- ಪ್ರಾರಂಭದಲ್ಲಿ ಬಿಸ್ಮಿಲ್ಲಾಹ್ ಹೇಳುವುದು ಆಹಾರ-ಪಾನೀಯ ಸೇವನೆಯ ಶಿಷ್ಟಾಚಾರಗಳಲ್ಲಿ ಒಂದಾಗಿದೆ.
- ಮಕ್ಕಳಿಗೆ ಶಿಷ್ಟಾಚಾರಗಳನ್ನು ಕಲಿಸಿಕೊಡಬೇಕಾದ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ವಿಶೇಷವಾಗಿ ತನ್ನ ಆರೈಕೆಯಲ್ಲಿರುವ ಮಕ್ಕಳಿಗೆ.
- ಮಕ್ಕಳಿಗೆ ಶಿಸ್ತು ಕಲಿಸುವುದರಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರಿದ ಮೃದುತ್ವ ಮತ್ತು ವಿಶಾಲ ಮನೋಭಾವವನ್ನು ತಿಳಿಸಲಾಗಿದೆ.
- ನೇರ ಮುಂದಿರುವ ಭಾಗದಿಂದ ಆಹಾರ ಸೇವಿಸುವುದು ಆಹಾರ-ಪಾನೀಯ ಸೇವನೆಯ ಶಿಷ್ಟಾಚಾರಗಳಲ್ಲಿ ಒಳಪಡುತ್ತದೆ. ಆದರೆ ಪಾತ್ರೆಯಲ್ಲಿ ಅನೇಕ ತರಹದ ತಿಂಡಿಗಳಿದ್ದರೆ, ಬೇರೆ ಬೇರೆ ಭಾಗಗಳಿಂದ ಸೇವಿಸಬಹುದು.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೋಧನೆಗಳಿಗೆ ಸಹಾಬಿಗಳು ತೋರುತ್ತಿದ್ದ ನಿಷ್ಠೆಯನ್ನು ತಿಳಿಸಲಾಗಿದೆ. "ನಂತರ ಇದೇ ನನ್ನ ಆಹಾರ ಸೇವನೆಯ ವಿಧಾನವಾಯಿತು" ಎಂಬ ಉಮರ್ ಬಿನ್ ಅಬೂ ಸಲಮರ ಮಾತು ಇದನ್ನು ಸೂಚಿಸುತ್ತದೆ.