- ನೆರೆಹೊರೆಯವರಲ್ಲಿ ಯಾರ ಬಾಗಿಲು ನಮ್ಮ ಬಾಗಿಲಿಗೆ ಹತ್ತಿರವಿದೆಯೋ ಅವರ ಹಕ್ಕುಗಳಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ.
- ಇಸ್ಲಾಂ ಧರ್ಮದ ಪರಿಪೂರ್ಣತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಈ ಧರ್ಮವು ಸಮಾಜ ಸುಧಾರಣೆಗೆ ಅತ್ಯಗತ್ಯವಾದ ನೆರೆಹೊರೆಯವರಿಗೆ ಒಳಿತು ಮಾಡುವುದು ಮತ್ತು ಅವರಿಂದ ಹಾನಿಯನ್ನು ತಪ್ಪಿಸುವುದನ್ನು ಬೋಧಿಸುತ್ತದೆ.