- ಕಡ್ಡಾಯ ನಮಾಝ್‌ಗಳನ್ನು ಮಸೀದಿಗಳಲ್ಲೇ ಸಾಮೂಹಿಕವಾಗಿ ನಿರ್ವಹಿಸುವುದರ ಪ್ರಾಮುಖ್ಯತೆಯನ್ನು, ನಮಾಝ್‌ಗಳ ಬಗ್ಗೆ ಕಾಳಜಿ ವಹಿಸುವುದನ್ನು ಮತ್ತು ಅದರ ಬಗ್ಗೆ ನಿರ್ಲಕ್ಷ್ಯ ಭಾವನೆ ಸಲ್ಲದು ಎಂಬುದನ್ನು ತಿಳಿಸಲಾಗಿದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತ್ಯುತ್ತಮ ಪ್ರಸ್ತುತಿಯನ್ನು ಮತ್ತು ಅವರು ತಮ್ಮ ಸಹಚರರಿಗೆ ನೀಡಿದ ಸ್ಫೂರ್ತಿಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಅವರು ಪ್ರಶ್ನೋತ್ತರ ರೂಪದಲ್ಲಿ ಅತಿದೊಡ್ಡ ಪ್ರತಿಫಲದಿಂದಲೇ ಆರಂಭಿಸಿದ್ದಾರೆ. ಇದು ಬೋಧನಾ ಶೈಲಿಗಳಲ್ಲಿ ಒಂದಾಗಿದೆ.
- ವಿಷಯವನ್ನು ಪ್ರಶ್ನೋತ್ತರ ರೂಪದಲ್ಲಿ ಪ್ರಸ್ತುತಪಡಿಸುವ ಒಂದು ಪ್ರಯೋಜನವೇನೆಂದರೆ, ಸಂಕ್ಷಿಪ್ತವಾಗಿ ಮತ್ತು ವಿಸ್ತಾರವಾಗಿ ಮಾತನಾಡುವ ನಿಯಮದ ಪ್ರಕಾರ, ಇದರಿಂದ ಮಾತುಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
- ನವವಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳಿದರು: "ಅದೇ ರಿಬಾತ್" ಎಂದರೆ, ಅದೇ ಅಪೇಕ್ಷಿತ ರಿಬಾತ್ ಎಂದರ್ಥ. ರಿಬಾತ್‌ನ ಮೂಲ ಅರ್ಥವು ಒಂದು ವಸ್ತುವನ್ನು ಹಿಡಿದಿಡುವುದು. ಅಂದರೆ ಮನಸ್ಸನ್ನು ಈ ಅನುಸರಣಾ ಕರ್ಮಗಳಲ್ಲಿ ಹಿಡಿದಿಡುವುದು. ಜಿಹಾದ್ ಎಂದರೆ ಆತ್ಮದ ವಿರುದ್ಧ ಹೋರಾಡುವುದು ಎಂದು ಹೇಳಲಾಗಿರುವಂತೆ ಇದನ್ನು ಅತಿಶ್ರೇಷ್ಠ ರಿಬಾತ್ ಎಂದು ಹೇಳಲಾಗಿರಬಹುದು. ಇದರ ಅರ್ಥ ಇದು ಸುಲಭಸಾಧ್ಯವಾದ ರಿಬಾತ್ ಆಗಿದೆ ಎಂದಾಗಿರಬಹುದು. ಅಂದರೆ, ಇದು ರಿಬಾತ್‌ನ ಅನೇಕ ವಿಧಗಳಲ್ಲಿ ಒಂದಾಗಿದೆ.
- "ರಿಬಾತ್" ಅನ್ನು ಪುನರಾವರ್ತಿಸಲಾಗಿದೆ ಮತ್ತು 'ಅಲ್' ಸೇರಿಸಿ "ಅರ್‍ರಿಬಾತ್" ಎಂದು ಹೇಳಲಾಗಿದೆ. ಇದು ಈ ಕರ್ಮಗಳನ್ನು ಗೌರವಿಸುವ ಉದ್ದೇಶದಿಂದಾಗಿದೆ.