/ ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಮೃದುತ್ವವಿರುತ್ತದೋ ಅದು ಅದನ್ನು ಅಂದಗೊಳಿಸುತ್ತದೆ; ಮತ್ತು ಯಾವ ವಿಷಯದಿಂದ ಅದನ್ನು ತೆಗೆಯಲಾಗುತ್ತದೋ ಅದು ಅದನ್ನು ಅಂದಗೆಡಿಸುತ್ತದೆ...

ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಮೃದುತ್ವವಿರುತ್ತದೋ ಅದು ಅದನ್ನು ಅಂದಗೊಳಿಸುತ್ತದೆ; ಮತ್ತು ಯಾವ ವಿಷಯದಿಂದ ಅದನ್ನು ತೆಗೆಯಲಾಗುತ್ತದೋ ಅದು ಅದನ್ನು ಅಂದಗೆಡಿಸುತ್ತದೆ...

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಯಾವ ವಿಷಯದಲ್ಲಿ ಮೃದುತ್ವವಿರುತ್ತದೋ ಅದು ಅದನ್ನು ಅಂದಗೊಳಿಸುತ್ತದೆ; ಮತ್ತು ಯಾವ ವಿಷಯದಿಂದ ಅದನ್ನು ತೆಗೆಯಲಾಗುತ್ತದೋ ಅದು ಅದನ್ನು ಅಂದಗೆಡಿಸುತ್ತದೆ."
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಮಾತು ಮತ್ತು ನಡವಳಿಕೆಯಲ್ಲಿ ಮೃದುತ್ವ, ಸೌಮ್ಯಭಾವ ಮತ್ತು ಸಾವಧಾನತೆಯಿದ್ದರೆ ಅದು ಮಾತು ಮತ್ತು ನಡವಳಿಕೆಗಳ ಸೌಂದರ್ಯ, ಪರಿಪೂರ್ಣತೆ ಮತ್ತು ಅಂದವನ್ನು ಹೆಚ್ಚಿಸುತ್ತದೆ ಮತ್ತು ಅವುಗಳಿಂದ ಆ ವ್ಯಕ್ತಿಗೆ ತನಗೆ ಬೇಕಾದುದನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಮೃದುತ್ವದ ಅಭಾವವು ವಿಷಯಗಳನ್ನು ದೋಷಪೂರಿತ ಮತ್ತು ಅಹಿತಕರಗೊಳಿಸುತ್ತದೆ. ಇದರಿಂದ ವ್ಯಕ್ತಿಗೆ ತನಗೆ ಬೇಕಾದುದನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಅವನು ಅದನ್ನು ಪಡೆದರೂ ಬಹಳ ಕಷ್ಟದಿಂದಲೇ ಪಡೆಯುತ್ತಾನೆ.

Hadeeth benefits

  1. ಮೃದುತ್ವದ ಗುಣವನ್ನು ಅಳವಡಿಸಿಕೊಳ್ಳಲು ಈ ಹದೀಸ್ ಪ್ರೋತ್ಸಾಹಿಸುತ್ತದೆ.
  2. ಮೃದುತ್ವವು ವ್ಯಕ್ತಿತ್ವವನ್ನು ಅಂದಗೊಳಿಸುತ್ತದೆ. ಅದು ಇಹಲೋಕ ಮತ್ತು ಪರಲೋಕದ ಎಲ್ಲಾ ಒಳಿತುಗಳಿಗೂ ಕಾರಣವಾಗುತ್ತದೆ.